ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೆಲವು ಸಂಶೋಧನ ಟಿಪ್ಪಣಿಗಳು ಮಾಹಿತಿಗಳು
167

ಮನೆತನ, ಈ ಮನೆತನಕ್ಕೆ ಇನ್ನೂರು ವರ್ಷಗಳಿಂದ ಮಿಕ್ಕಿ ಯಕ್ಷಗಾನದ ನೆಂಟು. ಅದು ಇಂದಿಗೂ ಉಳಿದಿದೆ. ವಲತಃ ಹಾಸ್ಯಗಾರರಾಗಿದ್ದ ಇವರ ಹಿರಿಯರು, ನಂತರ ಎಲ್ಲ ಬಗೆಯ ಕಲಾವಿದರೂ ಈ ಮನೆತನದಲ್ಲಿ ರೂಪು ಗೊಂಡರು. ಕರ್ಕಿ ಮನೆತನವು ಇಂದಿಗೂ, ವೇಷಭೂಷಣ, ಕುಣಿತ ಅಭಿನಯ ಗಳಲ್ಲಿ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡಿದೆ (ಕರ್ಕಿಯ ಶ್ರೀ ಪಿ. ವಿ. ಹಾಸ್ಯಗಾರ, ನಾರಾಯಣ ಹಾಸ್ಯಗಾರ, ಪುಟ್ಟಯ್ಯ ಹಾಸ್ಯಗಾರ, ಕೃಷ್ಣ ಹಾಸ್ಯ ಗಾರರಲ್ಲಿ ಇದನ್ನು ಕಾಣಬಹುದು).

ಇಂತಹದೇ ಇನ್ನೊಂದು ಮನೆತನ ಕುಂದಾಪುರ ಉಪ್ಪಿನ ಕುದುರಿನ ಕಾಮತ್ ಮನೆತನ. ಈ ಮನೆತನಕ್ಕೆ ಮುನ್ನೂರು ವರ್ಷಗಳಿಂದ ಯಕ್ಷಗಾನ ಗೊಂಬೆಯಾಟವನ್ನು ನಡೆಸಿಕೊಂಡು ಬಂದ ಇತಿಹಾಸವಿದೆ. ಈಗ ಶ್ರೀ ಕೊಗ್ಗ ಕಾವಂತರು ಬೊಂಬೆಯಾಟಗಳನ್ನು ಆಡಿ ತೋರಿಸುತ್ತಿರುವ ಪ್ರಸಿದ್ಧ ಕಲಾವಿದ

ಕೆರೆಮನೆ-ಸಾಮಗ ಪದ್ಯಾಣ
ಇದೇ ರೀತಿಯಲ್ಲಿ, ಹೊನ್ನಾವರದ ಕೆರೆಮನೆ ಹೆಗ್ಡೆ ಮನೆತನ, ಉಡುಪಿ ಮಲ್ಪೆಯ ಸಾಮಗ ಮನೆತನ, ಕನ್ಯಾನ ಬಳಿಯ ಪದ್ಯಾಣದ ಭಟ್ಟರ ಮನೆತನ ಗಳು ಒಂದೆರಡು ತಲೆಮಾರುಗಳಲ್ಲಿ ಹಲವು ಉತ್ತಮ ಕಲಾವಿದರನ್ನು ನೀಡಿದ್ದು, ಯಕ್ಷಗಾನದಲ್ಲಿ ಮನೆತನ (ಘರಾಣಿ) ಪರಂಪರೆಗಳು ವಿಸ್ತ್ರತ ಅಭ್ಯಾಸಕ್ಕೆ ಯೋಗ್ಯ ವಿಷಯಗಳಾಗಿವೆ.

ಹರಕೆ ಬಯಲಾಟ : ಗುಂಡಬಾಳ ಮಾದರಿ
ಹರಕೆ ಬಯಲಾಟಗಳ ಮೇಳಗಳಲ್ಲಿ ಉ. ಕನ್ನಡದ ಹೊನ್ನಾವರ ಬಳಿಯ ಗುಂಡಬಾಳ ದೇವಾಲಯದ ಮೇಳದ್ದು ಗಮನಾರ್ಹ ವೈಶಿಷ್ಟ್ಯ, ಅಲ್ಲಿನ ಮೇಳ ಸಂಚಾರಕ್ಕೆ ಹೋಗುವುದಿಲ್ಲ. ಎಲ್ಲ ಹರಕೆ ಆಟಗಳೂ ದೇವಾಲಯದ ಬಳಿಯಲ್ಲಿ ನಡೆಯುತ್ತವೆ. ಹರಕೆ ಹೊತ್ತವರು ಅಲ್ಲಿ ಬಂದು ಆಡಿಸಬೇಕು. ಸುಮಾರು ನೂರೈವತ್ತು ಹರಕೆ ಆಟಗಳು ಜರುಗುತ್ತವೆ. ಹಿಂದೆ, ಬೇರೆಡೆ