ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
37

ತಾಳಮದ್ದಳೆಯ ಹಿಮ್ಮೇಳ

ದ್ದಾನೆ ಎಂಬ ಅವನ ಮನೋಧರ್ಮವನ್ನು ಸೂಕ್ಷ್ಮವಾಗಿ ಅವಲೋಕಿಸಿ ಅನುಸ ರಿಸುವ ಜಾಣ್ಮೆ ಹಿಮ್ಮೇಳಕ್ಕೆ ಇರಬೇಕು. 'ಸುಧನ್ವ ಕಾಳಗ' ಪ್ರಸಂಗದಲ್ಲಿ ಸುಧನ್ವಾರ್ಜುನ ಸಂವಾದದ ಪದ್ಯಗಳನ್ನು ಯುದ್ಧ ಸಂದರ್ಭದ ಪದ್ಯಗಳೆಂಬು ದರಿಂದ ಏರುಪದ್ಯಗಳಾಗಿಯೇ ಹಾಡುವ ವಾಡಿಕೆ ತೆಂಕುತಿಟ್ಟಿನಲ್ಲಿದೆ. ಆದರೆ ಪದ್ಯಗಳನ್ನು ನೋಡಿದರೆ, ಅವುಗಳ ರಚನೆ(ಅದರಲ್ಲೂ ಮೊದಲ ಆರು ಪದ್ಯ ಗಳು)-ಈರ್ವರು ವೀರರೊಳಗಿನ ಸರಸ ಸಂಭಾಷಣೆಯಂತೆ ಇದೆ. ಪದ್ಯಗಳಲ್ಲಿ ಅರ್ಥಗಾರಿಕೆಗೆ, ಅಭಿನಯಕ್ಕೆ ಅವಕಾಶವೂ ಚೆನ್ನಾಗಿ ಇದೆ. ಇಲ್ಲಿ ಅರ್ಥ ಧಾರಿ ಹೇಗೆ ಇದನ್ನು ಅರ್ಥವಿಸುತ್ತಾನೆ, ಎಂಬುದರ ಮೇಲಿನಿಂದ ಭಾಗವತನ ಹಾಡುವಿಕೆ ನಿರ್ಧಾರವಾಗುತ್ತದೆ. ಅಥವಾ ಭಾಗವತನೇ ಈ ಪದ್ಯಗಳನ್ನು ಒಂದು ಭಿನ್ನವಾದ ಕಾಣ್ಕೆಯೊಂದಿಗೆ ಹಾಡಿದಾಗ, ಅರ್ಥಧಾರಿ ಅದನ್ನು ಅನು ಸರಿಸಿ ತನ್ನ ಅರ್ಥಗಾರಿಕೆಯನ್ನು ರೂಪಿಸಬಹುದು.

ಇದೇ ವಿಚಾರವನ್ನು ಬೇರೊಂದು ದೃಷ್ಟಿಯಿಂದ, ಪಾತ್ರದ ಒಟ್ಟು ಭಾವ ಪ್ರಕಟನದ ವಿಧಾನಕ್ಕೂ ಅಳವಡಿಸಿ ಹೇಳಬಹುದು. ಭಾವತೀವ್ರತೆ ಪ್ರಧಾನವಾಗಿರುವ ಪಾತ್ರಗಳಿವೆ-ಉದಾ: ಪಾದುಕಾ ಪ್ರಧಾನದ ಭರತ, ಅಭಿ ಮನ್ಯು ಕಾಳಗದ ಅಭಿಮನ್ಯು, ಕಂಸವಧೆಯ ಅಕ್ರೂರ, ಕೃಷ್ಣ ಸಂಧಾನದ ವಿದುರ ಇತ್ಯಾದಿ. ಈ ಪಾತ್ರಗಳ ಬಗೆಗೆ ಕಲಾವಿದರಲ್ಲೂ ಪ್ರೇಕ್ಷಕರಲ್ಲೂ ಒಂದು ಅಂಗೀ ಕೃತ ನಿಲುವು ಇದೆ. ಭಾವಾವೇಶದ ಅತಿಯನ್ನು ಇಂತಹ ಸಂದರ್ಭಗಳಲ್ಲಿ ನಿರೀಕ್ಷಿಸಲಾಗುತ್ತದೆ-ಭಾವಪೂರ್ಣ ಅರ್ಥಗಾರಿಕೆ ಎಂದರೆ ಬಾಲಿಶವಾದ ಅತಿ ಭಾವ ಪ್ರದರ್ಶನವೆಂಬ ತಿಳಿವಳಿಕೆಯೇ ಹೆಚ್ಚು ಪ್ರಚಲಿತ, ಜನಪ್ರಿಯ.ಇರಲಿ. ಈ ಸಂದರ್ಭಗಳಲ್ಲಿ ಭಿನ್ನವಾಗಿ ಯೋಚಿಸುವ ಅರ್ಥಧಾರಿಯೊಬ್ಬ ಆ ಪಾತ್ರಗಳ ಅಭಿವ್ಯಕ್ತಿಯಲ್ಲಿ ಸಂಯಮದ, ಗಾಂಭೀರ್ಯದ ರೀತಿಯ ಭಾವಪ್ರಕಟನ ಮಾಡುವುದಾದರೆ, ಆಗ ಈ ಅತಿ ಭಾವುಕತೆಯ ಮಾಮುಲಿ ಜಾಡಿನ ಹಾಡು ಗಾರಿಕೆ, ಅವನಿಗೆ ತೊಡಕಾಗಬಹುದು. ಅಂದರೆ, ಹಿಮ್ಮೇಳದಲ್ಲಿ ತೀವ್ರವಾದ ಭಾವ, ಮುಮ್ಮೇಳದಲ್ಲಿ ಹದವಾದ ಭಾವ-ಹೀಗಾಗಿ ವಿಸಂಗತಿಯುಂಟಾಗು ತ್ತದೆ. ಒಂದು ಉದಾಹರಣೆ ನೋಡಿ-ಪಟ್ಟಾಭಿಷೇಕ' ಪ್ರಸಂಗದಲ್ಲಿ ಭರತನ ಈ ಪದ್ಯಗಳು :