ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಹಿಮ್ಮೇಳ
23

ರಿಂದ ಪ್ರೇಕ್ಷಕರ ಮೇಲಾಗುವ ಪರಿಣಾಮವೂ ಮರಳಿ ಹಿಮ್ಮೇಳ ಮುಮ್ಮೇಳ ಗಳ ಮೇಲೆ ಪ್ರತಿಫಲಿಸಬಹುದು. ಈ ಪ್ರತಿಫಲನ ನೇರವಾಗಿ ಅಥವ ಇನ್ನೊಂದು ಉಪಾಧಿಯ ಮೂಲಕವೂ ಆಗಬಹುದು.

ಈ ವಿಚಾರವು ಆಟದಲ್ಲಿ ಹೆಚ್ಚು ಸ್ಪಷ್ಟ ರೂಪದಲ್ಲಿ ಕಾಣಿಸುತ್ತದೆ. ತಾಳಮದ್ದಳೆಯಲ್ಲಿ ಈ ಪ್ರಕ್ರಿಯೆ ಇದ್ದೇ ಇದೆ. ಸಮರ್ಥವಾದ ಹಿಮ್ಮೇಳ ಪ್ರೇಕ್ಷಕನ ಮೇಲೆ, ಸಶಕ್ತಪರಿಣಾಮ ಮಾಡಿದಾಗ, ಆ ಮಟ್ಟದಲ್ಲಿ ಮಾತುಗಾರಿಕೆ (ಯಾ ನೃತ್ಯ ಮುಂತಾದುವು ಮೂಡಿಬಾರದಿದ್ದರೆ, ವಿಸಂಗತಿ ಯೆಂದಾಗುತ್ತದೆ. ಸ್ವತಂತ್ರವಾಗಿ, ಸಮರ್ಪಕವಾಗಿದೆ ಎನ್ನಬಹುದಾಗಿದ್ದ ಮಾತು, ನೃತ್ಯಗಳೂ ಕೂಡ, ಸಶಕ್ತ ಹಿಮ್ಮೇಳದ ಮಟ್ಟಕ್ಕೆ ಬಾರದಿದ್ದರೆ, ಇಂತಹ ಅನುಭವ ಆಗಬಹುದು. ಹಿಮ್ಮೇಳ ಸಮರ್ಥವಾದಷ್ಟು ಪಾತ್ರ ಧಾರಿಗೆ ಅನುಕೂಲವೂ ಹೌದು. ಜತೆಗೇ ಅವನಿಗೊಂದು ಪಂಥಾಹ್ವಾನವೂ ಹೌದು; ಹಾಗಾಗಿ ಅವನ ಹೊಣೆ ಹೆಚ್ಚುತ್ತದೆ.

ನೃತ್ಯಯುಕ್ತವಾದ ರಂಗಭೂಮಿಗೆ ಮುಖ್ಯ ಆಧಾರವಾಗಿ ಇರುವಂತ ಹದು ಲಯ? (ಅರ್ಥಾತ್ ವೇಗ ಅಥವಾ ಗತಿಮಾನ), ಭಾಗವತನ ಹಾಡು ಗಾರಿಕೆ ಯಕ್ಷಗಾನ ಪ್ರದರ್ಶನದ ಲಯವನ್ನು ನಿಯಂತ್ರಿಸುತ್ತದೆ. ಪದ್ಯದ ಸ್ವರೂಪ, ಕಥೆಯ ಘಟ್ಟ, ಸನ್ನಿವೇಶದ ರೀತಿ, ರಂಗದಲ್ಲಿರುವ ಪಾತ್ರಗಳು, ಅಭಿವ್ಯಕ್ತಿಸಬೇಕಾದ ಭಾವ, ಇಷ್ಟನ್ನೆಲ್ಲ ಪರಿಗಣಿಸಿ ಭಾಗವತನು ಪದ್ಯಕ್ಕೆ ಲಯವನ್ನು ಸಂಯೋಜಿಸುತ್ತಾನೆ. ಇಷ್ಟು ಮಾತ್ರವಲ್ಲ ಕೆಲವೊಮ್ಮೆ ಪಾತ್ರ ಧಾರಿಯ ಅಭಿವ್ಯಕ್ತಿ ವಿಧಾನಕ್ಕೆ ಅನುಕೂಲಿಸುವಂತಹ ಲಯವನ್ನು ಅರಸುವ ಎಚ್ಚರವನ್ನೂ ಭಾಗವತನು ವಹಿಸಬೇಕಾಗುತ್ತದೆ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ನೋಡಬಹುದು. ಒಬ್ಬೊಬ್ಬ ಪಾತ್ರಧಾರಿ ಗೊಂದೊಂದು ಲಯವೆಂಬ ವಿಧಾನ, ಸರ್ವತ್ರ ಅಂಗೀಕಾರಾರ್ಹವೂ ಅಲ್ಲ. ಅದರಿಂದ ಇತರ ಅಂಶಗಳಿಗೆ ತೊಡಕು ಬರುವುದೂ ನಿಜ. ಆದರೆ, ಆ ಒಂದು ಅಂಶವೂ ಗಮನಾರ್ಹವಾದದ್ದು ಎಂಬುದು ಇಲ್ಲಿನ ಆಶಯ.

ಕಥಾವಾಹಕವಾಗಿ ಹಿಮ್ಮೇಳದ ಹೊಣೆ ದೊಡ್ಡದು. ಒಟ್ಟು ಕತೆಯು ಸಾಗಬೇಕಾದ ರೀತಿ, ಆಯ್ದುಕೊಂಡ ಕಥಾಭಾಗ ಮತ್ತು ಪಾತ್ರಗಳು, ಅವಧಿ