ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
74
ಮಾರುಮಾಲೆ

ಭಾಮಿನಿ


ಧಾರಿಣೀಸುರರಗ್ರಹಾರವ । ಸೂರೆಗೊಳುತಿಹ ತಸ್ಕರರ ಯಮ । ನೂರ ಹೊಂದಿಸಿ ಬಳಿಕ ರವಿಯುದಯದಲಿ ಫಲುಗುಣನು ॥ ಸಾರಿ ಗಂಗೆಯ ಮೇಲೆ ಶೇಷ ಕು। ಮಾರಿ ಲೂಪಿಯನೊಲಿಸಿಯವಳಲಿ । ಚಾರು ಸುತನನು ಪಡೆದು ಮುಂದಕೆ ತೆರಳನೊಲವಿನಲಿ ।। ೧।।

ರಾಗ ಕಾಂಭೋಜಿ ಝಂಪೆ ತಾಳ


ಪಾರ್ಥಿವಾಗ್ರಣಿ ಕೇಳು ಬಳಿಕಲಲ್ಲಲ್ಲಿರುವ । ತೀರ್ಥ ತೀರ್ಥ೦ಗಳೆಲ್ಲರಲಿ ।। ಅರ್ತಿಯಲಿ ಮಿಂದು ತಾನಂದು ನೋಡಿದನು । ಪಾರ್ಥನುರೆ ಸೇತುಬಂಧ ವನು ।।೧।। ಬಂದಲ್ಲಿ ರಘವರ್ಯನಿಂದ ರಚಿಸಿದ ಸೇತು । ಬಂಧವನು ಕಂಡು ನಸುನಗುತ ।। ಮುಂದೆ ಸೂಕ್ಷ್ಮಾಕಾರದಿಂದ ತಪಿಸುವ ಅನಿಲ । ನಂದನನ ಕಂಡು ಬೆಸಗೊಂಡ ।। ೨ ।। ಆರು ವನಚರ ನೀನು ಈ ರೀತಿಯಿಂದಬುಧಿ । ತೀರದಲ್ಲಿ ನೆಲಸಿಕೊಂಡಿರುವ ।। ಕಾರಣವ ಹೇಳೆನುತ ವೀರಪಾರ್ಥನು ಕೇಳೆ । ಮಾರುತಾ ತ್ಮಜ ನುಡಿದನಾಗ ।। ೩ ।। ಪ್ರಾಣರೂಪನೆನಿಪ್ಪ ವಾಯುವೇ ಜನಕ ನಾ । ಕ್ಷೀಣ ಬಲ ಹನುಮನೆಂದೆನುತ ।। ಕೋಣಿಯಲಿ ಹೆಸರಾದುದೆನಗೆ ಕೇಳೆಸಲು ಸು । ತ್ರಾಣ ಪಾರ್ಥನು ನುಡಿದ ನಗಂತ ।। ೪ ।। ಹನುವ ನೀನೆಂದೆಂಬೆ ತನುವ ನೋಡಿದಡೆ ಬಡ । ಜಣುಗಿನಂದದೊಳಿರುವೆಯೇಕೆ ।। ಘನತರದ ಕಾಯ ಮಾತಂಗೆಂದು ಜನರುಸಿರ್ವ । ರೆನಲು ಮಾರುತಿಯೆಂದನದಕೆ ।। ೫ ।।

ರಾಗ ಘಂಟಾರವ ಅಷ್ಟತಾಳ


ಕೇಳಯ್ಯ ನಮ್ಮ ತನು ಬಡವಾದುದ । ಪೇಳಲೇನದ ಹಿಂದೆ ಶರಧಿಗೆ । ನೀಲಸೇತುವ ಕಟ್ಟಲು ।। ೧ ।। ತಾಳಿ ಪರ್ವತ ಪೊತ್ತು ಕಲ್ಮರಗಳ । ಸ್ಕೂಲ ದೇಹವು ಸುರುಟಿದುದು ಕೈ | ಕಾಲುಗಳು ಒಳಸರಿದವು ।। ೨ । ಎಂದ ಮಾತನು ಕೇಳಿ ಪಾರ್ಥನಂ ।। ಮಂದಹಾಸದಿ ನುಡಿದನಾಗಲೆ । ಗಂಧವಾಹಾತ್ಮ ಜನೊಳು ।। ೩ ।।