ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
24
ಮಾರುಮಾಲೆ

ಮತ್ತು ಅದರ ಖಂಡಗಳು, ಪ್ರದರ್ಶನ ಮಾಡಬೇಕಾದ ಪರಿಣಾಮಗಳನ್ನು ಸಮಗ್ರವಾಗಿ ಲಕ್ಷಿಸಿ 'ಪ್ರಸಂಗ'ವನ್ನು ಆಧರಿಸಿ ಕಥಾನಿರ್ವಹಣೆ ಮಾಡುವ ಹೊಣೆ ಭಾಗವತನದು. ಪದ್ಯಗಳ ಆಯ್ಕೆ ಅವನ ಸಾಮರ್ಥ್ಯಕ್ಕೊಂದು ನಿಕಷ, ಪ್ರತಿಯೊಂದು ಪ್ರಸಂಗದ, ಎಲ್ಲ ಪದ್ಯಗಳನ್ನು ಹಾಡಬೇಕೆಂದಿಲ್ಲ; ಹಾಡಿದರೆ ಪ್ರದರ್ಶನ ಯಶಸ್ವಿ ಆಗಲೂ ಅಶಕ್ಯ. ರಂಗವನ್ನೇ ದೃಷ್ಟಿಯಲ್ಲಿ ರಿಸಿ, ಅಡಕವಾಗಿ ರಚಿತವಾದ ಕೆಲವೇ ಪ್ರಸಂಗಗಳನ್ನು ಬಿಟ್ಟರೆ, ಉಳಿದೆಡೆ ಪ್ರಸಂಗ ಸಂಪಾದನ (editing) ಮಾಡಲೇಬೇಕಾಗುತ್ತದೆ. ಕತೆಯ, ಪ್ರದರ್ಶ ನದ ತೂಕ ತಪ್ಪದ ಹಾಗೆ, ಪ್ರಸಂಗದ ಪ್ರಧಾನ ಸೂತ್ರವನ್ನು ಬಿಡದೆ ಈ ಸಂಯೋಜನೆ ಆಗಬೇಕು. ಪದ್ಯಗಳ ಆಯ್ಕೆಯಲ್ಲಿ ಭಾಗವತರ ದೃಷ್ಟಿ ಭೇದ ಕ್ಕನುಸರಿಸಿ ವ್ಯತ್ಯಾಸ ಬರುವುದಿದೆ.10 ತಿಟ್ಟುಗಳಿಗನುಸರಿಸಿ ಸಂಪ್ರದಾಯ ವ್ಯತ್ಯಾಸದಿಂದ, ಆಯ್ಕೆಯಲ್ಲಿ ಭೇದವಿದೆ.11 ಕಥಾಭಾಗದ ಸನ್ನಿವೇಶಗಳ ಸಂಬಂಧ ಕೆಡದ ಹಾಗೆ ಗೊಣಸು (link) ಕೊಡುವ ಪದ್ಯಗಳನ್ನು ಭಾಗವತನೇ ರಚಿಸಿ ಹಾಡುವುದಿದೆ. ರಂಗಭೂಮಿಯ, ರಂಗ ತಂತ್ರಗಳ ಬೆಳವಣಿಗೆಗೂ, ಪ್ರಸಂಗ ರಚನೆಯ ಇತಿಹಾಸಕ್ಕೂ ಸಂಬಂದವಿದೆ. ರಂಗಭೂಮಿಯ ಪರಿವರ್ತನೆಗಳು, ಪ್ರಸಂಗರಚನೆಯಲ್ಲಿ ಕಾಲಕಾಲಕ್ಕೆ ಪ್ರತಿಫಲಿಸಿವೆ.12 ಹಳೆಯ ಪ್ರಸಂಗಗಳಲ್ಲಿ ಒಡ್ಡೋಲಗ, ಪಾತ್ರಗಳ ಪ್ರವೇಶವಾದೊಡನೆ ಆಡುವ ಮಾತು ಮುಂತಾದವು ಗಳಿಗೆ ಪದ್ಯಗಳಿಲ್ಲದಿರಬಹುದು. ಅಂತಹ ಕಡೆಗಳಲ್ಲಿ ಭಾಗವತನು ತಾನು ರಚಿ ಸಿದ ಪದ್ಯಗಳನ್ನು ಹಾಡುವುದುಂಟು.

ಬೇರೆಬೇರೆ ಕವಿಗಳು ಒಂದೇ ಕಥೆಯನ್ನಾಧರಿಸಿ ಪ್ರಸಂಗ ಬರೆದುದಿದೆ. ಉದಾ: ಭೀಷ್ಮಾರ್ಜುನ, ಭೀಷ್ಮಪರ್ವ, ಕೃಷ್ಣಾರ್ಜುನ ಪ್ರಸಂಗಗಳು ಇತ್ಯಾದಿ ಅವುಗಳನ್ನು ಸಂಯೋಜಿಸಿ, ಒಂದೇ ಪ್ರದರ್ಶನಕ್ಕೆ ಅಳವಡಿಸಿ ಹಾಡುವುದಿದೆ.13 ಹಾಗೆಯೇ ಕತೆಯ ಒಂದು ಸನ್ನಿವೇಶಕ್ಕೆ ಹೊಂದುವಂತಿರುವ ಪದ್ಯಗಳನ್ನು, ಇನ್ನೊಂದು ಪ್ರಸಂಗದಿಂದ ತಂದು ಸಂಯೋಜಿಸುವ ಸಂಪ್ರದಾಯವಿದೆ. ಉದಾ: ಪಾರ್ತಿಸುಬ್ಬನ ಅಂಗದ ಸಂಧಾನದ ರಾಮರಾವಣರ ಸಂವಾದದ ಪದ್ಯಗಳನ್ನು (ಭೂವರೇಣ್ಯ ಕೇಳಾದರೆ | ಯಾವ ಕಾರಣಕ್ಕೆ ಮತ್ತೆ | ಕೇವಲ ನಮ್ಮನುಜೆಯ | ನಾಸಿಕವ ಕೊಯ್ದಲ-ಎಂಬಲ್ಲಿಂದ ತೊಡಗುವ ಸಂವಾದ) ಪಂಚವಟಿ ಪ್ರಸಂಗದ ರಾಮು-ಖರಾಸುರ ಸಂವಾದಕ್ಕೆ ಬಳಸುವುದು.14 ಸಂವಾದ