ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
4
ಮಾರುಮಾಲೆ

ಗಳೊಡನೆಯ, ಅಥವಾ ಏಕದೇಶ ನ್ಯಾಯದಿಂದ, ಪ್ರತ್ಯೇಕವಾಗಿಯೂ ಗ್ರಹಿಸಬಹುದಾಗಿದೆ.

ಈ ನಿಟ್ಟಿನಲ್ಲಿ ಮಾನವ-ಪ್ರಕೃತಿ ಸಂಬಂಧದಲ್ಲಿ ರೂಪುಗೊಳ್ಳುವ ಸಾಂಸ್ಕೃತಿಕ ಜೀವನದ ಒಂದು ಮುಖ್ಯ ಅಂಶವಾದ ಕಲೆಯನ್ನು ಗ್ರಹಿಸಿದ್ದಾದರೆ, ಮೊದಲಾಗಿ ಗಣಿಸಬೇಕಾಗಿರುವುದು ಮಾನವ ಸಮುದಾಯ ಮತ್ತು ಪ್ರಕೃತಿಗಳ ಸಂಬಂಧ ಮತ್ತು ಸಂಘಟನೆ (Interaction) ಗಳಿಂದ ಕಲೆ ರೂಪುಗೊಳ್ಳುವ ಪ್ರಕೃತಿಯನ್ನು, ಇಂತಹ ಮಾನವ ಪ್ರಕೃತಿಗಳ ಸಂವಾದಾತ್ಮಕ ಮಿಲನದಲ್ಲಿ ಪ್ರಕೃತಿಯ ಎಲ್ಲ ಅಂಶವೇನೂ ಕಲೆಯಾಗಿ ಒಳಗೊಳ್ಳುವುದಿಲ್ಲ, ಜೀವನದ ಸಕಲಾಂಗಗಳೂ ಅಲ್ಲಿ ನೇರವಾಗಿಬರುವುದಿಲ್ಲ. ಅಂಶಸಃ ಅವು ಸಂಧಿಸುತ್ತವೆ. ಮತ್ತು ಸಮಾಜ-ಪ್ರಕೃತಿ ಇವೆರಡರಲ್ಲಿ ಯಾವುದು ಬದಲಾದರೂ ಕಲೆಯ ಸ್ವರೂಪ ಭಿನ್ನವಾಗುತ್ತದೆ. ಅಂದರೆ ಹೀಗೆ :

ಈ ಅರ್ಥದಲ್ಲಿ ಕಲೆಯು ಪ್ರಕೃತಿಯ ಉತ್ಪನ್ನ, ಪ್ರಕೃತಿಯ ಸ್ವರೂಪ ಸ್ವಭಾವಗಳು, ಗತಿಸ್ವರೂಪಗಳು, ವೈವಿಧ್ಯ ವರ್ಣಗಳು, ಕಲೆಯ ಮೇಲೆ ತಮ್ಮ ಮುದ್ರೆಯನ್ನು ಒತ್ತುತ್ತವೆ. ಕಲೆಯೊಂದು ಹುಟ್ಟಿಬೆಳೆದ ಪರಿಸರ