ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
154
ಮಾರುಮಾಲೆ

4. ತಮ್ಮ ಪ್ರದರ್ಶನಗಳ ಬಳಿಕ, ಸದಸ್ಯರು ಮತ್ತು ವಿಮರ್ಶಾ ಪ್ರಜ್ಞೆಯುಳ್ಳ ಅನುಭವಿಗಳನ್ನು ಕಲೆಹಾಕಿ ಚರ್ಚೆ ಸಮಾಲೋಚನೆ.
5. ಹಿರಿಯ ವ್ಯವಸಾಯಿ ಕಲಾವಿದರೊಂದಿಗೆ ಅನುಭವ ಸಂಗ್ರಹಕ್ಕಾಗಿ ಸಮಾಲೋಚನೆಗಳು.
6. ಸಮರ್ಥರಾದ ವ್ಯಕ್ತಿಗಳಿಂದ ನಿರ್ದೇಶನಕ್ಕೊಳಪಡಿಸಿದ ಆಟಗಳ ಸಂಯೋಜನೆ. ಹಳೆ ಪ್ರಸಂಗಗಳಿಗೆ ಹೊಸತಾದ ಆಶಯವಿತ್ತು, ಮಂಡಿಸುವ ದೃಷ್ಟಿಯಿಂದ, ರಂಗಪ್ರಯೋಗಗಳ ಬಗೆಗೆ ಚರ್ಚೆ.
7. ಒಂದೊಂದು ಪ್ರಸಂಗವನ್ನು ಇರಿಸಿಕೊಂಡು-ಅದರ ರಂಗ ಪ್ರಯೋಗ, ಅರ್ಥಗಾರಿಕೆಗಳ ಬಗೆಗೆ ಚರ್ಚೆ.
8. ಯಕ್ಷಗಾನವನ್ನು ನೋಡುವ, ವಿಮರ್ಶಿಸುವ ಬಗೆ-ಕುರಿತು ಸಹೃದಯತಾ ಶಿಬಿರಗಳ ಸಂಘಟನೆ.
9. ಯಕ್ಷಗಾನ ರಂಗಕ್ಕೆ ಹೊಂದುವಂತಹ-ಪೌರಾಣಿಕ, ಕಾಲ್ಪನಿಕ, ಕಾವ್ಯಾಧಾರಿತ-ಹೀಗೆ ವಿಭಿನ್ನ ರೀತಿಯ ಪ್ರಸಂಗಗಳ ರಚನೆಗೆ ಪ್ರೋತ್ಸಾಹ.
10. ಲಭ್ಯವಲ್ಲದ ಸಾಂಪ್ರದಾಯಿಕ ಪ್ರಸಂಗಗಳ ಸಂಪಾದಿತ ಪ್ರತಿಗಳ ಪ್ರಕಟಣೆ.
11. ಪರಿಣತ ವ್ಯವಸಾಯಿ, ಹವ್ಯಾಸಿ ಕಲಾವಿದರಿಗೆ ಸನ್ಮಾನ, ನೆರವು.
12. ಯಕ್ಷಗಾನ ರಂಗದ ಹೊರಗಿನ, ಕಲಾಸಕ್ತ, ಸಾಹಿತ್ಯಕ ಸಾಂಸ್ಕೃತಿಕ ತಜ್ಞರೊಂದಿಗೆ ಚರ್ಚಾಗೋಷ್ಠಿಗಳು.

ಇಂತಹ ಕಾಠ್ಯಕ್ರಮಗಳ ಮೂಲಕ ಹವ್ಯಾಸಿ ಕಲಾವಿದರು ತಾವೂ ಬೆಳೆದು, ಈ ರಂಗವನ್ನೂ ಬೆಳೆಸುವ ಕೆಲಸವನ್ನು ಮಾಡಬಹುದಾಗಿದೆ.