ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
64
ಮಾರುಮಾಲೆ

-ಗಾಂಭೀರಗೊಳಿಸದಿದ್ದರೆ, ಯಕ್ಷಗಾನಕ್ಕೆ ಹೊಂದುವುದಿಲ್ಲ.
-ಈ ದ್ವಂದ್ವವನ್ನು ತುಳು ಯಕ್ಷಗಾನ ಉತ್ತರಿಸಬೇಕಾಗಿದೆ.

ಮೇಲೆ ಚರ್ಚಿಸಿದ ವೈರುಧ್ಯಗಳಲ್ಲಿ ಕೆಲವು ವಾಸ್ತವವಿರಬಹುದು. ಕೆಲವು ಕಲಾರಂಗದಲ್ಲಿ ನಾವೀನ್ಯವು ಅಳವಡುವಾಗ ಮೂಡಿದ ಗ್ರಹಿಕೆಯ ಮಿತಿಗಳಿಂದ ಆದರೆ ಈ ಪ್ರಶ್ನೆಗಳನ್ನು ಉತ್ತರಿಸದೆ ತುಳು ಯಕ್ಷಗಾನರಂಗ ಒಂದು ಸರ್ವಾಂಗ ಪುಷ್ಟವಾದ ಕಲೆಯಾಗಿ ಬೆಳೆಯಲಾರದು. ಬಂದುವುಗಳಾಗಿರಬಹುದು.
ಈ ಸಮಸ್ಯೆಗಳು ಅಥವಾ ದ್ವಂದ್ವಗಳು ಬರಲು ಕಾರಣ, ತುಳು ಯಕ್ಷ ಗಾನಗಳ ಇಂದಿನ ಯುಗದ ಆರಂಭಕಾಲದಲ್ಲಿ ತೆಗೆದುಕೊಂಡ ನಿರ್ಧಾರಗಳ ಧೋರಣೆ. ಒಂದು ಶೈಲಿಯನ್ನೂ ಕ್ರಮವನ್ನೂ ಅನುಸರಿಸಿಕೊಂಡು ಬರುತ್ತಿದ್ದ ಸುದೀರ್ಘ ಇತಿಹಾಸವುಳ್ಳ ಒಂದು ಕಲೆಯಲ್ಲಿ, ಭಿನ್ನವಾದ ಬೆಳವಣಿಗೆಯ ಹಂತದಲ್ಲಿದ್ದ, ಆಡುಮಾತೊಂದನ್ನು ತಂದಾಗ ಉಂಟಾಗುವ ಸ್ಥಿತ್ಯಂತರವೇ ಸಾಕು, ಜತೆಗೆ ವೇಷಗಳನ್ನೂ ಬದಲಾಯಿಸಿದಾಗ ಗೊಂದಲವೇ ಉಂಟಾಯಿತು.
ಯಕ್ಷಗಾನ ಕನ್ನಡದಿಂದ ತುಳುವಿಗೆ ಒಂದು ಸಹಜವಾದ ಸಲೀಸಾಜ ಅವಸ್ಥಾಂತರ (Switch over) ಆಗಬೇಕಿದ್ದರೆ, ಅದೇ ವೇಷ ಅದೇ ಹಿಮ್ಮೇಳ ಗಳನ್ನು ಅದೇ ಕಲಾಭಾಷೆಯನ್ನು ಬಳಸಿ, ಕನ್ನಡದ ಬದಲು ತುಳುವನ್ನು ಅಳವಡಿಸಿದ್ದರೆ, ಅದೊಂದು ಸಮನ್ವಯಕ್ಕೆ ದಾರಿಯಾಗುತ್ತಿತ್ತು. ಪ್ರಸಂಗಗಳನ್ನ ಹಳೆಯ ಶೈಲಿಯಲ್ಲಿ ತುಳುವಿನಲ್ಲಿ ಆಡಿದ ಬಳಿಕ, ತುಳುವಿಗಾಗಿ ಪ್ರತ್ಯೇಕ ಒಂದು ಪ್ರಭೇದ ನಿರ್ಮಾಣವಾಗುತ್ತಿದ್ದರೆ, ಅದು ತೆಂಕುತಿಟ್ಟಿನ ಸಹಜವಾದ ಮುಂದುವರಿಕೆ ಆಗುತ್ತಿತ್ತು, ಬದಲಾಗಿ ಯಕ್ಷಗಾನಕ್ಕೆ ತುಳುವನ್ನು ತರುತ್ತಲೇ ನಾಟಕ ಶೈಲಿಯನ್ನು ಬೆರೆಸಿದುದರಿಂದ ಭಾಷೆ, ವಸ್ತುಗಳ ಹೊಸತನ ಕಲಾರೂಪದ ಮುಂದೆ ಒಡ್ಡಿದ್ದ ಸಮಸ್ಯೆಗಳು ಮತ್ತಷ್ಟು ಗೋಜಲಾದವು. ಸರ್ವಾಂಗ ಸುಂದರವಾದ ಶೈಲಿಗೆ ಹೊಸವಸ್ತು ಭಾಷೆಗಳ ಹೊಂದಿಕೆಯ ಸದವ ಕಾಶ ತಪ್ಪಿ, ಸಮನ್ವಯದ ಬದಲು ಬಿರುಕು ಉಂಟಾಯಿತು.