ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ
133

ಆವರಣದ ಬಂಧವಿಲ್ಲದಿರುವುದರಿಂದ ಪ್ರಯೋಗಕ್ಕೆ ಹೆಚ್ಚಿನ ಅವಕಾಶವಿದೆ ಎಂದು ಹೇಳಬಹುದಾದರೂ, ಇನ್ನೊಂದು ದೃಷ್ಟಿಯಿಂದ ಅರ್ಥಗಾರಿಕೆಯಲ್ಲಿ ಪ್ರಯೋಗ ಸಾಧ್ಯತೆ ಹೆಚ್ಚು ಎನ್ನಲೂ ಅವಕಾಶವಿದೆ. ಇದಕ್ಕೆ ಕಾರಣಗಳು- ಆಟವು, ಹೆಚ್ಚು ಸಂಪೂರ್ಣವಾದ, ಸಮಗ್ರವಾದ ಮಾಧ್ಯಮ, ಮಾತುಗಾರಿಕೆ ಆ ಸಮಗ್ರ ರೂಪದ ಅಂಗವಾಗಿ ಬಂದಾಗ ಸಶಕ್ತವಾಗುತ್ತದೆ. ಒಂದು ಅರ್ಥದಲ್ಲಿ.

——ಆಟದಲ್ಲಿ, ಕಥೆಯ ವಿವರ ಹೆಚ್ಚು, ದೃಶ್ಯಗಳು ಹೆಚ್ಚು ಒಂದೇ ಪ್ರಸಂಗವನ್ನು, ಆಟ, ತಾಳಮದ್ದಳೆಗಳಿಗೆ ಅಳವಡಿಸುವಾಗ, ಆರಿಸಿಕೊಳ್ಳುವ ಸನ್ನಿವೇಶಗಳಲ್ಲಿ ವ್ಯತ್ಯಾಸವಿದೆ. ಕತೆಯಲ್ಲಿ ಹೆಚ್ಚು ಸನ್ನಿವೇಶಗಳೂ, ಹೆಚ್ಚು ಪಾತ್ರಗಳೂ ದೊರೆತಾಗ, ಮಾತುಗಾರಿಕೆಯ ಮೂಲಕ ಪಾತ್ರ ನಿರ್ಮಾಣಕ್ಕೆ ಅವಕಾಶ ಹೆಚ್ಚು, ಪ್ರಯೋಗಕ್ಕೂ ಸಾಧ್ಯತೆ ಅಧಿಕ.

——ಇಷ್ಟಕ್ಕೂ ಹೆಚ್ಚಾಗಿ, ಆಟದಲ್ಲಿನ ಮಾತುಗಾರಿಕೆಯು, ಚಲನೆ, ಭಂಗಿ, ನಿಲುವುಗಳ ಆಚೆ ಮಿಲಿತವಾಗಿ ರೂಪುಗೊಳ್ಳುವಂತಹದು. ಒಂದೇ ವಾಕ್ಯ, ಪಾತ್ರದ ನಿಲುವು ಭಂಗಿಗಳಿಂದ ಅರ್ಥವ್ಯತ್ಯಾಸ ಪಡೆಯುತ್ತದೆ. 'ಏನು ಹೇಳಿದೆ ?' 'ನೀನೆಯೊ ?' ಎಂಬಂತಹ ಸಾಮಾನ್ಯವಾದ ಪದ ಪುಂಜಗಳು ಕೂಡ ಹೀಗೆ ಅರ್ಥವ್ಯತ್ಯಾಸಕ್ಕೆ ಒದಗಬಹುದು. `ಏನು ಹೇಳಿದೆ ?' ಎಂಬಂದನ್ನು ಇನ್ನೊಂದು ಪಾತ್ರದ ಕಡೆ ಮುಖ ಮಾಡಿ ದೃಷ್ಟಿಸಿ ಹೇಳಿದಾಗ ಮತ್ತು ಪಾತ್ರವನ್ನು ಲಕ್ಷಿಸದೆ, ಪ್ರೇಕ್ಷಕರ ಕಡೆ ನೋಡಿ ಹೇಳಿದಾಗ ಆಗುವ ಅರ್ಥಾಭಿ ವ್ಯಕ್ತಿಯನ್ನು ಗಮನಿಸಬಹುದು. ಇಂತಹ ರೀತಿಯ ಪ್ರಯೋಗಾತ್ಮಕ ಸಾಧ್ಯತೆಯು ತಾಳಮದ್ದಳೆಗೆ ಇಲ್ಲ ಅಥವಾ ಬಹಳ ಮಿತವಾಗಿ ಇದೆ.

ಯಕ್ಷಗಾನದಂತಹ ಕಲೆಗಳಲ್ಲಿ ಮಾತುಗಾರಿಕೆಯ ಭಾಷೆಯು ನಮ್ಮ ಸಮಕಾಲೀನ ನಾಟಕ, ಇತರ ಸಾಹಿತ್ಯಗಳ ಭಾಷೆಗಿಂತ ಸಾಂಪ್ರದಾಯಿಕ