ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಲವು ಸಂಶೋಧನ ಟಿಪ್ಪಣಿಗಳು ಮಾಹಿತಿಗಳು


ಕೆಲವು ಪ್ರಥಮಗಳು :
O ಈಗ ತಿಳಿದಿರುವ ಮೊತ್ತಮೊದಲ ತುಳು ಯಕ್ಷಗಾನ ಪ್ರಸಂಗ ಬಾಯಾರು ಸಂಪಯ್ಯ ಭಾಗವತ ವಿರಚಿತ ತುಳು ಪಂಚವಟಿ (1887). ಇದು ಪಾರ್ತಿಸುಬ್ಬನ ವಾಲಿಸಂಹಾರ ಪ್ರಸಂಗದ ತುಳು ಅನುವಾದ.

O ತುಳುನಾಡಿನ ವಸ್ತುವನ್ನಾರಿಸಿಕೊಂಡು ಬರೆದ ಮೊದಲ ಪ್ರಸಂಗ ಪಂದ ಬೆಟ್ಟು ವೆಂಕಟರಾಯರ ಕೋಟಿಚನ್ನಯ (1939) ಇದು ಕನ್ನಡದಲ್ಲಿದೆ.

O ಯಕ್ಷಗಾನದ ವಿಮರ್ಶಾಗ್ರಂಥದ ಮೊದಲ ಪ್ರಯತ್ನ ಪುತ್ತೂರು ಬಿ. ರಂಗಪ್ಪಯ್ಯನವರ ಪದ್ಯಗ್ರಂಥ “ಯಕ್ಷಗಾನ ಪರಿಸ್ಥಿತಿ” (1929). ಆರ್ವಾಚೀನ ಪದ್ಧತಿಯಲ್ಲಿ ಯಕ್ಷಗಾನದ ವ್ಯಾಪಕ ವಿಮರ್ಶೆಯ ಮೊದಲ ಗ್ರಂಥ ಡಾ| ಶಿವರಾಮ ಕಾರಂತರ “ಯಕ್ಷಗಾನ ಬಯಲಾಟ” (1957).

O ಯಕ್ಷಗಾನವನ್ನು ಬಳೆಸಿ ಪ್ರಾಯೋಗಿಕ ನೃತ್ಯನಾಟಕದ ಮೊದಲ ಪ್ರಯೋಗ ಡಾ| ಶಿವರಾಮ ಕಾರಂತರ ಕಿನ್ನರ ನೃತ್ಯ (1932) ಪುತ್ತೂರಿನಲ್ಲಿ. ಪ್ರಸಂಗ ಪಂಚವಟಿ ಮತ್ತು ಕೀಚಕವಧೆ.

O ಯಕ್ಷಗಾನದ ಬಗೆಗಿನ ಮೊದಲ ಕಮ್ಮಟ-ಪ್ರಯೋಗ ಮತ್ತು ವಿಮರ್ಶೆ ಚರ್ಚೆಸಹಿತ ಗೋಷ್ಠಿ-ಡಾ| ಕಾರಂತರು ಬ್ರಹ್ಮಾವರದಲ್ಲಿ ಸಂಘಟಿಸಿದ ಭಾಗವತಿಕೆ ಗೋಷ್ಠಿ (1958).

O ಯಕ್ಷಗಾನ ಪ್ರದರ್ಶನಗಳಿಗೆ ಟಿಕೇಟು ಮೂಲಕ ಪ್ರವೇಶ ತೆಂಕು ತಿಟ್ಟಿನಲ್ಲಿ, ಶಂಕರನಾರಾಯಣ ಪ್ರಾಸಾದಿಕ ಯಕ್ಷಗಾನ ನಾಟಕ ಮಂಡಳಿ