ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರಾವಳಿ ಯಕ್ಷಗಾನ-ನೈಸರ್ಗಿಕ ಹಿನ್ನೆಲೆ
5




ಪ್ರಾಕೃತಿಕ ಸನ್ನಿವೇಶಗಳಿಗೂ, ಕಲೆಯ ಅಂತರಂಗ-ಬಹಿರಂಗ ರೂಪಕ್ಕೂ ಸಂಬಂಧವಿರುವುದನ್ನು ಸೂಕ್ಷ್ಮಾವಲೋಕನದಿಂದ ಗುರುತಿಸಬಹುದಾಗಿದೆ.


ಪ್ರಾಯಶಃ ಪ್ರಕೃತಿಯಲ್ಲಿ ವೈವಿಧ್ಯ ತೀವ್ರತೆಗಳಿಲ್ಲದಕಡೆಯ ನೃತ್ಯಾದಿ ಕಲೆಗಳು ಕೂಡ ಸರಳ ಸೌಮ್ಯವೇ ಆಗಿರಬಹುದು. ಗುಡ್ಡ ಬೆಟ್ಟ ಕಣಿವೆಗಳ ಕಲೆಗಳಲ್ಲಿ ಆ ಆ ವಿಷಯಗಳು ಕಲಾರೂಪವಾಗಿ ಪಡಿಮೂಡಿದುದನ್ನು ಕಾಣ ಬಹುದು.

ಪ್ರಕೃತಿಯು ಹೀಗೆ ಪ್ರಬಲ ಶಕ್ತಿಯಾಗಿದ್ದರೂ, ಅದು ಒಂದೇ ಮಾನವ ಜೀವಿತದ ವಿಭಿನ್ನ ಮುಖಗಳನ್ನು ರೂಪಿಸುವುದಲ್ಲ. ನಿಸರ್ಗವು ಉಳಿದ ಅಂಶಗಳೊಂದಿಗೆ ಒಟ್ಟಾಗಿ ಸಮ್ಮಿಲಿತವಾಗಿ, ಒಂದು ಸಂಕೀರ್ಣವಾದ ಸಂಘಟ್ಟನ ಪ್ರಕ್ರಿಯೆಯಲ್ಲಿ ಕಲೆಯನ್ನು, ಇನ್ನಿತರ 'ಸಂಯುಕ್ತ ಫಲಿತ'ಗಳನ್ನೂ ಕೊಡುತ್ತದೆ. ಕಾಲ, ದೇಶ, ನಿಸರ್ಗ ಮತ್ತು ಆರ್ಥಿಕ ಸಾಮಾಜಿಕಗಳೆಂಬ ನಾಲ್ಕು ಅಂಶಗಳನ್ನು ನಾಲ್ಕು ಶಕ್ತಿಗಳಾಗಿ ಗ್ರಹಿಸಿದಾಗ (ಬೇರೆ ಮೂರು ಅಂಶಗಳೊಂದಿಗೂ ನಿಸರ್ಗವನ್ನು ಅಳವಡಿಸಬಹುದು) ಪ್ರಕೃತಿಯ ಹಂತಗಳು ವಿಭಿನ್ನವಾಗಿ ಹೀಗಾಗುತ್ತವೆ. ಸರಳ ಪ್ರಕ್ರಿಯೆಯಾಗಿ :