ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
134
ಮಾರುಮಾಲೆ


ವಾಗಿಯೇ ಇರಬೇಕಾಗುತ್ತದೆ. ಎಂದರೆ, ಇಲ್ಲಿ, ಪ್ರಯೋಗದ, ನವೀನ ಎನ್ನ ಬಹುದಾದ ಭಾಷೆಯೂ, ತುಸು ಹಳೆಯತನವನ್ನೆ ಹೊಂದಿರುತ್ತದೆ. ಆದರೂ, ಹಳೆ-ಹೊಸ ಎಂಬುದಕ್ಕೆ ಅವಕಾಶ ಇದ್ದೇ ಇದೆ. ಈ ತರ ಕೆಲ ಗ ಯಕ್ಷಗಾನದ ಪರಂಪರಾಗತ ಅರ್ಥಗಾರಿಕೆಯ ಭಾಷಾಸ್ವರೂಪವು, ತನ್ನ ಆಡಂಬರದಿಂದ, ಪ್ರಸಾತ್ಮಕತೆಯಿಂದ ಶಬ್ದಗಳ ಶಯ್ಕೆಯಿಂದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದುವಂತಹದು. ಸಿದ್ದ ಭಾಷೆಯ ಕೆಲವು ಅನುಕೂಲ ಗಳನ್ನು ಹೊಂದಿದೆ. ಕಲೆಯ ಪರಂಪರೆ ಮುಂದುವರಿದು, ಕಲಾವಿದರ ತಯಾರಿ ಆಗುವುದಕ್ಕೂ ಇದು ಪೋಷಕ ಆದರೆ, ಸಿದ್ಧ ಭಾಷಾಶೈಲಿ, ಸಿದ್ಧ ಕಲ್ಪನೆಗಳು, ಸಂವಹನಕ್ಕೆ ಅಡ್ಡಿಯೂ ಇದೆ, ಅದು ಶಬ್ದಗಳ ರಮ್ಯತೆ ಮಾತ್ರವಾಗಿ, ವಿಷಯವನ್ನು ಮುಚ್ಚಿಹಾಕುತ್ತದೆ. . ಈ ಜಡ್ಡಿನಿಂದ ಹೊರ ಬರುವ ತುಡಿತವುಳ್ಳ ಕಲಾವಿದನು ಭಾಷಾ ಪ್ರಯೋಗವನ್ನು ಸೃಷ್ಟಿಸಲು ಹವಣಿಸುತ್ತಾನೆ. ಭಾಷೆಯ ನೂತನ ಪ್ರಯೋಗವೆಂಬುದು, ಅಭಿವ್ಯಕ್ತಿಯ, ಆಶಯದ ನಾವಿನ್ಯವೂ ಹೌದು. ಆದುದರಿಂದ ಭಾಷಾಶೈಲಿಯ ಪ್ರಯೋಗವು ತಾಂತ್ರಿಕ ಮಾತ್ರವಲ್ಲ, ತಾತ್ವಿಕವೂ ಸಹ ಆಗಿರುತ್ತದೆ. ಇಂತಹ ಹೊಸ ಸೃಷ್ಟಿ ಪುನಃ ಒಂದು ಪರಂಪರೆಯನ್ನು ಸೃಷ್ಟಿಸುತ್ತದೆ. ಆಗ ಪುನಃ ನಾವೀನ್ಯದ ಅಗತ್ಯ ಕಾಣಿಸುತ್ತವೆ.