ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
166
ಮಾರುಮಾಲೆ

ಜರಗುತ್ತಿತ್ತು. ಕೆಲವೊಮ್ಮೆ ತೆಂಕು, ಬಡಗು ವೇಷಗಳ ಮಿಶ್ರಣದ ಸಂಯುಕ್ತ, ಪ್ರದರ್ಶನವಿತ್ತು, (ಉದಾ : ಸಮುದ್ರಮಥನ ಪ್ರಸಂಗ, ದೇವತೆಗಳ ಪಾತ್ರ ಗಳು ಬಡಗುತಿಟ್ಟು ರಾಕ್ಷಸ ಪಾತ್ರಗಳು ತೆಂಕುತಿಟ್ಟು) ಆ ಮೇಳದ ಭಾಗವತ ರಾಗಿದ್ದವರು ಎರಡೂ ತಿಟ್ಟುಗಳ ಭಾಗವತಿಕೆ ಬಲ್ಲ ಶ್ರೀ ಮರವಂತೆ ನರಸಿಂಹ ದಾಸರು. ಈ ಪ್ರಯೋಗ 1960ರ ದಶಕದಲ್ಲಿ ಆಯಿತು.

O ಆಧುನಿಕ ಗ್ರಂಥಸಂಪಾದನೆಯ ತತ್ವಗಳನ್ನು ಅಳವಡಿಸಿ ಸಂಪಾದಿತ ವಾಗಿ ಪ್ರಕಟಿತವಾದ ಮೊತ್ತಮೊದಲ ಪ್ರಸಂಗ ಸಂಗ್ರಹ-ದಿ| ಕುಕ್ಕಿಲ ಕೃಷ್ಣ ಭಟ್ಟರು ಸಂಪಾದಿಸಿದ ಪಾರ್ತಿಸುಬ್ಬನ ಯಕ್ಷಗಾನಗಳು (1975), ಪ್ರಕಾಶನ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ.

ಅತಿ ಹೆಚ್ಚು ತಿರುಗಾಟಗಳ ವೇಷಧಾರಿ :
O ಯಕ್ಷಗಾನ ವೇಷಧಾರಿಗಳ ಸೇವಾವರ್ಷವನ್ನು ತಿರುಗಾಟ ಎಂದು ಗುರುತಿಸುವುದು ರೂಢಿ, ಸೇವಾವಧಿಯನ್ನು ಇಂತಿಷ್ಟು ತಿರುಗಾಟ-(ಅಂದರೆ ಇಂತಿಷ್ಟು ವರ್ಷಗಳ, ಮೇಳದ ಸಂಚಾರ ಅವಧಿ-ನವಂಬರ್-ಮೇ ಹೀಗೆ ಆರೇಳು ತಿಂಗಳ ಕಾಲ) ಎನ್ನುವರು. ಇಂತಹ ತಿರುಗಾಟಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ನಡೆಸಿದ ವೇಷಧಾರಿ, ಪ್ರಾಯಶಃ ದಿ। ಅಳಕೆ ರಾಮಯ್ಯ ರೈ ಅವರು. ಇವರು 1927 ರಿಂದ 1985ರ ಅವಧಿಯಲ್ಲಿ ನಿರಂತರವಾಗಿ ಐವತ್ತೊಂಭತ್ತು ತಿರುಗಾಟಗಳನ್ನು ನಡೆಸಿದರು. 1927ರಲ್ಲಿ ಇಚ್ಚಂಪಾಡಿಯ (ಕುಂಬಳೆ ಬಳಿ) ಮೇಳದಲ್ಲಿ ಆರಂಭಿಸಿ, 1985ರಲ್ಲಿ ಕಟೀಲು ಮೇಳದಲ್ಲಿ ನಿವೃತ್ತಿ.

ಮನೆತನ ಪರಂಪರೆ-ಎರಡು ದೃಷ್ಟಾಂತಗಳು :
ಕರಾವಳಿಯ ಹಲವು ಮನೆತನಗಳಲ್ಲಿ ಯಕ್ಷಗಾನ ಕಲಾವ್ಯವಸಾಯವು, ಹಲವು ತಲೆಮಾರುಗಳಿಂದ ನಡೆದು ಬಂದಿದೆ. ಅವುಗಳಲ್ಲಿ, ಸಧ್ಯ ತಿಳಿದಿರುವ ಅತಿ ಪ್ರಾಚೀನ ಪರಂಪರೆಯುಳ್ಳ ಮನೆತನಗಳು ಎರಡು ಕಾಣ ಸಿಗುತ್ತಿವೆ. ಒಂದು, ಉತ್ತರ ಕನ್ನಡದ ಹೊನ್ನಾವರ ಬಳಿಯ ಕರ್ಕಿಯ ಹಾಸ್ಯಗಾರರ