ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಹಿಮ್ಮೇಳ
43

ಟಿಪ್ಪಣಿಗಳು
1. ಶಾಸ್ತ್ರೀಯ, ಸಮಶಾಸ್ತ್ರೀಯ ರಂಗದ ಹಿಮ್ಮೇಳಕ್ಕೆ ತಾಂತ್ರಿಕ ವಿವರಗಳು, ಪೂರ್ವಪದ್ಧತಿಗಳು, ಸೃಜನಶೀಲ ಅವಕಾಶ ಇವು ಹೆಚ್ಚು. ಹಿಮ್ಮೇಳ ಮುಮ್ಮೇಳಗಳ ಸಂಬಂಧವು ಬಹು ಸಂಕೀರ್ಣವಾದುದು, ಹಾಗೆಯೇ ಬಿಗಿಯಾದುದು. ಯಕ್ಷಗಾನದ ಅತ್ಯಂತ ಪ್ರಬುದ್ಧವಾದ ಆಶು ಭಾಷಣ ಪದ್ಧತಿಯಿಂದಾಗಿ, ನೃತ್ಯದಲ್ಲೂ ಕಲಾವಿದನ ಪ್ರತಿಭೆಗೂ, ರಂಗದ ಮೇಲೇ ನಿರ್ಮಿತವಾಗುವ, ನಾಟ್ಯ ಸ್ವರೂಪ, ಸಂಯೋಜನೆಗಳ ಸ್ವರೂಪ ದಿಂದಲೂ, ಯಕ್ಷಗಾನದ ಹಿಮ್ಮೇಳದ ಕೆಲಸದ ಪ್ರಮಾಣ, ಯೋಗ್ಯತೆಗಳು ಘನವಾದುವುಗಳು.

2. ನೋಡಿ-ಡಾ॥ ಶಿವರಾಮಕಾರಂತ-ಯಕ್ಷಗಾನ ಬಯಲಾಟ, ದ್ವಿ.ಮು. 1963 ಮತ್ತು-ಪಾರ್ತಿಸುಬ್ಬನ ಯಕ್ಷಗಾನಗಳು, ಕುಕ್ಕಿಲ ಕೃಷ್ಣ ಭಟ್ಟ, ಮೈವಿವಿ 1975-ಪೀಠಿಕೆ.
3. ಈ ಊಹೆಯನ್ನು ಮಂಡಿಸಿದವರು ಮಂದಾರ ಕೇಶವಭಟ್ಟರು. ಖಾಸಗಿ ಚರ್ಚೆಯಲ್ಲಿ.
3ಎ ನೋಡಿ : ಇದೇ ಲೇಖಕನ 'ಜಾಗರ' ಸುಮನಸಾ ವಿಚಾರವೇದಿಕೆ ಚೊಕ್ಕಾಡಿ 1984.
4. ಬಡರಂಗಭೂಮಿ ಎಂದರೆ, ಪರಿಕರವನ್ನು, ಅದ್ದೂರಿ ಸೆಟ್ ಮುಂತಾದುವನ್ನು ಬಳಸದೆ, ನಾಟಕ ತನ್ನ ಸಾಹಿತ್ಯದ ಅಭಿನಯದ ಶಕ್ತಿ ಯಿಂದಲೇ, ಅತಿ ಕಡಿಮೆ ಪರಿಕರಗಳೊಂದಿಗೆ, ಗರಿಷ್ಠ ಪರಿಣಾಮ ಸಾಧಿಸ ಬೇಕು, ಸಾಧಿಸಬಲ್ಲುದು ಎಂಬ ಸಿದ್ಧಾಂತ.
5. ಈ ವಿಚಾರವನ್ನು ಮೊತ್ತಮೊದಲು ಗಮನಿಸಿದವರು ಮುಳಿಯ ಮಹಾಬಲ ಭಟ್ಟರು-ಲೇಖನ : ರಂಗವೈಖರಿ, ಮಾಂಬಾಡಿ ಭಾಗವತ ಅಭಿ ನಂದನ ಗ್ರಂಥ, ಸನ್ಮಾನ ಸಮಿತಿ, ಮಿತ್ತನಡ್ಕ ಕರೋಪಾಡಿ, ದ.ಕ. 1981,