ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
32
ಮಾರುಮಾಲೆ

ಕರ್ಣನ ದುಃಖ-ಹೀಗೆ ಸನ್ನಿವೇಶಗಳು ಯುದ್ಧವೆಂಬ ಮುಖ್ಯ ಕ್ರಿಯೆಯಿಂದ ಆಚೆ ಈಚೆ ಓಲುತ್ತ ಸಾಗುತ್ತವೆ. ಇಂತಹ ಸಂದರ್ಭದಲ್ಲಿ, ಕರ್ಣಾರ್ಜುನ ಯುದ್ಧವೆಂಬ ಮುಖ್ಯ ಕ್ರಿಯೆಯನ್ನು ಜೀವಂತವಾಗಿಡಲು, ಪ್ರತಿಯೊಂದು ಪ್ರಕರಣದ ಕೊನೆಗೆ ಕರ್ಣಾರ್ಜುನ ಯುದ್ಧದ ಒಂದೊಂದು ಪದ್ಯಗಳನ್ನು ಯುದ್ಧದ ಬಡಿತಗಳನ್ನೂ ಕೊಟ್ಟು ಮಂದುವರಿಯುವುದು ಆವಶ್ಯ. ಆಗ ಪ್ರಸಂಗವೂ, ಅದರಿಂದ ನಿರ್ಮಿತವಾಗುವ ನಾಟಕದ ಶಿಲ್ಪವೂ ಸರಿಯಾಗಿ ಮೂಡಿ ನಿಲ್ಲುತ್ತದೆ.
ಬದಲಾಗಿ, ಕರ್ಣಾರ್ಜುನ ಯುದ್ಧದ ಆರಂಭದ ಪದಗಳನ್ನಷ್ಟೆ ಹಾಡಿ, ಮುಂದೆ ಜರಗುವ ಘಟನೆಗಳನ್ನಷ್ಟೆ ಒಂದೊಂದಾಗಿ ಎತ್ತಿಕೊಂಡು ತಾಳಮದ್ದಲೆ ಸಾಗಿದರೆ, ಕರ್ಣಾರ್ಜುನ ಯುದ್ಧವೆಂಬುದು ಮೊದಲ ದೃಶ್ಯಕ್ಕೆ ಸೀಮಿತ ವಾಗಿ, ಉಳಿದುದೆಲ್ಲ ವಿಷಯಾಂತರವಾಗಿ ಕಾಣಿಸುತ್ತದೆ.

ಇಲ್ಲಿ ವಸ್ತುವಿನ, ಕತೆಯ ದೃಶ್ಯಗಳ ಮಂಡನೆಯ ಬಗೆಗೆ ಭಾಗವತನಿಗೂ, ವಾದ್ಯ ವಾದಕರಿಗೂ ಖಚಿತವಾದ ಕಲ್ಪನೆ ಇರಬೇಕು. ಆಟದ ರಂಗಸಂಪ್ರ ದಾಯಗಳ (Conventional Choreography), ಅನುಭವ ಇರುವ ಹಿಮ್ಮೇಳ ಕಲಾವಿದರಿಗೆ ಇದು ಸಹಜವಾಗಿ ಒದಗಿಬರುತ್ತದೆ.
ಕೆಲವೊಂದು ಸಂದರ್ಭಗಳಲ್ಲಿ ಅರ್ಥಗಾರಿಕೆಯು ವಿರಿತವಾಗಿ, ಮೇಲಿಂದ ಮೇಲೆ ಮೂರುನಾಲ್ಕು ಪದ್ಯಗಳಿಂದಲೇ ರಸಸೃಷ್ಟಿಯನ್ನು ತುಂಬ ಸೊಗ ಸಾಗಿ ಮಾಡಲು ಸಾಧ್ಯವುಂಟು. ಇಂತಹ ಪದ್ಯಗಳನ್ನು ಅರ್ಥಗಾರಿಕೆಗೆ ಅವ