ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
52
ಮಾರುಮಾಲೆ

ಕಲೆಯ ಬೆಳವಣಿಗೆಗೆ ದಾರಿ ಒಂದಲ್ಲ ಹಲವು.ಕಲಾಮಾಧ್ಯಮಗಳ ಸಾಧ್ಯತೆಗಳೂ ಹಲವು. ಇದರೊಂದಿಗೆ, ಬೆಳವಣಿಗೆ ಮತ್ತು ಸಾಧ್ಯತೆಗಳ ಅನ್ವೇಷಣೆಯಲ್ಲಿ ಕಲೆಯು ಕಲೆಯಾಗಿ ಇರಬೇಕೆಂಬ ತತ್ವವನ್ನೂ ಮರೆಯ ಬಾರದು. ಮಾತ್ರವಲ್ಲ ಸುದೀರ್ಘವಾದ ಇತಿಹಾಸದಲ್ಲಿ, ಹಲವು ತಲೆಮಾರು ಗಳ ಕೊಡುಗೆಯಿಂದ ಶ್ರೀಮಂತಿಕೆಯನ್ನೂ, ಸೌಂದರ್ಯವನ್ನೂ, ವಿಶಿಷ್ಟ ರೂಪ ವನ್ನೂ ಗಳಿಸಿರುವ ಒಂದು ಕಲೆ, ಅಂತಹ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸ ಬೇಕಾಗಿರುವ ಹೊಣೆಗಾರಿಕೆ, ಆ ಕಲೆಯಲ್ಲಿ ಆಸಕ್ತರಾಗಿರುವ ಎಲ್ಲರಿಗೂ ಇದೆ ಎಂಬುದೂ ಅಷ್ಟೆ ಮುಖ್ಯ. ಈ ಎರಡು ನೆಲೆಗಳನ್ನು ಆಧರಿಸಿ ತುಳು ಯಕ್ಷ ಗಾನಗಳ ಸಾಧನೆ, ಸೋಲುಗಳ ಬಗೆಗಿನ ಚಿಂತನೆ ನಡೆಯಬೇಕಾಗಿದೆ.

ಕಲೆ ಸಾಹಿತ್ಯಗಳಲ್ಲಿ ಪರಿವರ್ತನೆಗಳು ಐತಿಹಾಸಿಕ ಆವಶ್ಯತೆಯಿಂದ, ಸಾಮಾಜಿಕ ಸಾಂಸ್ಕೃತಿಕ ಪರಿವರ್ತನೆಗಳ ಫಲರೂಪವಾಗಿ ಬರುತ್ತವೆ ಎಂಬ ಅಭಿಪ್ರಾಯವೊಂದಿದೆಯಷ್ಟೆ. ಆದರೆ, ಹಾಗೆಯೇ ಆಗಬೇಕೆಂದಿಲ್ಲ.ಕೇವಲ ವೈಯಕ್ತಿಕ ಲಹರಿಗಳಿಂದಲೂ, ಹೊಸ ಮಾರ್ಗಗಳು ಹುಟ್ಟಬಹುದು (ವ್ಯಕ್ತಿ ಗತ ಪ್ರತಿಕ್ರಿಯೆ ಕೂಡ, ಐತಿಹಾಸಿಕ ಆವಶ್ಯಕತೆ, ಸಾಮಾಜಿಕ ಪರಿವರ್ತನೆಗಳ ಫಲರೂಪವೇ ಎಂದು ವಾದಿಸಬಹುದಾದರೂ ಆ ವಾದವು ನಿರ್ದುಷ್ಟವಲ್ಲ. ವ್ಯಕ್ತಿ ಪ್ರತಿಕ್ರಿಯ, ಐತಿಹಾಸಿಕ ಆವಶ್ಯಕತೆ, ಸಾಮಾಜಿಕ ಪರಿವರ್ತನೆಗಳಿಗಿಂತ ಭಿನ್ನವಾಗಿಯೂ ಬರುತ್ತವೆ) ಹಾಗೆಯೇ ವಾಣಿಜ್ಯಕ ಆವಶ್ಯಕತೆಯಾಗಿ ಕೂಡ (Commercial need) ಕಲೆಗಳಲ್ಲಿ ಪರಿವರ್ತನೆಗಳು ಕಂಡು ಬರುತ್ತವೆ. ಇದರ ಒಂದು ಖಚಿತ ದೃಷ್ಟಾಂತ ತುಳು ಯಕ್ಷಗಾನ ರಂಗಭೂಮಿ,

ಐತಿಹಾಸಿಕ ಅನಿವಾರ್ಯವಾಗಿ ತುಳು ಯಕ್ಷಗಾನ ಬೆಳೆದು ಬರುವುದಿದ್ದರೆ, ಬಹಳ ಹಿಂದೆಯೇ ಹಾಗಾಗುವುದು ಹೆಚ್ಚು ಅವಶ್ಯಕತೆಯಿತ್ತೆನ್ನಬಹುದು. ಏಕೆಂದರೆ, ಈ ಶತಮಾನದ ಆರಂಭದವರೆಗೂ, ತುಳುನಾಡಿನಲ್ಲಿ ಕನ್ನಡ ಬಲ್ಲ ವರ ಸಂಖ್ಯೆ, ಇಂದಿನದಕ್ಕಿಂತ ಅದೆಷ್ಟು ಕಡಿಮೆ ಇದ್ದಿರಬೇಕು, ಇತ್ತು.ಆಗ ಬೆಳೆದುಬಾರದಿದ್ದ ತುಳುಯಕ್ಷಗಾನ, 1950ರ ನಂತರವೇ ಬೃಹತ್‌ಗಾತ್ರದಲ್ಲಿ
COOS$