ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
130
ಮಾರುಮಾಲೆ

ಚಾರಕ, ಮಕರಂದ) ಅದೇ ಧಾಟಿಯಲ್ಲಿ ಮಾತುಗಾರಿಕೆ ರೂಪಿಸುವ ಅವಕಾಶ ನೀಡುವುದಲ್ಲದೆ, ಅದಕ್ಕೆ ಅನುಕೂಲವಾಗಿ ಶಬ್ದಗಳನ್ನು, ಪ್ರಶ್ನೆಗಳನ್ನು, ಮುಂದಿಡಬೇಕಾಗುತ್ತದೆ.

ಹಿಂದೆ ಹೆಚ್ಚಾಗಿ, ಆಡಬೇಕಾದ ಪ್ರಸಂಗದ ಹೆಚ್ಚಿನ ಎಲ್ಲ ಪದ್ಯಗಳನ್ನು ಹಾಡುವುದು ರೂಢಿಯಾಗಿತ್ತು... ಈಗ ಪದ್ಯಗಳನ್ನು ಆಯ್ದು, ಅಳವಡಿಸುವ ಕ್ರಮವಿದೆ. ಪ್ರದರ್ಶನ ಅಚ್ಚುಕಟ್ಟಾಗಲು ಈ ರೀತಿಯ ಸಂಪಾದಿತ', ಪ್ರಸಂಗದ ಪದ್ಧತಿ ಅವಶ್ಯ. - ಹೀಗೆ ಮಾಡುವಾಗ, ಅದು ಒಂದು ಅರ್ಥದಲ್ಲಿ ಪ್ರತ್ಯೇಕವಾದ ಪ್ರಸಂಗವೇ ಆಗುತ್ತದೆ. ಸಂಪಾದಿತ ಪಠ್ಯವೆಂಬುದು ಒಂದು ಸ್ವತಂತ್ರ ಪಠ್ಯವೇ, ಒಂದು ಅರ್ಥದಲ್ಲಿ... ಅದನ್ನು ಹಾಗೆಯೇ ಗ್ರಹಿಸಿ ಅರ್ಥಗಾರಿಕೆಯನ್ನು ಹಾಗೆಯೇ ಸಂಯೋಜಿಸಿಕೊಳ್ಳಬಹುದು. - ಒಂದು ಉದಾಹರಣೆಯನ್ನು ಪರಿಶೀಲಿಸಬಹುದು.

ಕೃಷ್ಣ ಸಂಧಾನ —— ಭೀಷ್ಮಾರ್ಜುನ ಪ್ರಸಂಗಗಳ ಪ್ರದರ್ಶನ ಎಂದಿಟ್ಟು ಕೊಳ್ಳೋಣ.

ಕೃಷ್ಣ—— ದುರ್ಯೋಧನ ಸಂವಾದದ ಕೊನೆಯ ಪದ್ಯ “ಎಲೆ ಮುರಾಂತಕ ಲಾಲಿ .......ವೀಳ್ಯವನಿತ್ತದಚ್ಯುತಗೆ” ಎಂಬುದರ ಅರ್ಥ ಹೇಳಿ ಮುಗಿಸಿ ದಲ್ಲಿಗೆ, ಮುಂದಿನ ಪದ್ಯವಾಗಿ “ಸರಿಯೆನುತ ಕೌರವನು ಪೊರಟು ನಿಶಿಕಾಲದಲಿ ತೆರಳಿದನು ಗಾಂಗೇಯನಿರುವ ಬಳಿಗಾಗಿ” ಎಂಬ ಪದ್ಯವನ್ನು ತೆಗೆದುಕೊಂಡರೆ, ಅರ್ಥದಾರಿ ಕೂಡ, ಆ ಎರಡು ಸಂದರ್ಭಗಳ ನಡುವಿನ ಕತೆಯನ್ನು ಬಿಟ್ಟು ಹೀಗೆ ಎತ್ತಿಕೊಳ್ಳಬಹುದು :

——ನಾನು ನಿರ್ಧರಿಸಿದ್ದಂತೆ ಸಂಧಾನ ಮುರಿದಿದೆ
ಇನ್ನೇನು ? ಯುದ್ಧ ಸಿದ್ಧತೆಗಳಾಗಿವೆ, ಸೇನಾಪತ್ಯಕ್ಕಾಗಿ
ನಮ್ಮ ಅಜ್ಜನನ್ನು ವಿನಂತಿಸಿಕೊಳ್ಳಬೇಕಾಗಿದೆ....
ಸರಿ......(ಸರಿಯೆನುತ ಕೌರವನು ಪೊರಟು...)