ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳು ಯಕ್ಷಗಾನ : ನಿನ್ನೆ-ಇಂದು-ನಾಳೆ
71

(ಉದಾ : ಅನಂತರಾಮ ಬಂಗಾಡಿ ಅವರ ಸಿರಿಕ್ರಿಷ್ಣ-ಚಂದ್ರಪಾಲಿ) ಪ್ರಸಂಗ ರಚನೆಯಲ್ಲಿ ಇಲ್ಲದಿದ್ದರೂ ಅಭಿವ್ಯಕ್ತಿಯಲ್ಲಿ ತುಳು ಸ್ವಭಾವ ಅದಕ್ಕೆ ಬಂದೇ ಬರುತ್ತದೆ.
ತುಳುನಾಡಿನ ಪ್ರಾಚೀನ ಕುಣಿತಗಳಾದ ಕರಂಗೋಲು, ಮಾದಿರ, ನಲಿಕೆ ಮುಂತಾದ ಹಲವು ಬಗೆಗಳನ್ನು, ಯಕ್ಷಗಾನೀಕರಿಸಿ ಅಳವಡಿಸಬಹುದು. ಇಲ್ಲಿ ಈ ಕುಣಿತಗಳನ್ನು ತಂದು ಪ್ರದರ್ಶಿಸುವ `ನರ್ತನ ವೈವಿಧ್ಯ ಪ್ರದರ್ಶನ'ವೇ ಉದ್ದೇಶವಾಗಿ, ಅದೊಂದು ಫ್ಯಾಶನ್ ಆಗಬಾರದು, ಕಲಾತ್ಮಕ ಪುನಃ ಸೃಷ್ಟಿ, ಔಚಿತ್ಯದೃಷ್ಟಿ ಮುಖ್ಯ.
ಅರ್ಥಗಾರಿಕೆಯಲ್ಲಿ, ತುಳುವನ್ನು ಬಹು ಚೆನ್ನಾಗಿ ಪ್ರಯೋಗಿಸಿದ ಕಲಾವಿದರಿದ್ದಾರೆ.* ಆದರೆ, ಇಂದಿನ ಒಟ್ಟು ತುಳು ಅರ್ಥಗಾರಿಕೆ ಸಮರ್ಪಕ ವಾಗಿಲ್ಲ. ಅದು, ನಿತ್ಯದ ಮಾತನ್ನೆ ರಂಗದಲ್ಲಿ ಆಡಿದಂತಿದೆ. ಇದು ಬದಲಾಗ ಬೇಕಾಗಿದೆ. ತುಳು ಆಟಗಳಲ್ಲಿ ಹಾಸ್ಯರಸಕ್ಕೂ, ಅಸಂಸ್ಕೃತ ಶೃಂಗಾರಕ್ಕೂ ಸಲ್ಲುತ್ತಿರುವ ಅತಿ ಪ್ರಾಶಸ್ತ್ರವೂ ಬದಲಾಗಬೇಕಾಗಿದೆ. ಅರ್ಥಗಾರಿಕೆಗೆ ತುಳು ರಚಿತ ಪಾಡ್ಡನ ಕಥೆಗಳ, ಶಿಷ್ಟ ಕಾವ್ಯಗಳ ಪೋಷಕ ದ್ರವ್ಯದಿಂದ ರಕ್ತಮಾಂಸ ಒದಗಿ ಬರಬೇಕಾಗಿದೆ.ಜತೆಗೇ ಬದುಕಿನ ಜತೆ ಕಲೆಯ ಸಂವಾದಿತ್ವ, ಅರ್ಥ ಪೂರ್ಣವಾಗಿ ಪ್ರಸ್ತುತವಾಗಬೇಕು. ನಾಳಿನ ತುಳುನಾಡೇ ಬದಲಾಗದಿರು ವಂತಹದು, ಆಗ ಇನ್ನೇನು ಸವಾಲುಗಳು ಕಾದಿವೆಯೋ.
ತುಳು ಯಕ್ಷಗಾನಗಳಿಂದ, ತೆಂಕುತಿಟ್ಟು ತನ್ನ ರೂಪವನ್ನೆ ಕಳಕೊಂಡಿ ತೆಂಬ ಮಾತು, ದೂರವಾಗಿ, ಸಾಂಪ್ರದಾಯಿಕ ತಿಟ್ಟು ಮತ್ತೆ ಊರ್ಜಿತವಾಗಲಿ. ತನ್ನ ಉದಯಕ್ಕೆ ಚಿಗುರುವಿಕೆಗೆ ಕಾರಣವಾದ ಮೂಲವನ್ನೇ, ತುಳು ಯಕ್ಷ ಗಾನ ನಾಶಮಾಡದಿರಬೇಕಾದರೆ, ಹಳೆತಿಟ್ಟಿನಲ್ಲಿ ತುಳುತಿಟ್ಟು ಸೇರಿಹೋಗ
————
*ದಿ।। ಬೋಳಾರ ನಾರಾಯಣ ಶೆಟ್ಟಿ, ಸಾಮಗ ಸೋದರರು, ಅಣ್ಣಪ್ಪ ಹಾಸ್ಯಗಾರ, ಗೋಪಾಲಶೆಟ್ಟಿ, ಅಳಕೆ ರಾಮಯ್ಯರೆ, ಇತ್ಯಾದಿ.