ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
140
ಮಾರುಮಾಲೆ

ವಿಭೀಷಣ ಪಟ್ಟಾಭಿಷೇಕದ ಸಾಧುತ್ವ-ರಾವಣನಿಗೆ ಬಂದ ರಾಜಕೀಯದ ಇಕ್ಕಟ್ಟು ಇಂತಹ ಹಲವು ನೆಲೆಗಳನ್ನು ಬಹಳ ಪ್ರೌಢವಾದ ಮಟ್ಟದಲ್ಲಿ ಚಿತ್ರಿಸುವುದು ಸಾಧ್ಯವೆಂದು ಶೇಣಿ ಅವರು ತೋರಿಸಿಕೊಟ್ಟಿದ್ದಾರೆ.
3. ಹರಿಶ್ಚಂದ್ರನ ಆಸ್ಥಾನಕ್ಕೆ ವಿಶ್ವಾಮಿತ್ರನು ಬಂದಾಗ, ಆತನನ್ನು ಸ್ವಾಗತಿಸಿ ಹರಿಶ್ಚಂದ್ರ (ಕೆರೆಮನೆ ಶಂಭುಹೆಗಡೆ) ಆಡುವ ಮಾತೊಂದನ್ನು ನೋಡಿ : “ಬದುಕಿನಲ್ಲಿ ಹೊಸತನ್ನು ಕಾಣುವ, ಹೊಸತನ್ನು ಸೃಷ್ಟಿಸಬಲ್ಲವರು ತಾವು. ತಾವು ನಿಂದ ನೆಲದ ಚರಿತ್ರೆಯನ್ನೆ ಬದಲಾಯಿಸಬಲ್ಲವರು, ಬಂದ ಕಾರಣ ಅಪ್ಪಣೆಯಾಗಲಿ" ಇದು ಸೂಚಕವಾದ ಮಾತುಗಾರಿಕೆ, ಮುಂದೆ ನಡೆಯುವುದೂ ಇದೇ. ಇಡಿಯ ಪರಿಸ್ಥಿತಿಯ ಬದಲಾವಣೆ ಇಡಿಯ ಕತೆಯನ್ನು ಹೀಗೆ, ಒಂದು ಮಾತಿನಲ್ಲಿ ಘನೀಕರಿಸಿ ಹೇಳುವ ವಿಧಾನ ತುಂಬ ಮಾರ್ಮಿಕ ವಾದದ್ದು.
4. ಅಂಬೆಯ ಅಗ್ನಿ ಪ್ರವೇಶದ ಸಂದರ್ಭ ಭೀಷ್ಮ (ಕೆರೆಮನೆ ಮಹಾ ಬಲ ಹೆಗಡೆ) ಆಡುವ ಮಾತು “ಬದುಕಿನಲ್ಲಿ ಪಡೆಯಬೇಕಾದುದನ್ನು ಪಡೆಯ ಲಾರದೆ, ಒಂದು ಕಿರಿಯ ಹೆಣ್ಣುಜೀವ ಉರಿದು ದಗ್ಧವಾಗುತ್ತಿರುವುದನ್ನು ಕಂಡೂ ನಾನು ಅಸಹಾಯಕ. ಪರೋಕ್ಷವಾಗಿಯಾದರೂ ಇದಕ್ಕೆ ಕಾರಣನಾದ ನಾನು ತೆರಬೇಕಾದ ಬೆಲೆ ಏನಿರಬಹುದು ?” ಮುಂದೆ ಇದೇ ಅಂಬೆ, ಶಿಖಂಡಿ ಯಾಗಿ ಭೀಷ್ಮನ ಪತನಕ್ಕೆ ಕಾರಣಳಷ್ಟೆ?
5. ಬರಿಯ ತಾಂತ್ರಿಕ ಪ್ರಯೋಗವೊಂದನ್ನು ಗಮನಿಸಿ, ಪಾರ್ತಿ ಸುಬ್ಬನ 'ಪಂಚವಟಿ'ಯಲ್ಲಿ ವಾಲಿಯ ಪ್ರವೇಶದ ಪದ್ಯ ಹೀಗಿದೆ :
ಜಗಳಕಣ್ಣನ ಕರೆಯ । ಲಗಣಿತ ಪರಾಕ್ರಮದಿ
ಹಗರಣಕ್ಕೊದಗಿತ । ಮೃಗೆ ನುಡಿದ ವಾಲಿ ॥
ಎಲಾ “ಈ ಸುಗ್ರೀವ ಅಣ್ಣನನ್ನು ಜಗಳಕ್ಕೆ ಕರೆಯುತ್ತಿರುವನಲ್ಲ. ಅವನಿಗಿದು ಜಗಳವಾಗಿರಬಹುದು, ನನಗಿದು ಬರಿಯ ಹಗರಣ ಮಾತ್ರ”.