ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ
141

ಪದ್ಯದ ಶಬ್ದಗಳನ್ನೇ ಬಳಸಿ, ಹೊಸ ಅರ್ಥವನ್ನು ಕಾಣುವ ಯತ್ನದ ಮಾತು ಗಾರಿಕೆ ಇದು (ಶೇಣಿ ಅವರ ವಾಲಿ).
-ಇವು ಕೆಲವು ದೃಷ್ಟಾಂತಗಳು ಮಾತ್ರ. ಇಂತಹ ಸಾಧ್ಯತೆಗಳು ಸಾವಿರಾರು ಇವೆ. `ಕಾವ್ಯಸತ್ಯ'ವನ್ನು, 'ಪುರಾಣಸತ್ಯ'ವನ್ನು ಬಿಡದೆ, ನಾಟಕೀಯತೆಗೆ ಎರವಾಗದೆ, ಹೊಸ ಅರ್ಥವಂತಿಕೆಯನ್ನು ಕಾಣುವ ಯತ್ನ ಕಲಾವಿದನಿಗಿರುವ ಸವಾಲು. ಆಗ, ಪ್ರಸಂಗಗಳ ಪಾತ್ರ ಪ್ರಪಂಚ, ವರ್ತ ಮಾನದ ಕಲಾವಿದನ ಅನುಭವದ ಅಭಿವ್ಯಕ್ತಿಗೆ ಸಾಧನವಾಗಬಲ್ಲುದು.

ಆಟ, ತಾಳಮದ್ದಳೆಗಳಲ್ಲಿ ಸೃಷ್ಟಿಶೀಲ ಮಾತುಗಾರಿಕೆಗೆ, ಅವಕಾಶವಿದೆ ಎಂದು ನೋಡಿದೆವು. ಆದರೂ, ಪ್ರಸಂಗಗಳ ರಚನೆ, ಅದರ ತೀರ ಸರಳೀಕೃತ ಪಾತ್ರ ಸ್ವರೂಪ, ಮಾತುಗಾರನಿಗೆ ದೊಡ್ಡ ಮಿತಿಗಳನ್ನು ಹೇರುತ್ತದೆ. ಮೂಲ ಕಾವ್ಯಗಳ ಮನುಷ್ಯ ಪ್ರಪಂಚ, ಕನ್ನಡ ಕಾವ್ಯಗಳಲ್ಲಿ ಭಕ್ತಿಯ, ದೈವಿಕತೆಯ ಮಹಿಮೆಗೆ ಅಧೀನವಾಗಿದೆ. ಯಕ್ಷಗಾನ ಪ್ರಸಂಗದ ಮಟ್ಟಕ್ಕೆ ಬರುವಾಗ ಇನ್ನೂ ದುರ್ಬಲ, ಪೇಲವವಾಗಿದೆ. ಹೀಗೆ ಕಾವ್ಯ ಕನ್ನಡ ಕಾವ್ಯ→ ಪ್ರಸಂಗ ಹೀಗೆ ವಸ್ತುವಿನ ಅಪಕರ್ಷ ಕಾಣುತ್ತದೆ. ಹೀಗಾಗಿ, ಇರುವ ಪ್ರಸಂಗಗಳ ಅರ್ಥವನ್ನು ಹೇಳುವಾಗ, ಪ್ರತಿಭಾಪೂರ್ಣ ಪ್ರಯೋಗದ ಜತೆಗೆ, ಪ್ರಸಂಗ ಸಾಹಿತ್ಯವೇ ಇನ್ನಷ್ಟು ಶ್ರೀಮಂತವಾಗಬೇಕಾದ ಆವಶ್ಯಕತೆಯಿದೆ. ಮೂಲ ರಾಮಾಯಣ, ಭಾರತ ಕಾಳಿದಾಸನ ಕಾವ್ಯಗಳು-ಇಂತಹವುಗಳ ನ್ನಾಧರಿಸಿ ಪ್ರಸಂಗ ರಚನೆ ಆದರೆ, ಅರ್ಥಗಾರಿಕೆಯಲ್ಲೂ ಹೆಚ್ಚಿನ ಸಂಕೀರ್ಣ ಜೀವನದರ್ಶನದ ಅಭಿವ್ಯಕ್ತಿಗೆ ಅನುವು ದೊರೆಯುತ್ತದೆ.

ತಾಳವುದ್ದಲೆಯ ಕ್ಷೇತ್ರದಲ್ಲಿ, ಕೆಲವೇ ಪ್ರಸಂಗಗಳು ಪುನಃ ಪುನಃ ಬಳಕೆಯಾಗುತ್ತಿರುವುದರಿಂದಲೂ, ಮಾತುಗಾರನ. ಅವಕಾಶವು ಸೀಮಿತ ಗೊಳ್ಳಲು ಕಾರಣವಾಗುತ್ತದೆ. ಉಪಲಬ್ಧವಿರುವ ಹಳೆಯ ಪ್ರಸಂಗಗಳಲ್ಲಿ, ತಾಳಮದ್ದಲೆಗೆ ಹೊಂದಿಕೆಯಾಗುವವು ಹಲವು ಇವೆ (ಉದಾ : ಹಿಡಿಂಬಾ