ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಹಿಮ್ಮೇಳ
25

ನಿರತವಾದ ಎರಡು ಪಾತ್ರಗಳಿಗೆ, ಒಂದರಮೇಲೊಂದರಂತೆ ಎರಡೂ ಮೂರೋ ಪದ್ಯಗಳಿದ್ದರೆ, ಅವನ್ನು ಸಂವಾದರೂಪವಾಗಿ ಜೋಡಿಸಿ ಹಾಡುವ ಕ್ರಮವಿದೆ. ಅಂದರೆ ಪಾತ್ರ 'ಅ' ೧, ೨, ೩ ನಂತರ ಪಾತ್ರ 'ಆ' ೧, ೨, ೩ ಹೀಗೆ ಪದ್ಯಗಳಿದ್ದರೆ ೧-೧, ೨-೨, ೩-೩ ಹೀಗೆ ಮಾಡಿ ಹಾಡುವುದು. ಉದಾ: ಕರ್ಣಾರ್ಜುನ ಪ್ರಸಂಗದ ಕೃಷ್ಣ-ಶಲ್ಯ ಸಂವಾದ (ಏನಯ್ಯ ಶಲ್ಯ ಭೂಪ-ಎಂಬಲ್ಲಿಂದ ನಾಲ್ಕು ಪದ್ಯಗಳು), ಪಂಚವಟಿ ಪ್ರಸಂಗದ ಲಕ್ಷ್ಮಣ- ಶೂರ್ಪನಖಾ ಸಂವಾದ (ಕಾಮ ಸನ್ನಿಭ ಮಾತ ಕೇಳು-ಎಂಬಲ್ಲಿಂದ ನಾಲ್ಕು ಪದ್ಯಗಳು). ಇಂತಹ ಸಂದರ್ಭಗಳು. ಇಲ್ಲಿ ಸಂವಾದ ರೂಪದಲ್ಲಿ ಪದ್ಯಗಳನ್ನು ಜೋಡಿಸುವುದರಿಂದ ಪರಿಣಾಮ ಹೆಚ್ಚುತ್ತದೆ.

ಹಾಡುಗಾರಿಕೆಯ ಮೂಲಕ ಪ್ರಸಂಗದ ಆಶಯವನ್ನು ಸ್ಪುಟಗೊಳಿಸುವು ದಷ್ಟೆ ಅಲ್ಲ, ತನ್ನ ಮಂಡನಾವಿಧಾನದ ಮೂಲಕ, ರಾಗ ಭಾವಗಳ ಅಳವಡಿಕೆ ಗಳಿಂದ, ಸಂದರ್ಭಕ್ಕೆ ವಿನೂತನ ಆಶಯವನ್ನು ನೀಡುವ ಕೆಲಸವನ್ನು ಸೃಷ್ಟಿ ಶೀಲನಾದ ಭಾಗವತನು ಮಾಡಬಲ್ಲ, ಮಾಡಬೇಕು. ಪ್ರಸಂಗದ ಹಾಡುಗಳ ಮೂಲಕ ತನ್ನ ಮನಸ್ಸನ್ನು ಅವನು ಹೀಗೆ, ಎಷ್ಟರಮಟ್ಟಿಗೆ ತೋಡಿ ಕೊಳ್ಳಬಲ್ಲನೋ ಅಷ್ಟು ಮಟ್ಟಿಗೆ ಅವನ ಭಾಗವತಿಕೆ ಯಶಸ್ವಿಯಾಗುತ್ತದೆ. ಭಾಗವತನ ಯಶಸ್ಸು ಎಂದರೆ ಬರಿಯ ಸ್ವರ ಮಾಧುರ್ಯದ, ರಾಗ ತಾಳ ಪ್ರಾವೀಣ್ಯದ್ದಲ್ಲ. ಕಥಾಸಂವಹನ, ನಿರ್ದೇಶನಗಳ ಕೆಲಸಗಳು ಅವನಿಗೆ ಅಷ್ಟೆ- (ಏಕೆ ಹೆಚ್ಚು ಕೂಡ)-ಮುಖ್ಯವಾದವುಗಳು. ಪ್ರಸಂಗಕಾರನ ಕೃತಿಯು, ಉತ್ತಮ ಭಾಗವತನ ಕೈಯಲ್ಲಿ ಅವನದೇ ಕೃತಿಯಾಗಿ ಮೂಡಿಬರುತ್ತದೆ.

ಸನ್ನಿವೇಶದ, ಪಾತ್ರಗಳ ಹದವರಿತು, ನಟನಿಗೆ ಸೂಕ್ತವಾದ ಪ್ರೇರಣೆ ಪೋಷಣೆ ನೀಡುವ ಕೆಲಸ ಭಾಗವತ ಹಾಗೂ ಚಂಡೆ ಮದ್ದಳೆಗಾರರದು. ರಾಗ ಗಳ ಸಂಯೋಜನೆ, ಬಡಿತದ ಆಯ ತೂಕಗಳು, ಪದ್ಯದ ಬಂಧದ ಸ್ವರೂ ಪಕ್ಕೂ ಹಾಡುಗಾರಿಕೆಗೂ ಇರುವ ಸಂಬಂಧ ಮುಂತಾದ ಸೂಕ್ಷ್ಮವಾದ ಸಂಗತಿಗಳು ಒಳಗೊಳ್ಳುತ್ತವೆ. ಪದ್ಯದ ಭಾವಕ್ಕನುಸರಿಸಿ, ಸಾಹಿತ್ಯ ಸ್ವರೂಪ ಕನುಸರಿಸಿ ಚೆಂಡೆ ಮದ್ದಲೆಗಳ ವಾದನವು ಹೊಂದಿಬರಬೇಕಾದರೆ, ವಾದ್ಯ