ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳುಯಕ್ಷಗಾನ ನಿನ್ನೆ-ಇಂದು-ನಾಳೆ
61


ಪುರಾಣ X ಪುರಾಣೇತರ
ತುಳು ಯಕ್ಷಗಾನಗಳ ಪ್ರಯೋಗ, ಈಚಿನ ಅವಧಿಯಲ್ಲಿ ಆರಂಭವಾಗು ವವರೆಗೆ, ಇದ್ದುದು ಪೌರಾಣಿಕ ಪ್ರಸಂಗಗಳೇ. (ಅಂದರೆ ಸಂಸ್ಕೃತ ಮೂಲ ದಿಂದ ಬಂದ ಪುರಾಣಕತೆಗಳ ಪ್ರಸಂಗಗಳು) ತುಳು ಪ್ರಸಂಗ ಎಂದರೆ, 'ಪುರಾಣೇತರ' ಎಂಬ ಗ್ರಹಿಕೆ ವ್ಯಾಪಕವಾಯಿತು. ತುಳು ಪ್ರಸಂಗಕ್ಕಿಂತ ಯಕ್ಷಗಾನಕ್ಕೆ ಪೌರಾಣಿಕವೇ ಸೂಕ್ತ” “ಅದು ತುಳು ಪ್ರಸಂಗ, ಪೌರಾಣಿಕ ಅಲ್ಲ" "ತುಳು ಕತೆ ಯಾಕಾಗದು, ಪೌರಾಣಿಕವೇ ಆಗಬೇಕೆಂದೇನು?” ಮುಂತಾಗಿ ಯಕ್ಷಗಾನದ ವಲಯಗಳಲ್ಲಿ ಕೇಳಿಬರುವ ಮೌಖಿಕ ವಿಮರ್ಶೆಯಲ್ಲಿನ ಅಭಿಪ್ರಾಯಗಳಿಗೆ, ಈ ಗ್ರಹಿಕೆಯೇ ಮೂಲ. ಇಲ್ಲಿ ಪುರಾಣವೆಂದರೆ, ಭಾರತ ಭಾಗವತಾದಿಗಳು, ಅದಲ್ಲದ್ದು ಪುರಾಣೇತರ ಎಂದರ್ಥ, ಎಪ್ಪತ್ತರ ದಶಕದ ನಂತರ ಬಂದಿರುವ ಹೆಚ್ಚಿನ ಪ್ರಸಂಗ ಸಾಹಿತ್ಯ ಕಾಲ್ಪನಿಕ ಅಥವಾ ಅನ್ಯಮೂಲಗಳದ್ದೆ ಆಗಿರುವುದೂ ಈ ಮಾತಿನ ಹಿಂದಣ ಆಧಾರವಿರಬಹುದು.
ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕಾದುದಿದೆ.ಪುರಾಣ ಎಂದರೆ ಭಾಗವತಾದಿ ಅಷ್ಟಾದಶ ಪುರಾಣಗಳು ಮಾತ್ರ, ಅಥವಾ ಸಂಸ್ಕೃತ ಮೂಲ ದಿಂದ ಬಂದಿರುವ ಪುರಾಣ ಸಾಹಿತ್ಯ ಮಾತ್ರ ಎಂಬ ಗ್ರಹಿಕೆ ಸೀಮಿತವಾದದ್ದು. ಪುರಾಣವೆಂದರೆ ವಿವಿಧ ಜನಾಂಗಗಳಲ್ಲಿ ಪರಂಪರೆಯಿಂದ ಬಂದಿರುವ ಕಥಾ ಪ್ರಕಾರ. ಅದಕ್ಕೆ Myth-legend ಎನ್ನುವರು. ಈ ಅರ್ಥದಲ್ಲಿ ಕೋಟಿ ಚನ್ನಯ, ತುಳುನಾಡಸಿರಿ, ಪಂಜರ್ಲಿಕತೆ ಇವುಗಳೆಲ್ಲ ತುಳುನಾಡಿನ ಪುರಾಣ ಗಳೇ. ಇದು ಶಾಸ್ತ್ರೀಯವಾದ ದೃಷ್ಟಿ, ಆದರೆ, ಒಂದು ವಿಷಯ ನಿಜ. ಅದೆಂದರೆ, ಸಂಸ್ಕೃತದ ಪುರಾಣಗಳಿಗೂ ತುಳುನಾಡಿನ ಪುರಾಣಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅದು ಮುಖ್ಯವಾಗಿ ವ್ಯಾಪಕತೆ ಮತ್ತು ಪ್ರಾದೇಶಿ ಕತೆಗಳಿಗಿರುವ ಅಂತರ.
ಪ್ರಾದೇಶಿಕತೆ ವ್ಯಾಪಕತೆ
ಹೀಗಾಗಿ ತುಳು ಯಕ್ಷಗಾನ ರಂಗವು ಪ್ರಾದೇಶಿಕ ವಸ್ತು, ವ್ಯಾಪಕತೆ ಯುಳ್ಳ ವಸ್ತು ಇವುಗಳ ಒಂದು ದ್ವಂದ್ವವನ್ನೂ ಮುಂದೊಡ್ಡಿತು. ತುಳು