ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
62
ಮಾರುಮಾಲೆ

ಪುರಾಣಗಳು ವಸ್ತು, ವಿವರ, ಪ್ರತಿಪಾದನೆಗಳಲ್ಲಿ ತೀರ ಪ್ರಾದೇಶಿಕ ರೂಪದ್ದು. ಭಾಗವತಾದಿ ಪುರಾಣಗಳ ವಸ್ತು, ಸಮಸ್ಯೆ ದರ್ಶನಗಳು ಹೆಚ್ಚು ವ್ಯಾಪಕವಾ ದುವು. ಇಲ್ಲಿ ಹೋಲಿಕೆ ಅಥವಾ ತಾರತಮ್ಯದ ಪ್ರಶ್ನೆ ಇಲ್ಲ. ಅದು ಹಾಗೆ, ಇದು ಹೀಗೆ ಇದೆ ಅಷ್ಟೆ. ಇದಕ್ಕೆ, ಆ ಆ ಪುರಾಣಗಳು ಹುಟ್ಟಿ ಬೆಳೆದ ಜನಾಂಗಗಳ ವಿಭಿನ್ನ ಸಾಮಾಜಿಕ ಸ್ವರೂಪ, ಇತಿಹಾಸ, ಅವರು ಇದಿರಿಸಿದ ಸಮಸ್ಯೆಗಳು, ಮುಂತಾದುವು ಕಾರಣ. ಆದರೆ, ಯಕ್ಷಗಾನವು ಬೆಳೆಸಿಕೊಂಡಿ ರುವ ವೇಷ, ಗಾನ, ಅಭಿವ್ಯಕ್ತಿ, ವಿಧಾನ, ಮಾತಿನ ರೀತಿ ಇವುಗಳು-ಒಟ್ಟಿನಲ್ಲಿ ಅದರ ಕಲಾಭಾಷೆ-ಸಂಸ್ಕೃತ ಪುರಾಣ ಕತೆಗಳಿಗೆ ಅಥವಾ ಅಂತಹ ವಿನ್ಯಾಸ ವುಳ್ಳವುಗಳಿಗೆ ಹೆಚ್ಚು ಹೊಂದಿಕೆಯಾಗುತ್ತವೆ. ಹಾಗಾಗಿಯೇ ತುಳು ಯಕ್ಷ ಗಾನ ಪ್ರದರ್ಶನಗಳಿಗೆ ವಿಭಿನ್ನತೆಯನ್ನು ಅಳವಡಿಸುವ ಯತ್ನ-ಅದು ಎಷ್ಟೇ ಅಸಮರ್ಪಕವಾಗಿರಲಿ ನಡೆದದ್ದು ಎನ್ನಬಹುದು. ಹೊಸ ಪ್ರಸಂಗಗಳನ್ನು ರಂಗಕ್ಕೆ ತರುವಾಗ, ಬಡಗುತಿಟ್ಟು ಯಕ್ಷಗಾನ ಮೇಳಗಳಿಗೆ ಈ ಸಮಸ್ಯೆ ಬರ ಲಿಲ್ಲ ಎಂಬುದು ಗಮನಾರ್ಹ. ಈ ದೃಷ್ಟಿಯಿಂದ, ತುಳು ಯಕ್ಷಗಾನ ರಂಗದ ಸಂದರ್ಭದಲ್ಲಿ ಬಡಗು-ತೆಂಕು ತಿಟ್ಟುಗಳ ಹೋಲಿಕೆ ಅಧ್ಯಯನಾರ್ಹ.
ಬಡಗು × ತೆಂಕು :
ತುಳು ಯಕ್ಷಗಾನ ಇರುವುದು ತೆಂಕುತಿಟ್ಟಿನಲ್ಲಿ. ಬಡಗು ತಿಟ್ಟಿನಲ್ಲಿ ಇಲ್ಲ. ಕಾರಣ ಬಡಗುತಿಟ್ಟು ಕನ್ನಡ ಭಾಷಾಪ್ರದೇಶ, ತೆಂಕುತಿಟ್ಟು ತುಳುಭಾಷಾ ಪ್ರದೇಶ. ಬಡಗಿನ ಕಲಾವಿದರಿಗೆ ತುಳು ಭಾಷೆ ಬರುವುದಿಲ್ಲ. ಇದು ಬಡಗಿನ ಪರಂಪರಾಗತ ಕಲಾರೂಪ, ಸಾಕಷ್ಟು ಉಳಿದು ಬರುವುದಕ್ಕೆ ಒಂದು ಕಾರಣವಾದ ಯೋಗಾ ಯೋಗ, ಬಡಗು ತಿಟ್ಟಿನಲ್ಲಿ ಸಾಕಷ್ಟು ಹೊಸಬಗೆಯ ಪ್ರಸಂಗಗಳು ಬಂದಿವೆ. ಆದರೂ ಅವು ಸಾರತಃ ಸಾಂಪ್ರದಾಯಿಕ ಪ್ರಸಂಗ (ಪೌರಾಣಿಕ) ಗಳಂತೆಯೇ ಇದ್ದು, ಅವುಗಳ ಪ್ರಯೋಗ ವಿಧಾನದಲ್ಲಿ ಅಂತಹ ವ್ಯತ್ಯಾಸಗಳಿಲ್ಲ. ಹಳೆ ಮಾದರಿ ವೇಷಗಳೇ ಹೊಸ ಪ್ರಸಂಗಗಳಲ್ಲಿ ಇವೆ.


  • ಅನ್ಯಪ್ರದೇಶದ ಓದುಗರಿಗಾಗಿ : ಸುಮಾರು ಉಡುಪಿಯಿಂದ ಉತ್ತರಕ್ಕೆ ಇರುವ ಪದ್ಧತಿ

ಬಡಗುತಿಟ್ಟು ದಕ್ಷಿಣಕ್ಕಿರುವುದು ತೆಂಕುತಿಟ್ಟು.