ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಹಿಮ್ಮೇಳ
29

ಇನ್ನೊಬ್ಬನು 'ಹಾಗಾದರೆ ಕೇಳು' ಎನ್ನಬಹುದು. ಮುಂದಿನ ಪದ್ಯದ ಆರಂಭಕ್ಕೆ ಸುತ್ತುಬಳಸಿ ಅಥವಾ ಧ್ವನಿಯಿಂದ ಸೂಚಿಸುವ ರೀತಿಯಿಂದ ಮಾತನ್ನು ರೂಪಿಸುವುದೂ ಉಂಟು. ಈ ರೀತಿಗಳನ್ನು ಭಾಗವತನು ಎಚ್ಚರಿಕೆ ಯಿಂದ ಗಮನಿಸಬೇಕು. ಇದಕ್ಕೆ ಅವನು ಒಳ್ಳೆಯ ಶೋತೃವೂ ಆಗಬೇಕು. ಅರ್ಥಧಾರಿಯೊಬ್ಬನು ತಿಳಿದೋ ತಿಳಿಯದೆಯೋ ಪದ್ಯಗಳನ್ನು ದಾಟಿ ಮುಂದೆ ಹೋದರೆ, ಬಿಟ್ಟು ಸಾಗಿದರೆ, ಭಾಗವತನು, ಅಲ್ಲಿಗೆ ಹೊಂದುವಂತಹ ಪದ್ಯವನ್ನು ಎತ್ತಿಕೊಂಡು ಕತೆಯನ್ನು ಸಾಗಿಸಬೇಕು.21 ಆರ್ಥವನ್ನು ಹೇಳಿ ಯಾ ಸೂಚಿಸಿ ಆಗಿಹೋದ ಪದ್ಯಗಳನ್ನು ಹಾಡಿದರೆ ಗೊಂದಲವುಂಟಾಗುತ್ತದೆ. ಇಂತಹ ವಿಚಾರಗಳಲ್ಲಿ ಭಾಗವತನು ಅನನುಭವಿಯಾಗಿದ್ದರೆ, ಅನುಭವಿ ವಾದ್ಯ ಗಾರರು ಅದನ್ನು ಸರಿಹೊಂದಿಸುವ ಪ್ರಸಂಗಾವಧಾನತೆ ತೋರಬೇಕು, ತೋರು ತ್ತಾರೆ.

ಹಿಮ್ಮೇಳದ ವಾದ್ಯಗಳು ನಿರ್ಮಿಸುವ ಚಿತ್ರ, ಕತೆಯ ಘಟನೆಗೆ ಅವು ನೀಡುವ ಒತ್ತು-ಇವು ತಾಳಮದ್ದಳೆಯ ಅನನ್ಯ ಸುಂದರ ಅಂಶಗಳು: ಇವನ್ನು ಬಿಟ್ಟು ಬಿಡುವುದು ತಾಳಮದ್ದಳೆಯ ಪರಿಣಾಮ ಶಕ್ತಿಗೆ ದೊಡ್ಡ ಕುಂದುಂಟು ಮಾಡುತ್ತದೆ. ಮಾತಿನ ಮಧ್ಯೆ, ಕೆಲವು ಪದ್ಯಗಳ ಆರಂಭಕ್ಕೆ ಯಾ ಅಂತ್ಯಕ್ಕೆ ಚೆಂಡೆ ಮದ್ದಲೆ ಜಾಗಟೆ ತಾಳಗಳ ಗತ್ತುಗಳಿಲ್ಲದಿದ್ದರೆ ಸಂವಹನವು ಬೋಳಾಗಿ ಕಾಣುತ್ತದೆ. “ಕರ್ಣಪರ್ವ"22ದ ಉತ್ತರಾರ್ಧದ ಕೆಲವು ಉದಾ ಹರಣೆಗಳನ್ನು ತೆಗೆದುಕೊಂಡು ಈ ವಿಷಯವನ್ನು ಸ್ಪಷ್ಟಪಡಿಸಬಹುದು. ಯುದ್ಧಾರಂಭದ, ಎರಡು ಪದ್ಯಗಳಾದ 'ಈ ನೆರೆದ ಪರಿಭವವ ಕಾಣುತ, ..' ಎಂಬ ಭಾಮಿನಿಯ ಕೊನೆಯಲ್ಲಿ ಒಮ್ಮೆ, “ಇತ್ತಲು ಹತ್ತಿತು ಕರ್ಣಾರ್ಜುನ ರಿಗೆ........” ಎಂಬ ಕಂದಪದ್ಯದ ಕೊನೆಗೊಮ್ಮೆ 'ಧಿತ್ತ'ವೆಂಬ ಬಿಡಿತಗಳನ್ನು ಕೊಡದಿದ್ದರೆ ಕರ್ಣಾರ್ಜುನರ ಸಂಗ್ರಾಮಕ್ಕೆ ಬೇಕಾದ ಭೂಮಿಕೆ ನಿರ್ಮಾಣ ವಾಗುವುದೇ ಇಲ್ಲ. ಪುನಃ ಕರ್ಣಾರ್ಜುನ ಸಂವಾದದ ಕೊನೆಗೆ ಯುದ್ಧ ಸೂಚಕ ವಾದ ಗತ್ತುಗಳು ಬೇಕೇಬೇಕು. ಹಾಗೆಯೇ ಮುಂದೆ ಮುಂದೆ ಅರ್ಜುನನು ಪುನಃ ಯುದ್ಧಕ್ಕೆ ಅಣಿಯಾಗುವಲ್ಲಿ, ಕರ್ಣನು ಸರ್ಪಾಸ್ತ್ರವನ್ನು ಹೂಡುವಲ್ಲಿ ಹೀಗೆ ಹಲವು ಸಂದರ್ಭಗಳನ್ನು ಗಮನಿಸಬಹುದು. ಕೃಷ್ಣ ಸಂಧಾನದಲ್ಲಿ ಒಂದು