ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

36

ಮಾರುಮಾಲೆ

ವಿಚಾರ. 'ಪಂಚವಟಿ-ವಾಲಿಸಂಹಾರ' ಪ್ರಸಂಗದ ಸುಗ್ರೀವ ಸಖ್ಯ ಭಾಗ ವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಈ ಘಟ್ಟವು ರಾತ್ರೆಯ ಮೊದಲ ಭಾಗದಲ್ಲಿ ಪ್ರದರ್ಶಿತವಾದಾಗ ಸಾಗುವಷ್ಟು ನಿಧಾನವಾಗಿ, ರಾತ್ರಿಯ ಕೊನೆಯ ಭಾಗದಲ್ಲಿ ಸಾಗಿದರೆ, ಸೂಕ್ತವೆನಿಸದು. ಈ ಕಾಲ ಪ್ರಜ್ಞೆ' ಹಿಮ್ಮೆ ಳಕ್ಕೂ, ಅರ್ಥಧಾರಿಗೂ ಇರಬೇಕು. ಇಲ್ಲಿ ಇಡಿಯ ರಾತ್ರಿ ಪ್ರದರ್ಶನವನ್ನು ನೋಡುವ ಪ್ರೇಕ್ಷಕನ ಮನಸ್ಥಿತಿಯನ್ನು ಗಣಿಸಬೇಕು.

ಪದ್ಯಗಳನ್ನು ಎತ್ತಿಕೊಳ್ಳುವಲ್ಲಿ, ಅವಕ್ಕೆ ನೀಡುವ ಭಾವದಲ್ಲಿ, ಅರ್ಥ ಧಾರಿಯಸೃಷ್ಟಿಶೀಲ ಮನೋಧರ್ಮಕ್ಕೆ ಅವಕಾಶವಿದೆಯಷ್ಟೆ. ತೀರ ಸ್ಪುಟ ವಾದ ನಿಶ್ಚಿತವಾದ ಭಾವಗಳುಳ್ಳ ಸಂದರ್ಭಗಳಲ್ಲಿ, ಹಾಡುವಿಕೆಗೆ ಅಳವಡಿಸುವ ರಾಗಭಾವಗಳಿಗೆ ಪೂರ್ವಪದ್ಧತಿಗಳಿವೆ-ಉದಾ: ಯುದ್ಧದ ಸನ್ನಿವೇಶದ ಪದ್ಯ ಗಳು.ಆದರೆ, ಕೆಲವೊಂದು ಸಂದರ್ಭಗಳಲ್ಲಿ ಪ್ರಸಂಗದ ಪದ್ಯಗಳನ್ನು ಬೇರೆ ಬೇರೆ ರೀತಿಯಲ್ಲಿ ಪರಿಭಾವಿಸಲು ಅರ್ಥಧಾರಿಗೆ ಅವಕಾಶಗಳಿವೆ.ಉದಾ ಹರಣೆಗೆ 'ಸುಭದ್ರಾ ಕಲ್ಯಾಣ'ದಲ್ಲಿ ಹನುಮಂತ-ಅರ್ಜುನರ ಸಂವಾದವನ್ನು ನೋಡಬಹುದು. ಅವರಿಬ್ಬರಿಗೆ ಸಂವಾದ ಸಾಗುತ್ತ, “ನೀನೇಕೆ ಇಷ್ಟು ಕ್ಷೀಣ ನಾದೆ?” ಎಂದು ಅರ್ಜುನನು ಪ್ರಶ್ನಿಸಿದಾಗ, 'ಸೇತುಬಂಧನಕ್ಕಾಗಿ ದುಡಿದುದೇ ಈ ಕ್ಷೀಣತೆಗೆ ಕಾರಣ” ಎಂದು ಹನುಮಂತ ಉತ್ತರಿಸುತ್ತಾನೆ. ಅದಕ್ಕೆ ಪ್ರತಿ ಕ್ರಿಯೆಯಾಗಿ ಅರ್ಜುನನ ಪದ್ಯ ಹೀಗಿದೆ:

ಪೊತ್ತು ದಣಿಯಲದೇಕೆ ಗಿರಿಗಳ | ನೆತ್ತಲೇತಕೆ ಕಲ್ಮರಂಗಳ
            ಮತ್ತೆ ಬಳಲುವರೇಕೆ ಸೇತುವ | ಬಿತ್ತರಿಪಡೆ ||

ಇದನ್ನು 'ವೀರ'ಭಾವದಿಂದ ಏರುಪದ್ಯವಾಗಿ ಹಾಡುವುದು ರೂಢಿ. ಆದರೆ ಈ ಬಗ್ಗೆ ಬೇರೆ ನೋಟವೂ ಇರುವುದು ಸಾಧ್ಯ. ಅರ್ಜುನನ ಈ ಪ್ರತಿಕ್ರಿಯೆಯನ್ನು ಪರಿಹಾಸ್ಯದ ತಿರಸ್ಕಾರದ ರೀತಿಯಲ್ಲಿ ಭಾವಿಸಿದಾಗ ಹಾಡುವ ಲಯ, ಭಾವ ರಾಗಗಳು ಬೇರೆಯಾಗುತ್ತವೆ. ಇಲ್ಲಿ, ಅರ್ಥಧಾರಿ ಯಾವ ಭಾವದಿಂದ ಈ ಪದ್ಯದ ಆರಂಭಕ್ಕೆ ಬಂದು ಅದನ್ನು ಎತ್ತಿಕೊಂಡಿ