ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
3

ಕರಾವಳಿ ಯಕ್ಷಗಾನ-ನೈಸರ್ಗಿಕ ಹಿನ್ನೆಲೆ

—ಇಲ್ಲಿನ ಬದುಕಿನ ಅಂಗಗಳ ಆಕೃತಿ ಭೇದಗಳು, ಪ್ರಕೃತಿಯ ಪ್ರಭಾವ ಸ್ವರೂಪವನ್ನು ಹೊಂದಿಕೊಂಡಿರುತ್ತವೆ ಎಂಬುದನ್ನು ಗಮನಿಸಬೇಕು.
ನಿಸರ್ಗದ ಪ್ರಭಾವಕ್ಕನುಗುಣವಾಗಿ ಜಗತ್ತಿನ ಜನಾಂಗಗಳ ಜೀವನದಲ್ಲಿ ವೈವಿಧ್ಯವೂ, ಏರುಪೇರುಗಳೂ, ಸಾಂಸ್ಕೃತಿಕ ಪ್ರವೃತ್ತಿಗಳೂ, ತಾರತಮ್ಯ ಗಳೂ ಕಂಡುಬರುವುದನ್ನು ವಿಸ್ತರಿಸಬೇಕಿಲ್ಲವಷ್ಟೆ ? ಒಂದೇ ಒಂದು ನದಿ, ಕಾಲುವೆ, ಪರ್ವತ-ಇವು ಒಂದೊಂದು ಪ್ರದೇಶದ ಚರಿತ್ರೆಯಲ್ಲಿ ನಿರ್ಣಾಯಕ ವಾಗಿರುವುದಕ್ಕೂ ದೃಷ್ಟಾಂತಗಳಿವೆ.
ಮಾನವ ಜೀವನವನ್ನು ರೂಪಿಸುವ ವಿವಿಧ ಶಕ್ತಿಗಳಲ್ಲಿ ನಿಸರ್ಗಕ್ಕೆ ಮಹತ್ವವಿರುವುದು, ಅದು ಅತ್ಯಂತ ಮುಖ್ಯವಾದುದು ಎಂಬುದರಿಂದಲ್ಲ. (ಅತಿಮುಖ್ಯ ಯಾವುದು ಎಂಬುದು ಸಂದರ್ಭವನ್ನು ಹೊಂದಿಕೊಂಡಿದೆ, ನಿಸರ್ಗದ ಪ್ರತ್ಯೇಕತೆ ಇರುವುದು, ಅದು ಉಳಿದ ಅಂಶಗಳಾದ ಮತಧರ್ಮ, ಆರ್ಥಿಕ ಸಾಮಾಜಿಕ ರಚನೆ ಮುಂತಾದವುಗಳಂತೆ ಅಲ್ಲ. ಎಂದರೆ ಭಿನ್ನ ಎರಡು ಅರ್ಥಗಳಲ್ಲಿ, ಒಂದು : ಅದು ಉಳಿದ ಅಂಶಗಳಂತೆ ಮಾನವ ನಿರ್ಮಿತವಲ್ಲ. ಅಥವಾ ಅಷ್ಟಾಗಿ ಅಲ್ಲ. ಎರಡು : ಅದು ಉಳಿದ ಅಂಶಗಳಿ ಗಿಂತ ಹೆಚ್ಚು ಸ್ವತಂತ್ರ ಮತ್ತು ಸ್ಥಿರ.ಅದರಲ್ಲಿನ ಪರಿವರ್ತನೆಯು ದೀರ್ಘ ಕಾಲಾಂತರದ್ದು - ಸ್ವತಂತ್ರ ಎಂದರೆ ಅದಕ್ಕೆ, ತಾನಾಗಿ ಅಸ್ತಿತ್ವವೂ, ಶಕ್ತಿಯೂ ಇದೆ. ಮತ್ತು ಅದು ಮಾನವನನ್ನೊಳಗೊಂಡು ಉಳಿದ ಅಂಶಗಳಿಗೆ ಜನಕ ಸ್ಥಾನದಲ್ಲಿದೆ. ಉತ್ಪಾದಕವಾಗಿದೆ, ಆಶ್ರಯವೂ ಆಗಿದೆ. ಹೀಗೆ ಜೀವನಾಧಾರ ವಾಗಿ, ಜೀವನಕಾರಕವೂ (ಕೆಲವೊಮ್ಮೆ ಮಾರಕವೂ) ಆಗಿ ಅದು ಮಾನವ ಜಗತ್ತನ್ನು, ಅದರ ಸಾಂಸ್ಕೃತಿಕ ಮುಖವನ್ನು ರೂಪಿಸುವ ರೀತಿಯನ್ನು ಅಭ್ಯಸಿಸುವುದು ಫಲಪ್ರದವೂ, ಕುತೂಹಲಕರವೂ ಆದ ವಿಷಯ. ಇದನ್ನು ಪ್ರಕೃತಿ-ಸಾಂಸ್ಕೃತಿಕ ಅಧ್ಯಯನ ("Naturo-cultural) ಯಾ ಕ್ಷಿತಿ- ಸಾಂಸ್ಕೃತಿಕ (Geo-cultural) ಅಧ್ಯಯನ ಎನ್ನಬಹುದೋ ಏನೋ. ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಕೃತಿ ವಹಿಸುವ ಪಾತ್ರವನ್ನು ಇತರ ಅಂಶ