ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
160
ಮಾರುಮಾಲೆ

ಒಂದು ಮುಖ್ಯ ಮಾಧ್ಯಮ. ಆದರೆ, ಅನುಕರಣದಷ್ಟು ಪೂರ್ಣಾರ್ಥದಲ್ಲಿ ಕಲೆಯಲ್ಲ. ಕಲೆಯಲ್ಲಿ ಸ್ವಾನುಭವ ಪೂರ್ವಕ ಸೃಷ್ಟಿಕಾರ್ಯ ಮುಖ್ಯ, ಅನುಕರಣಶೀಲ ಕಲಾವಿದ, ಒಮ್ಮೆ ಹಾಗೆ ಮುಂದಾದಾಗ, ಮತ್ತೆ ಬದಲಾಗಲು ಅವನಿಗೆ ಕಷ್ಟ. ಅನುಕರಣಾತ್ಮಕ ಪುನರಾವೃತ್ತಿ ಸುಲಭದ ದಾರಿಯೂ ಆಗುತ್ತದೆ. ಹೀಗಾಗಿ ಅನುಕರಣವು ಒಂದು ಕಲೆ, ಆದರೆ ಕಲೆಯು ಅನುಕರಣವಷ್ಟೆ ಅಲ್ಲ. ಇಲ್ಲಿ ಫೋಟೋಗ್ರಫಿಯ ಉದಾಹರಣೆ ನೀಡಬಹುದು. ಫೋಟೋಗ್ರಫಿ ಎಂಬುದು ಒಂದು ಕಲೆ, ಆದರೆ ಕಲೆ ಎಂಬುದು ಫೋಟೋಗ್ರಫಿ ಅಲ್ಲ. ಆದರೆ ಸಾಮಾನ್ಯವಾಗಿ ಅನುಕರಣ ಕೌಶಲವೇ ಹೆಚ್ಚು ಪ್ರಮಾಣದಲ್ಲಿ ಇರುವಂತಹದು. ಇಂತಹ ಕೌಶಲ, ಒಂದು ಹಂತದಲ್ಲಿ ಸ್ಥಗಿತವಾಗಿ, ಬೆಳೆಯದೆ ಹೋಗುತ್ತದೆ. ಮೂಲತಃ ಪ್ರತಿಭಾಸಂಪನ್ನರಾದ ಕಲಾಕಾರರನೇಕರು, ಅನುಕರಣದ ಹವ್ಯಾಸದಿಂದಾಗಿ, ಏರಬೇಕಾದ ಎತ್ತರವನ್ನು ಏರದೆ ಇರುವುದನ್ನು ಕಾಣುತ್ತೇವೆ. ಅನುಕರಣದ ಮಿತಿಯನ್ನು ತಿಳಿದು, ಆ ಹಂತವನ್ನು ದಾಟಬಲ್ಲವನಿಗೆ ಎತ್ತರಕ್ಕೇರಲು ಸಾಧ್ಯ.

ಅನುಸರಣಶೀಲರದು ಇನ್ನೊಂದು ವರ್ಗ, ಇಂತಹ ಕಲಾವಿದರು, ಒಟ್ಟು ಸಂಪ್ರದಾಯವನ್ನು ಗ್ರಹಿಸಿ ಅನುಸರಿಸುವವರು. ಹೀಗಾಗಿ ಯಾವುದೇ ಒಂದು ಮಾದರಿಯ 'ಡೂಪ್ಲಿಕೇಟ್' ಇವರಲ್ಲಿ ಇರುವುದಿಲ್ಲ. ಇಡಿಯ ಪರಂಪರೆಯನ್ನು ತನ್ನ ಒಂದು, ಮತ್ತು ಸಾಮರ್ಥ್ಯದ ಮಟ್ಟದಲ್ಲಿ ಜೀರ್ಣಿಸಿಕೊಂಡು ಅಭಿವ್ಯಕ್ತಿಸುವುದು ಅನುಸರಣಶೀಲನ ಇಲ್ಲ, ಅನುಸರಿಸಲ್ಪಟ್ಟ ಮೂಲದ ವಿಕೃತಿಗಳು ಇರುವುದಿಲ್ಲ. 'ಅನುಕರಣ' ಮಾಡುವವರ ದೊಡ್ಡ ಸೋಲು. ಇರುವುದೇ ಇಲ್ಲಿ. ಸಾಮಾನ್ಯವಾಗಿ 'ಅನುಕರಣ' ಮಾಡುವ ಕಲಾವಿದ ಇನ್ನೊಬ್ಬನ 'ಛಾಯೆ' ಆಗುವ ಯತ್ನದಲ್ಲಿ ಆ ಕಲಾವಿದನ ದೋಷಗಳನ್ನೂ, ಕೆಲವು ಸಲ ಅವನ್ನು ಮಾತ್ರ 'ಪ್ರತಿ' ತೆಗೆಯುತ್ತಾನೆ. ಇದರಿಂದ ಅನುಕರಣೆ ಎಂಬುದು ಅಣಕವಾಗುವುದೂ ಉಂಟು. ಈ ದೋಷ ಅನುಸರಣದಲ್ಲಿ ಇರುವುದಿಲ್ಲ. ಅನುಸರಣಶೀಲನು ಮರಾದಿತವಾದ ಒಂದು ಮಟ್ಟದಲ್ಲಿ ತನ್ನವರೆಗೆ ಹರಿದು ಬಂದ ಕಲೆಯ ಪರಂಪರೆಯ ಪ್ರವಾಹ ಅವಿಚ್ಛಿನ್ನವಾಗಿ ಮುಂದುವರಿಯುವಂತೆ ನೋಡಿಕೊಳ್ಳುತ್ತಾನೆ. ಇವನು ಹೊಸ ಕಲ್ಪನೆಗಳಿಂದ