ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ






ಶರಸೇತು ಬಂಧನ: ಒಂದು ಅಧ್ಯಯನ


"ಶರಸೇತು ಬಂಧನ” ಅಥವಾ “ಶರಸೇತು ಭಂಗ” ಎಂದು ಕರೆಯಲ್ಪ ಡುವ ಸುಭದ್ರಾ ಕಲ್ಯಾಣ (ಕವಿ : ಹಟ್ಟಿಯಂಗಡಿ ರಾಮಭಟ್ಟ) ಪ್ರಸಂಗದ ಮೊದಲ ಭಾಗವು. ತಾಳಮದ್ದಲೆಯ ಕ್ಷೇತ್ರದಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸಿರುವ ಒಂದು ಕಥಾಭಾಗ, ಈ ಭಾಗವನ್ನಷ್ಟೆ ತಾಳ ಮದ್ದಲೆಯಾಗಿ ಪ್ರದರ್ಶಿಸುವ ಪದ್ಧತಿ 1960 ರ ಬಳಿಕ ಹೆಚ್ಚು ರೂಢಿಗೊಂಡಂತೆ ಕಾಣು ತ್ತದೆ. ಹಿಂದೆ ಇಡಿಯ ಸುಭದ್ರಾ ಕಲ್ಯಾಣ ಪ್ರಸಂಗವನ್ನು ಪ್ರದರ್ಶಿಸುವಾಗ ಈ ಕಥಾ ಭಾಗವೂ ಪ್ರಮುಖವಾಗಿಯೇ ಇದ್ದರೂ, ಇದಕ್ಕೆ ಪ್ರತ್ಯೇಕವಾದ ಪ್ರಾಶಸ್ತ್ಯ ಬಂದುದು ಆ ಬಳಿಕವೇ ಇರಬೇಕು. ವಸ್ತು, ರಚನೆ, ತಂತ್ರ, ನಾಟಕೀಯತೆ ಈ ಎಲ್ಲ ಅಂಶಗಳಲ್ಲೂ ಸಶಕ್ತವಾಗಿರುವ ಈ ಕಥಾ ಭಾಗವನ್ನು ಪ್ರದರ್ಶನದ ದೃಷ್ಟಿಯಿಂದ, ಮುಖ್ಯವಾಗಿ ಅರ್ಥಗಾರಿಕೆಯ ದೃಷ್ಟಿಯಿಂದ ಅಭ್ಯಸಿಸುವ ಒಂದು ಪ್ರಯತ್ನ ಇದು.
ಯಾವುದೇ ಯಕ್ಷಗಾನ ಪ್ರಸಂಗಕ್ಕೂ, ಪದ್ಯಗಳು ನೇರವಾಗಿ ಹೇಳುವ ಸರಳ ಅರ್ಥ, ಆಶಯ, ಅದರ ಆಕರವಾದ ಕಾವ್ಯದಲ್ಲಿ ಕಾಣಸಿಗುವ ಅರ್ಥ ಗಳು ಪ್ರಯೋಗ ಪರಂಪರೆಯಿಂದ ಕಲಾವಿದ, ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆ ಗೊಂಡ ಒಂದು ಅರ್ಥ, ಒಬ್ಬೊಬ್ಬ ಅರ್ಥಧಾರಿಯೂ ಕಾಣಬಹುದಾದ ಹಲವು ಅರ್ಥ, ಹೀಗೆ ಭಿನ್ನ ಭಿನ್ನವಾದ ಅರ್ಥಗಳು, ಆಶಯಗಳು ಇರುತ್ತವೆ. ಮತ್ತು ಇವು ಒಂದಕ್ಕೊಂದು ತೀರ ಭಿನ್ನವಾಗಿ ಇರುವುದೂ ಸಂಭವ. ಈ ಭಿನ್ನವಾದ ನೆಲೆಗಳ ಚರ್ಚೆಗೆ ಮೊದಲು, ಪ್ರಸಂಗವನ್ನೊಮ್ಮೆ ನೋಡೋಣ :