ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
44
ಮಾರುಮಾಲೆ

6. ಅರ್ಥಗಾರ ಎಂಬ ಪ್ರಯೋಗವೇ ಸಾಧುವಾದರೂ, ರೂಢಿಯ ಪ್ರಯೋಗವನ್ನು ಆಶ್ರಯಿಸಿದೆ. 7. ಲಯ-ಶಬ್ದದ ಅರ್ಥವಿವೇಚನೆ, ಅದರ ಬಳಕೆಗಳ ಬಗೆಗಿನ ವಿಸ್ತ್ರತ ವಿವೇಚನೆಗೆ ನೋಡಿರಿ : ಸೇಡಿಯಾಪು ಕೃಷ್ಣಭಟ್ಟರ 'ಛಂದೋಗತಿ ಅ. ಎರಡು ಗೀತಾ ಬುಕ್ ಹೌಸ್ ಮೈಸೂರು, 1985, ಮತ್ತು ಕುಕ್ಕಿಲ ಕೃಷ್ಣಭಟ್ಟರಿಂದ ಸಂಪಾದಿತ ಛಂದೋಂಬುಧಿ, ಡಿ. ವಿ. ಕೆ. ಮೂರ್ತಿ 1975 ಪೀಠಿಕೆ ಪುಟ xvii-xx,
8. [ಅರ್ಥಧಾರಿ (ಯಾ ವೇಷಧಾರಿಯ)ಯ ಅಭಿವ್ಯಕ್ತಿಗೊಂದು| ವಿಶಿಷ್ಟ ಸ್ವಭಾವವಿರುತ್ತದೆ. ಪುತ್ತೂರು ನಾರಾಯಣ ಹೆಗ್ಡೆಯಂತಹ ಗತ್ತು. ಗಾರಿಕೆಯ ನೃತ್ಯದ, ಓರ್ವ ಪಾತ್ರಧಾರಿಗೂ, ಎಂಪೆಕಟ್ಟೆ ರಾಮ ಅಥವಾ ಕುಂಬಳೆ ಸುಂದರ ರಾವ್‌ರಂತಹ ವೇಗಗತಿಯ ಪಾತ್ರಧಾರಿಗಳಿಗೂ, ಭಾಗವತ ಕಡತೋಕ ಮಂಜುನಾಥರು ಲಯದ ಅಳವಡಿಕೆಯಲ್ಲಿ ಅನುಸರಿಸುವ ವಿಭಿನ್ನ ಕ್ರಮಗಳನ್ನು, ಹಾಗೆಯೇ ಬೋಳಾರ ನಾರಾಯಣ ಶೆಟ್ಟಿ, ಅಳಕೆ ರಾಮಯ ರೈ-ಇವರಿಬ್ಬರಿಗೆ ದಿ|| ದಾಮೋದರ ಮಂಡೆಚ್ಚರು ಅಳವಡಿಸುವ ಗತಿವ್ಯತ್ಯಾಸ ವನ್ನು ಕಂಡವರಿಗೆ ಇದು ಸ್ಪಷ್ಟವಾಗಬಹುದು. ದಿ|| ನಾರ್ಣಪ್ಪ ಉಪ್ಪರರ ಭಾಗವತಿಕೆಯಲ್ಲಿ ಇಂತಹ ಪ್ರಜ್ಞೆಯನ್ನು ನಾನು ಕಂಡಿದ್ದೇನೆ.]
9. ಇಲ್ಲಿ ವಾಹಕವೆಂದರೆ, ಕತೆಯ ದೃಶ್ಯಗಳು ಮತ್ತು ಅದಕ್ಕೆ ನೀಡುವ ಒತ್ತು, ಅಂಶಗಳು-ಎಂಬ ಎರಡರ್ಥಗಳಲ್ಲಿ ಬಳಸಿದೆ. ಸಾಹಿತ್ಯರೂಪದ ಗೀತವು ಹಾಡಲ್ಪಡುವಾಗ ಅದು ಅದರ ಸಾಹಿತ್ಯ ಸ್ವರೂಪಕ್ಕಿಂತ ಭಿನ್ನವಾದ ಪರಿಣಾಮವನ್ನು, ರೂಪಗಳನ್ನು ತಾಳುತ್ತದೆ:
10. ಅಗರಿ ಶ್ರೀನಿವಾಸ ಭಾಗವತರಂತಹವರು, ಪದ್ಯಗಳಿಂದಲೇ ಕತೆ ಮುಂದೆ ಸಾಗುತ್ತ ಹೋಗಬೇಕೆಂಬ ದೃಷ್ಟಿಯುಳ್ಳವರು. ಅವರು ಹೆಚ್ಚು ಪದ್ಯ ಗಳನ್ನು ಬಳಸುವರು. ಪ್ರಸಂಗದ ಆಶಯವನ್ನು ಸ್ಪುಟಗೊಳಿಸುವುದು ಅವರ ದೃಷ್ಟಿ, ಗದಾಪರ್ವ, ಕಂಸವಧೆ ಮುಂತಾದ ಪ್ರಸಂಗಗಳಲ್ಲಿ ಅವರು ಪ್ರಸಂಗ