ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
156
ಮಾರುಮಾಲೆ

ತಿರುವ ಕಲಾವಿದನಿಗೆ ಇಲ್ಲ, ಎಂಬುದು ಆ ಕಲಾರೂಪದ್ದೆ ಒಂದು ಅಂಶ ಅಷ್ಟೇ. ಹಾಗೆಯೇ ಆ ಕಲೆ ಅರ್ಥವಾಗುವುದು ಕೂಡಾ ಆ ಕಲೆಯ ಸಂಪ್ರದಾಯ ಏನು, ಅದರಲ್ಲಿ ಭಾವಾಭಿವ್ಯಕ್ತಿಯ ವಿಧಾನ ಹೇಗೆ ಎಂಬುದರ ಪರಿಚಯ-ಅರ್ಥಾತ್ ಆ ಕಲೆಯ ಭಾಷೆ-ತಿಳಿದವರಿಗೆ ಮಾತ್ರ. ಕೆಲವು ಬಾರಿ “ಶೈಲಿಯೇ ಆ ಕಲೆ” ಎಂಬಷ್ಟು ಕಲೆ ಮತ್ತು ಶೈಲಿಗಳು ಏಕೀಭವಿಸಿರುತ್ತವೆ.

ಯಕ್ಷಗಾನವು ಇಂತಹ ಒಂದು ಬಲಿಷ್ಟವಾದ ಪರಂಪರೆ, ಸಶಕ್ತವಾದ ಶೈಲಿಯನ್ನು ಹೊಂದಿರುವ ಕಲೆ. ಇಂತಹ ಕಲೆಯಲ್ಲಿ ಪ್ರಯೋಗವೆಂದರೆ ಅದು ಪರಂಪರೆಯನ್ನು ಆಧರಿಸಿದ, ಒಂದು ರೀತಿಯಿಂದ ಅದರ ಮುಂದು ವರಿಕೆಯೇ ಆದ, ಆದರೂ ನಾವೀನ್ಯವುಳ್ಳ ಸೃಷ್ಟಿ ಕಲೆಯ ಶೈಲಿಯ ಸರಿಯಾದ ಗ್ರಹಿಕೆ, ಪರಂಪರೆಯ ಸೂಕ್ತವಾದ ತಿಳಿವಳಿಕೆ ಇರುವವನಿಗಷ್ಟೇ ಇಲ್ಲಿ ಪ್ರಯೋಗದ ಹಕ್ಕು, ಅಂಥವನು ಮಾಡಿದುದೇ ಪ್ರಯೋಗ ಉಳಿದುದಲ್ಲ.

ನವೀನ ಪ್ರಯೋಗದ ಆವಶ್ಯಕತೆ ಬರಲು ಕಾರಣಗಳು ಇವು :
1. ಕಲೆಯ ಪರಂಪರೆಯಲ್ಲಿರುವ ದೋಷಗಳನ್ನು ತಿದ್ದುವ,
ಅಸಂಬದ್ಧತೆಗಳನ್ನು ನಿವಾರಿಸುವ ಉದ್ದೇಶ.
2. ಕಲೆಯ ಸಂಪ್ರದಾಯಬದ್ಧ ಶೈಲಿ, ಅಭಿವ್ಯಕ್ತಿಗೆ ಸಾಲದು,
ಅದನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕೆಂಬ ದೃಷ್ಟಿ,
3. ಬದಲಾದ ಸಾಮಾಜಿಕ ಸನ್ನಿವೇಶದಿಂದ ಬಂದಿರುವ ಒತ್ತಡಗಳು-
ಸಾಮಾಜಿಕ ಅಭಿರುಚಿಯಲ್ಲಾದ ಪರಿವರ್ತನೆ, ಸೌಕಯ್ಯ ದೃಷ್ಟಿ
ಇತ್ಯಾದಿ.
4. ನಾವೀನ್ಯಕ್ಕಾಗಿಯೇ ನಾವೀನ್ಯ-ಹೀಗೆ ಮಾಡಿದರೆ ಹೇಗೆ ಎಂಬ
ಯೋಚನೆ, ಅನ್ಯ ಮಾಧ್ಯಮಗಳ ಪ್ರಭಾವ ಅಳವಡಿಕೆ.

ಹೀಗೆ ಮಾಡಲಾದ ಪ್ರಯೋಗವು, ಆ ಕಲೆಯೊಂದಿಗೆ ಹೊಂದಿಕೊಂಡು ಅದರ ಭಾಗವಾಗಿ ಕಾಣಬೇಕು, ಹೊರತು, “ಇದೊಂದು ಏನೋ ಬೇರೆ”