ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
56
ಮಾರುಮಾಲೆ

ಅವರಿಗೆ ಆ ಅವಶ್ಯಕತೆ ಗೋಚರಿಸಲಿಲ್ಲವೊ, ಅನಿವಾರ ಅನಿಸಲಿಲ್ಲವೋ, ಅಥವಾ ಅಂತಹ ಒಂದು ಸಮಸ್ಯೆಯೇ ಅಂದರೆ ತುಳು ಯಕ್ಷಗಾನದ ಪ್ರದ ರ್ಶನ ಮತ್ತು ಸಾಂಪ್ರದಾಯಿಕ ರಂಗರೂಪಗಳ ದ್ವಂದ್ವ-ಅವರನ್ನು ಕಾಡ ಲಿಲ್ಲವೊ, ಏನೋ, ಅಂತೂ, ತುಂಬ ಪ್ರಮುಖವಾದ ಸಂಕ್ರಮಣ ಘಟ್ಟದಲ್ಲಿ ಈ ಸಮಸ್ಯೆ ಅಲಕ್ಷಿಸಲ್ಪಟ್ಟುದು ಖೇದಕರ. ಹೀಗೆ, ಬದಲಾದ ಸಾಮಾಜಿಕ ಸ್ವರೂಪದ ಪ್ರತಿಫಲವಾಗಿ ಬಾರದಿದ್ದರೂ, ತುಳು ಯಕ್ಷಗಾನವು, ಬದಲಾದ ತುಳುವರ ಸಾಮಾಜಿಕ, ಆರ್ಥಿಕ ಸಮಾಜ ಸ್ವರೂಪ ಸಂದರ್ಭಕ್ಕೆ ಹೊಂದಿಕೆ ಯಾಗಿ, ಬೆಳೆಯಲು ಅನುಕೂಲವಾಯಿತು. ಕಲೆಯ ಪ್ರಜಾತಂತ್ರೀಯ ಕರಣ ೆ (Democratization of art)ದ ಒಂದು ಹಂತ ಎಂದು ಇದನ್ನು ಕರೆಯು ಬಹುದು. ಜತೆಗೆ, ಕಲಾಮೌಲ್ಯಗಳು ಅಪಮೌಲ್ಯಗೊಂಡುದೂ ಸತ್ಯ. ಅದು ಪ್ರತ್ಯೇಕ ವಿಷಯ.

ತುಳು ಯಕ್ಷಗಾನಗಳು ಬಲುಬೇಗ ಜನಪ್ರಿಯತೆಯನ್ನೂ, ವ್ಯವಹಾರಿಕ ಯಶಸ್ಸನ್ನೂ ಗಳಿಸಿದಂತೆ, ಸಾಕಷ್ಟು ವಿವಾದಗಳನ್ನೂ ವಿರೋಧಗಳನ್ನು ಎದು ರಿಸಬೇಕಾಯಿತು. ಯಕ್ಷಗಾನ ವಲಯಗಳಲ್ಲಿನ ಮೌಲಿಕ ವಿಮರ್ಶೆ, ಗೋಪಿ ಕಮ್ಮಟಗಳು, ಪತ್ರಿಕೆಗಳಲ್ಲಿ ಪ್ರಕಟವಾದ ಅಭಿಪ್ರಾಯಗಳು-ಇವುಗಳಲ್ಲಿ ಇವು ಕಂಡುಬರುತ್ತಿದ್ದು, ತುಳು ಯಕ್ಷಗಾನಗಳ ಬಗೆಗೆ ಪ್ರಬಲವಾದೊಂದು ವಿರೋಧವಿರುವುದನ್ನು ಕಾಣುತ್ತೇವೆ. ಈ ವಿರೋಧದ ಹಿಂದೆ ಸಾಂಸ್ಕೃತಿಕ ಪೂರ್ವಾಗ್ರಹ, ಸಂಸ್ಕೃತ ಪುರಾಣಗಳ ಕಡೆಗೆ ಒಲವು, ತುಳುಭಾಷೆಯ ಬಗೆಗಿನ ತಿರಸ್ಕಾರ ಮುಂತಾದವುಗಳು ಇರಬಹುದಾದರೂ, ಅವುಗಳೇ ಕಾರಣವೆನು ವಂತಿಲ್ಲ. ಕಲೆಯ ಬಗ್ಗೆ, ಯಕ್ಷಗಾನದ ಸೌಂದಯ್ಯ, ಸತ್ವ, ಗಾಂಭೀರಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇರುವವರು ಚಿಂತಿತರಾಗಬೇಕಾದ, ಗಂಭೀರ ಪ್ರಶ್ನೆ ಗಳನ್ನು ಸಮಸ್ಯೆಗಳನ್ನು ತುಳು ಯಕ್ಷಗಾನಗಳು ಒಡ್ಡಿವೆ ಎಂಬುದು ನಿರ್ವಿ ವಾದ ಸತ್ಯವಾಗಿದೆ. ಶೈಲಿಯ ಬಗೆಗಿನ ಬದ್ಧತೆ, ಯಕ್ಷಗಾನದ ಅಂಗೋ ಪಾಂಗಗಳ ಪರಿಜ್ಞಾನ ಮತ್ತು ಹೊಸತನ್ನು ಸ್ವೀಕರಿಸಬಲ್ಲ ಮುನ್ನೋಟ, ಇವು