ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
60
ಮಾರುಮಾಲೆ

ಈ ಮಾದರಿ, ರಂಗವನ್ನು ವಾಸ್ತವದತ್ತ ಎಳೆಯಿತು. ಈ ಎಳೆತದ ಹಿಂದೆ ಇನ್ನೊಂದು ದ್ವಂದ್ವಾತ್ಮಕತೆಯಿತ್ತು.

ಶಿಷ್ಟxಜಾನಪದ

ಯಕ್ಷಗಾನದ ಮೂಲ ಜಾನಪದವೇ ಇದ್ದರೂ, ಅದು ಬೆಳೆದುನಿಂತ ರೂಪದಲ್ಲಿ ಅದು ಸ್ಥಿರೀಕರಣಗೊಂಡ (Crystalised) ಮತ್ತು ಶಿಷ್ಟ ಶಾಸ್ತ್ರೀಯ ಕಲಾರೂಪ, ಅದನ್ನು ತುಳುಭಾಷೆಗೆ ಅಳವಡಿಸುವಾಗ, ಶಿಷ್ಯ ಜಾನಪದಗಳ ಸಂಬಂಧ ಸಮನ್ವಯದ ಸಮಸ್ಯೆ ಸಹಜವಾಗಿಯೆ ಬಂತು. ಇವ ಕಾರಣ, ತುಳು-ಕನ್ನಡಗಳ ಸಂಬಂಧದ ಐತಿಹಾಸಿಕ ಸಾಮಾಜಿಕ ಸ್ವರೂಪದಲ್ಲಿದೆ

ತುಳು ನಾಡಿನಲ್ಲಿ, ಐತಿಹಾಸಿಕ ಕಾರಣಗಳಿಂದ ನೆಲೆನಿಂತ ಕನ್ನಡ ಭಾಷೆ. ಶಿಷ್ಟ ಕಾವ್ಯ, ಕಲೆಗಳ ಭಾಷೆಯಾಗಿ ಅಂಗೀಕೃತವಾಯಿತು. ಅದಕ್ಕೆ 'ದೊಡ್ಡ ಸಂಸ್ಕೃತಿ' (Greater Culture) ನ ಸ್ಥಾನವೂ, ತುಳುವಿಗೆ 'ಚಿಕ್ಕ ಸಂಸ್ಕೃತಿ ಯ ಸ್ಥಾನವೂ (Lower culture) ಒಂದು ಸಾಮಾಜಿಕ ಗ್ರಹಿಕೆಯಾಯಿತು. ಇದರ ಸರಿ-ತಪ್ಪುಗಳನ್ನು ನಾನಿಲ್ಲಿ ಚರ್ಚಿಸುತ್ತಿಲ್ಲ. ಹಾಗೊಂದು ಸಾಮಾನ್ಯ ಗ್ರಹಿಕೆ ಇದ್ದುದು ನಿಜ ಎಂಬುದನ್ನಷ್ಟೆ ಹೇಳುತ್ತಿದ್ದೇನೆ. ತುಳು ಜನಸಾಮಾ ನ್ಯರ ಭಾಷೆಯಾಗಿ, ಜನಮನದ ಅಭಿವ್ಯಕ್ತಿ ಮಾಧ್ಯಮವಾಗಿ ಬಹುಕಾಲದಿಂದ ಇದ್ದು, ಅದರಲ್ಲಿ ಜಾನಪದದ ಬಾಹುಳ್ಯವಿದೆ. ಶಿಷ್ಟಕಲೆ, ಸಾಹಿತ್ಯ ಕಡಿಮೆ. ಬದಲಾಗಿ ಕನ್ನಡ ಪಂಡಿತ ಭಾಷೆಯಾಗಿ ರೂಪುಗೊಂಡು ಬಂದಿದೆ (ಇಲ್ಲಿನ ಕನ್ನಡದಲ್ಲಿ ಜಾನಪದ ಇದೆ ನಿಜ. ಆದರೆ ಅದು ತುಳುನಾಡಿನ ಬಹು ಮಂದಿಗೆ, ಕಲಿತು ಬರುವ ಭಾಷೆ) ಹೀಗಾಗಿ ಕನ್ನಡದಲ್ಲಿ ಇದ್ದ, ಶಿಷ್ಟ ವಾದ ಯಕ್ಷಗಾನವನ್ನು, 'ಜಾನಪದ' ಪ್ರಧಾನವಾದ ತುಳುವಿಗೆ ತರುವಾಗ, ಭಿನ್ನತೆ ಬೇಕು, ಅದರಂತೆ ಇದ್ದರೆ ಸರಿಯಲ್ಲ ಎನಿಸಿ, ಅವಸರದ ಬದಲಾವಣೆ ಜರುಗಿತು. ಭಿನ್ನ ಸ್ವರೂಪದ ಸೃಷ್ಟಿಯ ಪ್ರಕ್ರಿಯೆ ಆರಂಭದಲ್ಲಿ ಶೈಲಿಯ ದೃಷ್ಟಿಯಿಂದ ಅವ್ಯವಸ್ಥಿತವಾಯಿತು.