ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳ ಮದ್ದಳೆಯ ಹಿಮ್ಮೇಳ
33

ಕಾಶವಿಲ್ಲವೆಂಬುದರಿಂದ ತಾಳಮದ್ದಲೆಯಲ್ಲಿ ಬಿಟ್ಟು ಬಿಡುವುದುಂಟು. ಆದರೆ, ನ್ಯಾಯವಾಗಿ ಇವುಗಳನ್ನು ಬಿಡತಕ್ಕದಲ್ಲ. ಉದಾ: 'ಗದಾಪರ್ವ'ದಲ್ಲಿ ದುರ್ಯೋ ಧನನು ಸರೋವರದಿಂದ ಹೊರಬಂದಾಗಿನ ಪದ್ಯಗಳು (ತಡಿಗಡರಿ ಕೌರವನು ....' ಎಂಬಲ್ಲಿಂದ), ಸುಭದ್ರಾ ಕಲ್ಯಾಣದಲ್ಲಿ ಅರ್ಜುನನು ಶರಸೇತು ಬಂಧನ ಮಾಡುವ, ಮತ್ತು ಹನುಮಂತನು ಸೇತುಭಂಗ ಮಾಡುವ ಪದ್ಯಗಳು (“ಎಂದಾ ನುಡಿ ಕೇಳ್ವಂದಾ ಪಾರ್ಥನು....." ಎಂಬಲ್ಲಿಂದ)-ಇವು ಒಂದು ದಟ್ಟವಾದ ಪರಿಣಾಮವನ್ನು ಮಾಡುವ ಸಂದರ್ಭಗಳು. ಇವು ಯಕ್ಷಗಾನದ ಹಿಮ್ಮೇ ಳದ ಶಕ್ತಿಯಿಂದಲೇ ಬೆಳಗುವ ಸಂದರ್ಭಗಳು. ಇಲ್ಲಿ ಅರ್ಥಗಾರಿಕೆ ತೀರ ಪ್ರಸ್ವವಾಗಿದ್ದರೂ ಸಾಕು. ಆದರೆ, ಪದ್ಯಗಳನ್ನು ಹಾಡಲೇಬೇಕು. ಹಿಮ್ಮೆ ಳದ ಶಕ್ತಿಯ ಕಲ್ಪನೆ ಅರ್ಥಧಾರಿಗೆ ಇದ್ದಾಗ ಮಾತ್ರ, ಸಮಗ್ರ ಕಲಾನುಭವ ವನ್ನು ನೀಡುವ ಅವನ ಮನಸ್ಸು ಕೆಲಸ ಮಾಡುತ್ತದೆ. ತಾಳಮದ್ದಲೆಯ ರಂಗತಂತ್ರವನ್ನು ಬಳಸುವ ಪರಿಜ್ಞಾನ, ಆ ಬಗೆಗಿನ ಆಸಕ್ತಿ ಹಿಮ್ಮೇಳದ, ಮುಮ್ಮೇಳದ ಕಲಾವಿದರಲ್ಲಿ ಇದ್ದರೆ ಮಾತ್ರ ತಾಳಮದ್ದಲೆ ಯಶಸ್ವಿ ಆಗ ಬಲ್ಲುದು. ಅರ್ಥಗಾರಿಕೆಯ ಇತರ ಅಂಗಗಳ ಪ್ರಾವೀಣ್ಯದ ಜತೆ, ಈ ಎಚ್ಚರ ಮಿಳಿತವಾದಾಗ ಮಾತ್ರ ಅವನ ಕಲಾಭಿವ್ಯಕ್ತಿ ಸಮಗ್ರವಾಗಬಲ್ಲುದು.

ಕಲೆಯನ್ನು ಆಸ್ವಾದಿಸುವಾಗ ನಮ್ಮಲ್ಲಿ ಇರುವ ಒಂದು ದೃಷ್ಟಿಯೆಂದರೆ ಶಬ್ದಗಳಿಂದ ಅಂದರೆ ಸಾಹಿತ್ಯಕ ಪದಗಳಿಂದ, ಭಾಷೆಯಿಂದಲೇ ನಾವು ಪ್ರತಿಮೆ ಗಳನ್ನು, ಕಲ್ಪನೆಗಳನ್ನು ಅಭಿವ್ಯಕ್ತಿಸುವ, ಅಥವಾ ಸ್ವೀಕರಿಸುವ ಧೋರಣೆ. ನಮ್ಮ ಶಾಸ್ತ್ರೀಯ ವಾದ್ಯಸಂಗೀತ ಇದಕ್ಕೊಂದು ದೃಷ್ಟಾಂತ. ಪಿಟೀಲು ಅಥವಾ ವೀಣೆ ಬಾರಿಸುವವನೂ ಆಶ್ರಯಿಸುವುದು ಅವೇ ಸಾಹಿತ್ಯಪ್ರಧಾನ ವಾದ ಕೃತಿಗಳನ್ನು, ಸ್ವರದ ನಾದದ ಮಾಧ್ಯಮದ ಶಕ್ತಿ, ಅದಕ್ಕಿರುವ ಸ್ವತಂತ್ರ ಸಾಮರ್ಥ್ಯ. ಬಿಂಬ ನಿರ್ಮಾಣ ಕ್ಷವಂತೆಗಳ ಕಡೆ ನಮ್ಮ ಒಲವು ಕಡಿಮೆ. ಈ ಒಂದು ಪಾರ್ಶ್ವಕ ದೃಷ್ಟಿಯಿಂದಲೇ ಇರಬೇಕು, ತಾಳಮದ್ದಲೆಯು ಮಾತು ಗಾರಿಕೆಯೆಂಬ ಸಾಹಿತ್ಯಕ್ಕೆ ಮಹತ್ವ ನೀಡಿ, ನಾದವು ನಿರ್ಮಿಸಬಹುದಾದ ಚಿತ್ರ ವನ್ನು, ಸಂವಹಿಸಬಹುದಾದ ಭಾವವನ್ನು ನಾವು ಕಡೆಗಣಿಸಿದ್ದು, ಈ ಕುರಿತು ನಾವು ಮತ್ತೊಮ್ಮೆ ಯೋಚಿಸಬೇಕು.