ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೦
ಮಾರುಮಾಲೆ

ಭಾಷಾದೃಷ್ಟಿಯಿಂದ:
---ಪದ್ಯಗಳು-ಅರ್ಥ (ಮಾತುಗಾರಿಕೆ) ಎರಡೂ ಕನ್ನಡದಲ್ಲಿ ಕತೆ ತುಳು
---ಸಂಸ್ಕೃತಿಯದು.
---ಪದ್ಯ ರಚನೆ ಕನ್ನಡ-ಮಾತುಗಾರಿಕೆ-ಕನ್ನಡ ಮತ್ತು ತುಳುವಿನಲ್ಲಿ.
---ಪದ್ಯ ರಚನೆ ಮಾತುಗಾರಿಕೆ ಎರಡೂ ತುಳುವಿನಲ್ಲಿ.
---ಪದ್ಯ, ಮಾತು ಎರಡೂ ಎರಡು ಭಾಷೆಗಳಲ್ಲಿ ಮಿಶ್ರಣ.
---ಈ ಪ್ರಯೋಗಗಳೆಲ್ಲದರಲ್ಲಿ, ಕೆಲವು ಪಾತ್ರಗಳಲ್ಲಿ ಮಲಯಾಳದ
---ಬಳಕೆಯೂ ಇರುವುದುಂಟು.
ಕಥಾ ವಸ್ತುವಿನ ದೃಷ್ಟಿಯಿಂದ :
---ತುಳು ನಾಡಿಗೆ ಸಂಬಂಧಿಸಿದ ಕತೆ.
---ಸಂಸ್ಕೃತ ಮೂಲದ (ಭಾರತ ಭಾಗವತಾದಿ) ಪುರಾಣ.
---ಸಂಸ್ಕೃತ ಮೂಲದ ಕತೆ, ತುಳು ಕತೆಗಳ ಮಿಶ್ರಣ.
---ಜಾನಪದ ವಲದ, ತುಳುವೇತರ ಕತೆ.
---ನಾಟಕ, ಇತಿಹಾಸಗಳ ರೂಪಾಂತರ.
---ಕಾಲ್ಪನಿಕ.
---ಸಿನಿಮಾ ಕತೆಗಳ ತುಳು-ಯಕ್ಷಗಾನ ರೂಪಾಂತರ.
ವೇಷ ಭೂಷಣ ದೃಷ್ಟಿಯಿಂದ :
---ಸಾಂಪ್ರದಾಯಿಕ ಯಕ್ಷಗಾನ ವೇಷಗಳು.
---ನಾಟಕ (ಐತಿಹಾಸಿಕ, ಪೌರಾಣಿಕ ನಾಟಕಗಳ ಜನಪ್ರಿಯ ಶೈಲಿ)
---ಮಿಶ್ರಿತ
---ಮೇಲೆ ವಿವರಿಸಿದ ಅಂಶಗಳು, 1950ರ ಬಳಿಕ ಈವರೆಗೆ ಬೇರೆ ಬೇರೆ ಹಂತಗಳಲ್ಲಿ ಬಳಕೆಯಾದ ಪ್ರವೃತ್ತಿಗಳು. ಇವುಗಳ ಪೈಕಿ ಇದೀಗ ಭಾಷಾ ದೃಷ್ಟಿಯಿಂದ ಪದ್ಯ, ಅರ್ಥ ಎರಡಕ್ಕೂ ತುಳುವನ್ನೆ ಬಳಸಲಾಗುತ್ತಿದೆ. ಕಥಾದೃಷ್ಟಿಯಿಂದ, ಮೇಲೆ ಹೇಳಿದ ಎಲ್ಲ ರೀತಿಗಳೂ ಇದ್ದರೂ, ಕಾಲ್ಪನಿಕ, ರೂಪಾಂತರಿತ ಮತ್ತು ಸಿನಿಮೀಯವೆಂಬ ಪ್ರಕಾರಗಳು ಹೆಚ್ಚು. ವೇಷದೃಷ್ಟಿ