ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
8
ಮಾರು ಮಾಲೆ

ಭೂಮಿಯ ಒಳ ಹೊರ ಸ್ವರೂಪಗಳಿಗೂ ನಿಕಟವಾದ ಸಂವಾದವಿದೆ. ಅಬ್ಬರದ ಸಮುದ್ರದ ತೆರೆಗಳು, ಪಶ್ಚಿಮ ಘಟ್ಟಗಳ ಸಾಲು, ಈ ಮಧ್ಯೆ, ಸಾಮಾನ್ಯವಾಗಿ ಈ ಗಾತ್ರದ ಭೂಭಾಗಗಳಲ್ಲಿರುವುದಕ್ಕಿಂತ ಅಧಿಕವಾಗಿರುವ ನದಿಗಳು, ತೊರೆಗಳು, ಇಡೀ ಪ್ರದೇಶದಲ್ಲಿ ಹಬ್ಬಿ ಹರಡಿರುವ ಚಿಕ್ಕ ಪುಟ್ಟ ಗುಡ್ಡಗಳಿಂದ, ತಗ್ಗುಗಳಿಂದ ಕರಾವಳಿಯೆಂಬುದು ಏರುತಗ್ಗುಗಳಿಂದ ವ್ಯಾಪ್ತ ವಾದೊಂದು ಪ್ರದೇಶ. ಬಹಳಷ್ಟು ಮಳೆ ಬರುವ ಈ ಪ್ರದೇಶದಲ್ಲಿ, ಹವಾಮಾನದ ಅತಿರೇಕಗಳು ಇವೆ. ಸೆಕೆಗಾಲದ ಸೆಕೆ ತೀವ್ರ. ಮಳೆಗಾಲವೂ ಕಾರ್ಗಾಲದ ವೈಭವ ಎನ್ನುವಷ್ಟು ಜೋರು. ಚಳಿ ಕಡಿಮೆಯಾದರೂ ಉಳಿದಂತೆ ಹವಾಗುಣದಲ್ಲಿ ಸಾಕಷ್ಟು ಅಸಮಾನ ಸ್ವಭಾವದ ವರ್ಷಮಾನವಿದೆ. ಕೃಷಿಯಲ್ಲ್ಲೂ ಸಾಕಷ್ಟು ವೈವಿಧ್ಯವಿದೆ. ತೆಂಗು, ಕಂಗು, ಬಾಳೆ, ಭತ್ತವಲ್ಲದೆ ಹಲವು ಬೆಳೆಗಳು. ಇಡೀ ಪ್ರದೇಶದಲ್ಲೇ ಸಾಕಷ್ಟು ಕಾಡುಗಳೂ ಇವೆ. ಮಣ್ಣಿನ ಬಣ್ಣ ಹಳದಿ, ಕೆಂಪು, ಒಟ್ಟಿನಲ್ಲಿ ಪ್ರಖರತೆ, ತೀವ್ರತೆ, ನಾದಮಯತೆ ಗಳಿಂದ ಕೂಡಿದ ಬಣ್ಣ ಬೆಡಗುಗಳ ನಿಸರ್ಗ ಕರಾವಳಿಯಲ್ಲಿದೆ. ಈ ಅತಿಗಳ ಮಧ್ಯೆಯೂ ಒಂದು ಸಮತೋಲವೂ, ಸಮೃದ್ಧಿಯೂ ಇವೆ. ಇಂತಹ ಒಂದು ಸಸ್ಯಶ್ಯಾಮಲವಾದ, ಅಬ್ಬರದ, ಏಳುಬೀಳುಗಳ, ತೀವ್ರ ಪ್ರಖರತೆಯ ಒಟ್ಟು ಸ್ವರೂಪದ ಈ ಕರಾವಳಿಯ ಪ್ರಾಕೃತಿಕ ಸ್ವರೂಪಕ್ಕೂ ತೀವ್ರತೆ, ಅಬ್ಬರ, ಬೆಡಗು, ಸಮತೋಲ, ಸೌಂದಯ್ಯಗಳನ್ನು ಗುಣಗಳಾಗಿ ಉಳ್ಳ ಯಕ್ಷಗಾನಕ್ಕೂ ನೇರ ಸಂಬಂಧವುಂಟೆ ? ಹೌದು ಎನ್ನಬೇಕಾಗುತ್ತದೆ. 'ಲಯ' ಎಂಬ ಪದವನ್ನು ಒಂದಿಷ್ಟು ಸಡಿಲಾಗಿ ಬಳಸಿ ಹೇಳುವುದಾದರೆ, ಕರಾವಳಿಯ ಪ್ರಕೃತಿಯ ಲಯಕ್ಕೂ, ಬದುಕಿನ ನಡೆನುಡಿಗಳ ನಡೆಗೂ, ಯಕ್ಷಗಾನದ ರೂಪಕ್ಕೂ ಸಂಬಂಧವಿದೆ. ಇದು ಆಕಸ್ಮಿಕವಲ್ಲ. ಯಕ್ಷಗಾನದ ರೂಪ, ರೂಪಣ, ಮತ್ತು ನಿರೂಪಣ (Form, Formation and expression) ಗಳಲ್ಲಿ ಪ್ರಕೃತಿಯ ಹಿನ್ನೆಲೆ ಸಕ್ರಿಯವಾಗಿ ಕೆಲಸಮಾಡಿದೆ. ಯಕ್ಷಗಾನವು ಕರಾವಳಿಯಲ್ಲಿ ಹುಟ್ಟಿದ್ದೆಂದು, (ಶಿವರಾಮ ಕಾರಂತ : ಯಕ್ಷಗಾನ ಬಯಲಾಟ 1957) ಆಂಧ್ರ ಮೂಲದ್ದೆಂದೂ, (ಕುಕ್ಕಿಲ ಕೃಷ್ಣ ಭಟ್ಟ : 'ರಂಗ ವೈಖರಿ'ಯಲ್ಲಿನ ಲೇಖನ : 1985) ಸಮಗ್ರ ದಾಕ್ಷಿಣಾತ್ಯ ಪ್ರದೇಶದ ಕಲೆಯೊಂದರ ಒಂದು ಕವಲೆಂದೂ, (ಎಂ. ಪ್ರಭಾಕರ ಜೋಶಿ :