ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳುಯಕ್ಷಗಾನ ನಿನ್ನೆ ಇಂದು ನಾಳೆ
55

ಯಕ್ಷಗಾನ ರಂಗದ ಬೆಳವಣಿಗೆ ಆಗುತ್ತಿದ್ದರೆ, ಎಷ್ಟು ಉತ್ಕೃಷ್ಟವಾಗುತ್ತಿತ್ತು ಅನಿಸುತ್ತದೆ. ಆದರೆ, ಅದೀಗ ಊಹೆ ಮಾತ್ರ.

ಆರಂಭದಲ್ಲಿ ಇದು ಊಹೆ ಮಾತ್ರವಾಗಿ ಇರಲಿಲ್ಲ. 1940, 50ರ ದಶಕಗಳಲ್ಲಿ, ವಿಶೇಷತಃ 'ಕೋಟಿ ಚನ್ನಯ ಪ್ರಸಂಗದ ತುಳು ಮತ್ತು ಕನ್ನ ಡದ ಪ್ರದರ್ಶನಗಳಲ್ಲಿ, ಸಾಂಪ್ರದಾಯಿಕ ವೇಷಭೂಷಣಗಳನ್ನೂ, ರಂಗಕ್ರಮ ಗಳನ್ನೂ ಅಳವಡಿಸಿ ಆಡುತ್ತಿದ್ದರು. ಅಂದಿನ ಕದ್ರಿಮೇಳ, ಈ ಪದ್ಧತಿಯನ್ನು ಅಳವಡಿಸಿತ್ತು. ಇತ್ತೀಚೆಗೆ ಪುನಃ, ತುಳು ಪ್ರಸಂಗಗಳನ್ನು ಸಾಂಪ್ರದಾಯಿಕ ವೇಷಗಳೊಂದಿಗೇ ಪ್ರದರ್ಶಿಸುವ ಕ್ರಮವನ್ನು ಪುನರುಜ್ಜಿವನಗೊಳಿಸುವ ಯತ್ನಗಳು ನಡೆದಿವೆ. (ಕರ್ನಾಟಕ, ಸುರತ್ಕಲ್ ಮೇಳಗಳಲ್ಲಿ) ಇದರ ಭವಿಷ್ಯ ವನ್ನು ಕಾದುನೋಡಬೇಕಾಗಿದೆ.

ತುಳು ಯಕ್ಷಗಾನ ಪ್ರದರ್ಶನಗಳು, ಒಂದು ಐತಿಹಾಸಿಕ-ಕಲಾತ್ಮಕ ವಾದ ಸನ್ನಿವೇಶದ ಫಲಸ್ವರೂಪವಾಗಿ ಬರಲಿಲ್ಲ, ಬದಲಾಗಿ ಒಂದು ವ್ಯಾವ ಹಾರಿಕ ಆವಶ್ಯಕತೆಯಾಗಿ ಬಂದು, ಆ ಬಳಿಕ ಒಂದು ಅನಿವಾರ್ಯ ಅವಶ್ಯಕತೆ ಎನಿಸಿ ಬೆಳೆದು ಬಂತು. ಆಗ ಅನ್ಯವರ್ಗದ, ಅನ್ಯ ಪರಂಪರೆಯ, ಮುಖ್ಯತಃ ಮೇಲ್ವರ್ಗದ ಅಭಿರುಚಿಯಾದ ಪುರಾಣಪ್ರಸಂಗ (ಸಂಸ್ಕೃತ ಮೂಲದ ಪುರಾಣ)ಗಳನ್ನು ತನ್ನ ಅಭಿರುಚಿಯಾಗಿಯೇ ಒಪ್ಪಿಕೊಂಡಿದ್ದ, ತುಳುಜನತೆ, ಇದೀಗ ತಮ್ಮ ಭಾಷೆಯ, ಅಭಿರುಚಿಯ ಪ್ರದರ್ಶನಗಳನ್ನು ಸ್ವಾಗತಿಸಿತು. ಆರ್ಥಿಕ, ಸಾಮಾಜಿಕ ಸ್ವಂತಿಕೆಯನ್ನು ತುಳುವರಲ್ಲಿ ಬಹುಪಾಲು ಜನ ಗಳಿಸ ಲಾರಂಭಿಸಿದ್ದರಿಂದಲೇ (1950ರ ಬಳಿಕದ ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಗತಿಯಿಂದಾಗಿ ತುಳು ಯಕ್ಷಗಾನ, ತುಳುವರಿಗೆ ತಮ್ಮ ಅಸ್ತಿತ್ವದ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ, ರಂಗಪ್ರಕಟನವಾಗಿ ಬಂತು. ತುಳು ಬದುಕಿನ ಚಿತ್ರಣದಿಂದ ಆತ್ಮೀಯವೂ ಆಯಿತು. ಇಂತಹ ಸನ್ನಿವೇಶದಲ್ಲಿ ಶೈಲಿ ಮೂಲೆಪಾಲಾದದ್ದು, ಪ್ರಮುಖ ಸಂಗತಿ ಆಗಿರಲಿಲ್ಲ, ಅದು ಮುಖ್ಯವಾಗಿ ಇರಬೇಕಾಗಿದ್ದುದು, ಕಲಾವಿದರಿಗೆ, ಕಲಾವ್ಯವಸಾಯಿಗಳಾದ ಮೇಳಗಳಿಗೆ