ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
30
ಮಾರುಮಾಲೆ

ಸಂದರ್ಭವನ್ನು ಗಣಿಸುವುದಾದರೆ, ಬಲರಾಮನು ದುರ್ಯೋಧನನ ಸಹಾಯ ಕ್ಕಾಗಿ ಹೊರಡುವುದನ್ನು ಸೂಚಿಸುವ ಪ್ರಯಾಣದ ಬಿಡಿತವನ್ನು ಬಾರಿಸಿದ ಮೇಲೆಯೇ, ಕೃಷ್ಣನ ಪದ್ಯವನ್ನು ಎತ್ತಿಕೊಳ್ಳಬೇಕು. ವಿರಾಟಪರ್ವದ ಉತ್ತರಗೋಗ್ರಹಣ ಪ್ರಕರಣದಲ್ಲಿ ಉತ್ತರನು ಯುದ್ಧಕ್ಕೆ ಹೊರಡುವುದು, ಅವನು ಯುದ್ಧಕ್ಕೆ ಹೆದರುವುದು, ಅರ್ಜುನನ ರಥವನ್ನು ಮುಂದಕ್ಕೊಯು ವುದು-ಹೀಗೆ ಪ್ರತಿ ಘಟನೆಗೆ, ಪ್ರತಿಯೊಂದು ಪದ್ಯಕ್ಕೆ ರಥ ಮುಂದಕ್ಕೆ ಹೋಗುತ್ತಿದೆ, ಎಂಬುದರ ಸೂಚಕವಾಗಿ ಹಿಮ್ಮೇಳ ವಾದನ ಅವಶ್ಯ. ಇಂತಹ ಉದಾಹರಣೆಗಳನ್ನು ಎಲ್ಲ ಪ್ರಸಂಗಗಳಲ್ಲಿ ನೋಡಬಹುದು.

ಹೀಗೆಯೇ, ಕತೆ ಸಾಗುತ್ತಿರುವಾಗ ಪಾತ್ರಗಳಿಗೆ ಬೇರೆ ಬೇರೆ ಸನ್ನಿವೇಶ ಗಳು ಎದುರಾಗುತ್ತವೆ. ಅವುಗಳಿಗೆ ಪ್ರತಿಕ್ರಿಯೆ ಇರುತ್ತದೆ. ಪಾತ್ರಗಳಿಗೆ ಭಾವಪರಿವರ್ತನವೂ ಆಗುತ್ತಿರುತ್ತದೆ, ಒಂದು ಘಟನೆಯಿಂದ ಆಶ್ಚರ್ಯ ಹುಟ್ಟಬಹುದು, ಸಿಟ್ಟು ಬರಬಹುದು, ದುಃಖವಾರ್ತೆಯಿಂದ ಕುಸಿದುಬೀಳುವ ಸಂದರ್ಭ ಇರಬಹುದು ; ಕತೆಯ ಮಧ್ಯೆ ಬೇರೊಂದು ಪಾತ್ರ ಪ್ರವೇಶ ಮಾಡಬಹುದು ಇಂತಹ ಸಂದರ್ಭಗಳಲ್ಲೆಲ್ಲ ಮುಂದಿನ ಪದ್ಯಕ್ಕೆ ಮೊದಲು, ಅಥವಾ ಕೊನೆಗೆ ಚೆಂಡೆ ಮದ್ದಳೆಗಳ ಗತ್ತುಗಳು ಜರಗುತ್ತಿರುವ ಕ್ರಿಯೆಯ ಒಂದು ಚಿತ್ರವನ್ನು ಮೂಡಿಸುತ್ತವೆ. ಈ ಗತ್ತುಗಳಲ್ಲಿ ಚೆಂಡೆ, ಮದ್ದಲೆ ಗಳಿಂದಾಗುವ ನಾದ ಪರಿಣಾಮ (Sound effects) ಅನನ್ಯವಾದುದು. ಭಾವಜ್ಞನಾದ ಕಲಾವಿದನಿಗೂ, ಪ್ರೇಕ್ಷಕನಿಗೂ ಇದು ಅನಿವಾರ ಅವಶ್ಯಕತೆ ಯಾಗಿದೆ. ಇದು ಅನುಭವ ಪ್ರಕ್ರಿಯೆಯನ್ನು ಕಲಾವಿದನಲ್ಲಿ ಪ್ರೇರಿಸುತ್ತದೆ. ಪ್ರೇಕ್ಷಕನಿಗೆ ವರ್ಗಾಯಿಸುತ್ತದೆ.

ಪ್ರಸಂಗದ ಕತೆಯ ಮುಖ್ಯ ಸಂದರ್ಭವನ್ನು ಜೀವಂತವಾಗಿ ಇರಿಸಿ ಕೊಂಡು, ಕಥಾಘಟ್ಟದ ಏಕಸೂತ್ರತೆಯನ್ನು ಕಾಪಾಡುವ ಕೆಲಸವನ್ನು ಹಿಮ್ಮೇಳವು ಮಾಡಲೇಬೇಕು. ಕೆಲವೊಂದು ಪ್ರಸಂಗಗಳಲ್ಲಿ ಕಥೆಯ ಮುಖ್ಯ ಸಂದರ್ಭದಿಂದ, ಘಟನೆಗಳು ಅತ್ತಿತ್ತ ಚಲಿಸುತ್ತ ಸಾಗುವುದೇ ಪ್ರಸಂಗ ರಚನಾ ಸ್ವರೂಪವಾಗಿರುತ್ತದೆ. ಇದಕ್ಕೊಂದು ಉತ್ತಮ ನಿದರ್ಶನ “ಕರ್ಣಪರ್ವ”