ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳು : ಯಕ್ಷಗಾನ ನಿನ್ನೆ-ಇಂದು-ನಾಳೆ
೫೧

ಯಿಂದ, ಸಂಪೂರ್ಣವಾಗಿ, 'ನಾಟಕೀಯ'ವೆನ್ನುವ (ಅಂದರೆ ಕಂಪನಿ ನಾಟಕ ಗಳಿಂದ ರೂಪುಗೊಂಡ) ರೀತಿಯೇ ವ್ಯಾಪಕವಾಗಿದೆ. ಸಾಂಪ್ರದಾಯಿಕ ಯಕ್ಷಗಾನರಂಗ ವೇಷ ವಿಧಾನದಿಂದಲೇ, ತುಳು ಕತೆಗಳನ್ನಾಡುವ ಕ್ರಮ. ಆರಂಭದ ಹಂತದಲ್ಲಿ ಮಾತ್ರ ಇತ್ತು. ಇದೀಗ ಅದರ ಪುನಶ್ವೇತನದ (ವಿಶೇಷತಃ ಸಂಸ್ಕೃತ ಮೂಲದ ಪುರಾಣಕತೆಗಳಿಗೆ) ನಡೆದಿದೆ.

ನಾಲ್ಕುದಶಕಗಳ ಇತಿಹಾಸವುಳ್ಳ ಇಂದಿನ ತುಳುಯಕ್ಷಗಾನದ ಸಿದ್ಧಿ. ಮತ್ತು ವೈಫಲ್ಯಗಳ ಒಂದು ಸರಿಯಾದ ವಿವೇಚನೆ ಮತ್ತು ಮುನ್ನೋಟವುಳ್ಳ ರೂಪೀಕರಣಕ್ಕೆ ಇದು ಸಕಾಲ. ಸಾಂಸ್ಕೃತಿಕ ಪೂರ್ವಗ್ರಹಗಳಾಗಲಿ, ಕೇವಲ ಭಾವವಶತೆಯ ಚಳವಳಿ ಮನೋಧರ್ಮವಾಗಲಿ, ಬರಿಯ ನಾವೀನ್ಯವನ್ನು ಮುಟ್ಟುವ ದೃಷ್ಟಿಯಾಗಲಿ, ವಾಣಿಜ್ಯ ಪರ ಸಮರ್ಥನೆಗಳಾಗಲಿ ಈ ಗುರುತರ ವಾದ ಕೆಲಸಕ್ಕೆ ನೆರವಾಗಲಾರವು. ಬದಲಾಗಿ ಅವು ಬಾಧಕಗಳು. ಆದರೆ, ಯಕ್ಷಗಾನ ವಲಯದಲ್ಲಿ, ವೇದಿಕೆಗಳಲ್ಲಿ ಬಹಳಸಲ ಈ ಬಗೆಯ ನೋಟಗಳನ್ನ ಕಾಣುತ್ತೇವೆ-ತುಳುಯಕ್ಷಗಾನವನ್ನು ಸಮರ್ಥಿಸುವ ಅಥವಾ ಆಕ್ಷೇಪಿಸುವ ಎರಡೂ ಪಕ್ಷಗಳಲ್ಲಿ ಕಲೆಯ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿರುವ ಸೈದ್ಧಾಂತಿಕ ಗಟ್ಟಿತನ ಇರುವ ವಿಮರ್ಶೆ ಯಕ್ಷಗಾನದಲ್ಲಿ ಬೆಳೆಯದಿರುವುದೇ, ಯಕ್ಷಗಾನ ರಂಗದ ಪ್ರಧಾನ ಸಮಸ್ಯೆ. ಈ ಸಮಸ್ಯೆಯೇ ತುಳುಯಕ್ಷಗಾನದ ಇಂದಿನ ತಿಗೂ ಕಾರಣವೆಂದು ಬೇರೆ ಹೇಳಬೇಕಿಲ್ಲ. ವ್ಯಾಪಕವಾದ ಕಲಾತತ್ವಗಳ ಅನ್ವಯ, ಜತೆಗೆ ಯಕ್ಷಗಾನ ಕಲೆಗೆ ವಿಶಿಷ್ಟವಾದ ಮಾನದಂಡಗಳ ಅಳವಡಿಕೆ, ಉಚಿತವಾದ ನಾವೀನ್ಯವನ್ನು ಸ್ವೀಕರಿಸುವ ಮನೋಧರ್ಮ-ಈ ಮೂರರ ಸಮತೋಲವಾದ ಸಮನ್ವಯದಿಂದ ತುಳು ಯಕ್ಷಗಾನದ ವಿಮರ್ಶೆ ಬೆಳೆದು ನಿಲ್ಲಬೇಕಾಗಿದೆ.


*ಪುರಾಣವೆಂದರೆ ಜನಾಂಗಗಳಲ್ಲಿ ಪ್ರಚಲಿತವಿರುವ ಪ್ರಾಚೀನ ಕತೆಗಳ ಒಂದುರೂಪ. ಇಲ್ಲಿ ಭಾರತ ಭಾಗವತಾದಿ ಅಷ್ಟಾದಶ ಪುರಾಣಗಳನ್ನು, ಆರ್ಯಪುರಾಣ, ವೈದಿಕಪುರಾಣ ಎಂದೆಲ್ಲ ಕರೆಯಲಾಗಿದ್ದರೂ, ಸಂಸ್ಕೃತ ಮೂಲದ ಪುರಾಣಗಳೆಂದು, ಸ್ಪಷ್ಟತೆಗಾಗಿ ಹೆಸರಿಸಲಾಗಿದೆ.