ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳು : ಯಕ್ಷಗಾನ ನಿನ್ನೆ-ಇಂದು-ನಾಳೆ
53

ಬೆಳೆದುದು, ಅದು ಮುಖ್ಯವಾಗಿ ವಾಣಿಜ್ಯ ಅವಶ್ಯಕತೆಯಾಗಿ ಬೆಳೆಯಿತೆಂಬು ದನ್ನು ತೋರಿಸುತ್ತದೆ. ವಾಣಿಜ್ಯ ಅವಶ್ಯಕತೆಗಳಿಂದ ಕಲೆಯಲ್ಲಿ ಪರಿವರ್ತನೆ ಸ್ವಯಂ ವಿಚಿತ್ರವೂ ಅಲ್ಲ, ಅಸಾಧ್ಯವೂ ಎನ್ನುವಂತಿಲ್ಲ. ಅಂತಹ ಪರಿವರ್ತನವು ಹೇಗಿರಬೇಕು, ಎಂಬ ವಿವೇಚನೆಗೆ, ವಿವಾದಕ್ಕೆ ಅವಕಾಶವಿರುವುದು.

ಕಲೆಯು ಒಂದು ಕ್ರಮವನ್ನು ಹಿಡಿದು ಸಾಗುವಾಗ, ಅದಕ್ಕೆ ಒಳಗಿನ ಅಥವಾ ಹೊರಗಿನ ಒತ್ತಡಗಳು, ಬಿದ್ದಾಗ ಅದು ಇಡಿಯಾಗಿ ರೂಪಾಂತರ ಗೊಳ್ಳಬಹುದು ಅಥವಾ ಕವಲೊಡೆಯಬಹುದು. ಕವಲೊಡೆದಾಗ, ಮೊದಲ ರೂಪವು ಪ್ರತ್ಯೇಕವಾಗಿ ಉಳಿದು, ಹೊಸರೂಪವು ಬೇರೆಯಾಗುತ್ತದೆ ಅಥವಾ ನಂತರ ಅವು ಪುನಃ ಸಮ್ಮಿಶ್ರವಾಗಬಹುದು. . ಯಕ್ಷಗಾನದ ಇತಿಹಾಸದಲ್ಲೇ ಇದರ ಉದಾಹರಣೆಯನ್ನು ಹೇಳುವುದಾದರೆ, ಯಕ್ಷಗಾನವೆಂಬ ಒಂದು ಕಲೆಯು ಆಟ, ತಾಳಮದ್ದಲೆಗಳೆಂದು ಎರಡಾದುದು (ಇವುಗಳಲ್ಲಿ ಪೂರ್ವಾಪರ ಯಾವುದೇ ಇರಲಿ) ತೆಂಕು, ಬಡಗು ಎಂಬ ಎರಡು ಪುಭೇದಗಳಾದುದು ಇವನ್ನು ಗಮನಿಸಬಹುದು... ಕಲೆಯಲ್ಲಿ ಕವಲುಗಳುಂಟಾಗುವುದು ಕಲೆಯ ಪುರೋಭಿವೃದ್ಧಿಗೆ ಕಾರಣವೂ, ಕಲೆಯ ಶ್ರೀಮಂತಿಕೆಯ ಲಕ್ಷಣವೂ ಆಗ ಬಹುದು. ಆದರೆ, ಅದೇ ಕಲಾವಿಕೃತಿಗಳ ಸೃಷ್ಟಿಗೂ ಮೂಲವಾಗುವುದೂ ಶಕ್ಯ. ತುಳು ಯಕ್ಷಗಾನ ಅಂತಹ ಸಮಸ್ಯೆಯನ್ನು ಸೃಷ್ಟಿಸಿದೆ ಎಂದು ಹೇಳ ಬೇಕಾಗಿದೆ. ರೂಪದೃಷ್ಟಿಯಿಂದ, ಆಶಯ ದೃಷ್ಟಿಯಿಂದಲ್ಲ.
ಇದರ ಅರ್ಥ, ತುಳು ಯಕ್ಷಗಾನ ರಂಗಕ್ಕೆ, ಗಮನಾರ್ಹ ಸಾಧನೆಗಳು ಇಲ್ಲವೆಂದಲ್ಲ. ತೌಳವಪೂರ್ಣಗಳ (ಕೋಟೆ ಚೆನ್ನಯ, ತುಳುನಾಡಸಿರಿ ಮುಂತಾಗಿ) ಅಳವಡಿಕೆ, ಅಂತಹ ಒಂದು ಮಹತ್ವಸಿದ್ಧಿ. ಸಂಸ್ಕೃತ ಪುರಾಣಗಳಿ ಗಿಂತ ಭಿನ್ನವೂ, ಕೆಲವು ಅಂಶಗಳಲ್ಲಿ ಜೀವನಪರವೂ, ಆದ ಒಂದು ಆಶಯ ಪ್ರಪಂಚವನ್ನು ಇವು ತೆರೆದು ತೋರಿದುವು. ತುಳುಭಾಷೆಯ ಸೌಂದಯ್ಯ, ಸತ್ವ, ತನ್ನದೇ ಆದ ಅದರ ಅಭಿವ್ಯಕ್ತಿ ವಿಶೇಷ (ideom)ಗಳ ವೈಭವರಂಗ ದಲ್ಲಿ ಸಾಕಾರವಾಯಿತು. ತುಳು ಆಟಗಳ ಮಾತುಗಾರಿಕೆಯ ಸಿದ್ದಿ ಅಸಾ