ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೆಲವು ಸಂಶೋಧನ ಟಿಪ್ಪಣಿಗಳು ಮಾಹಿತಿಗಳು
165


ಕೊಳ್ಳೂರು (ಸ್ಥಾಪಕರು ದಿ| ಕುರಿಯ ವೆಂಕಟರಮಣ ಭಟ್ಟರು). ಇವರಿಂದಾ ಯಿತು (1930). ಪ್ರದರ್ಶನದ ಡೇರೆ-ಮಡಲಿನಿಂದ ತಡಿಕೆ ಕಟ್ಟಿದ ಆವರಣ. ಪುತ್ತೂರು, ಸುಬ್ರಹ್ಮಣ್ಯಗಳಲ್ಲಿ ಈ ಪ್ರಯೋಗ ಮೊದಲಾಯಿತು. ಅದೇ ಸುಮಾರಿಗೆ ಉತ್ತರ ಕನ್ನಡದಲ್ಲಿ ಇದೇ ಬಗೆಯ ತಟ್ಟಿ ಕಟ್ಟಿದ “ಟೆಂಟು'ಗಳು ಬಳಕೆ ಇದ್ದವು. ಇಂತಹ ಪ್ರದರ್ಶನ ಸಭಾಭವನಗಳ ವ್ಯವಸ್ಥೆ ಮೇಳಗಳದ್ದಾಗಿರಲಿಲ್ಲ. ಕಂಟ್ರಾಕ್ಟ್ರುದಾರರು ಅದನ್ನು ನಿರ್ಮಿಸಿ ಮೇಳ ಗಳನ್ನು ಕರೆಸಿ ಆಟ ಆಡಿಸುತ್ತಿದ್ದರು.

ಇದೇ ಬಗೆಯ ಪ್ರದರ್ಶನಗಳನ್ನು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯ ಕರ್ನಾಟಕ ಯಕ್ಷಗಾನ ನಾಟಕ ಸಭಾ ಇವರೂ ಪ್ರದರ್ಶಿಸಿದ್ದರು (1932).

O ತೆಂಕುತಿಟ್ಟಿನಲ್ಲಿ, ಈಗ ಬಳಕೆಯಲ್ಲಿರುವಂತೆ ಬಟ್ಟೆಯ ಡೇರೆ, ಸ್ವಂತ ಆಸನ ಇತ್ಯಾದಿ ವ್ಯವಸ್ಥೆ ಸಹಿತ, ತಿರುಗಾಟದ ವ್ಯವಸಾಯಿ ಡೇರೆ ಮೇಳದ ಸ್ಥಾಪಕರು ದಿ| ಕಲ್ಲಾಡಿಕೊರಗ ಶೆಟ್ಟರು. ಇವರ ಇರಾ ಸೋಮ ನಾಥೇಶ್ವರ ಮೇಳ 1940ರ ದಶಕದ ಕೊನೆಯ ಭಾಗದಲ್ಲಿ ಮೊದಲ ತಿರುಗಾಟ ನಡೆಸಿತು.

ಬಡಗುತಿಟ್ಟಿನಲ್ಲಿ ಈ ಬಗೆಯ ಪೂರ್ಣಪ್ರಮಾಣದ ಟೆಂಟ್ ಮೇಳವನ್ನು ಸ್ಥಾಪಿಸಿದವರು ನಾಗೋಡಿ ವಿಠಲದಾಸ ಕಾವಂತರು. ಇವರು ಹೊರಡಿಸಿದ ಕೊಲ್ಲೂರು ಮೇಳದ ಮೊದಲ ತಿರುಗಾಟ 1950ರ ಸುಮಾರಿಗೆ.

O ಯಕ್ಷಗಾನ ಪ್ರಸಂಗವನ್ನು ಗೀತರೂಪಕವಾಗಿ (ಎಂದರೆ ಹಾಡು ಗಾರಿಕೆ ಮಾತ್ರ. ವಿವಿಧ ಪಾತ್ರಗಳಿಗೆ ಬೇರೆ ಬೇರೆ ಭಾಗವತರು) ಮೊತ್ತ ಮೊದಲು ಪ್ರಯೋಗಿಸಿದವರು ಡಾ| ಶಿವರಾಮ ಕಾರಂತರು, 1959ರಲ್ಲಿ.

O ಒಂದೇ ಮೇಳದಲ್ಲಿ ತೆಂಕು, ಬಡಗು ತಿಟ್ಟುಗಳ ಕಲಾವಿದರ ತಂಡಗಳನ್ನು ಸಂಘಟಿಸಿ ಪ್ರದರ್ಶನಗಳನ್ನೇರ್ಪಡಿಸುವ ಪ್ರಯೋಗ ಶ್ರೀ ಕೆ. ವಿಠಲಶೆಟ್ಟರು ನಡೆಸಿದ ಪೊಳಲಿ ರಾಜರಾಜೇಶ್ವರೀ ಯಕ್ಷಗಾನ ಸಭಾ ಇಲ್ಲಾಯಿತು. ಅರ್ಧರಾತ್ರಿ ಬಡಗು ಅರ್ಧರಾತ್ರಿ ತೆಂಕುತಿಟ್ಟಿನ ಪ್ರದರ್ಶನ