ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶರಶೇತು ಬಂಧನ
75

ರಾಗ ಸೌರಾಷ್ಟ್ರ ತ್ರಿವುಡೆ ತಾಳ


ಪೊತ್ತು ದಣಿಯಲದೇಕೆ ಗಿರಿಗಳ । ನೆತ್ತಲೇತಕೆ ಕಲ್ಮರಂಗಳ । ಮತ್ತೆ ಬಳಲುವುದೇಕೆ ಸೇತುವೆ ।। ಬಿತ್ತರಿಪಡೆ ।।೧।। ಬಿಡು ಬಿಡೀ ಸೇತುವನು ಬಲಿವಡೆ ಕಡು ಗಹನವೇ ಬಾಣ ಮುಖದಲಿ । ಎಡೆಬಿಡದೆ ಸೇತುವನ್ನು ರಚಿಸುವೆ । ದೃಢತರದೊಳು ।। ೨ ।। ಸುರಪನೈರಾವತವ ತರಿಸಿಹೆ । ತರುಚರರು ನೀವ್ ನಿಮಗೆ ಘನವಿದು । ನೆರೆ ಪರಾಕ್ರಮಿಗೇನು ದೊಡ್ಡಿತು । ಪರಿಕಿಸುವಡೆ ।। ೩ ।। ಕಿರಿದು ಬಲವುಳ್ಳವರು ನೀವೆಂ । ಬರಿಕೆಯೆಮಗಾಯೆಂಬ ಪಾರ್ಥನ । ಬ್ಬರದ ನುಡಿಯನು ಕೇಳುತೆಂದನು । ಮರುತಸುತನು ।। ೪ ।। [ಕೇಳಿದಾ ಕ್ಷಣ ಪ್ರಳಯರುದ್ರನ ಹೋಲುವೆಯ ಘನ ಕ್ರೋಧರೂಪವ । ತಾಳಿ ಕೋಪದಿ ನುಡಿದನಾ ಸುರ । ಪಾಲಸುತಗೆ ।। ೫ ।।]

ರಾಗ ಮಾರವಿ ಏಕತಾಳ


ಏನುವನೆಂದೆಯೋ । ಮಾನವ ಗರ್ವದಿ । ಸಾನುವ ನೀನಡರಿ । ಅನುವ ದಾರುನಿ । ಧಾನದಿ ಪೇಳ್ ಸುರ । ಮಾನವರೊಳಗೆನಗೆ ।। ೧ ।। ಮುಕ್ಕುವೆ ಜಗವನು । ತಿಕ್ಕುವೆ ಯಮನನು । ಸಿಕ್ಕಿಸಿ ಭೈರವನ ।। ಠಕ್ಕುಪಚಾರದ ಗರ್ವವಿದೇತಕೆ । ಸೊಕ್ಕಿಲಿ ಗಳಹದಿರು ।।೨।। ಕಣೆಯಲಿ ನೀನಿದ । ಕೆಣೆಯಹ ಸೇತುವ । ಹಣಿವೆಯೆನಳವೆ ।। ಜುಣುಗೆ ನೀ ಬಾಯ್ಕಡಿ । ವಾರವ ಬೀರುವೆ ಎಣಿಸದೆ ಗರ್ವದೊಳು ।। ೩ ।। ತೊಟ್ಟ ಶರಧಿ ನೀ । ಕಟ್ಟಿದ ಸೇತುವೆ । ನಿಟ್ಟಿಸಲಾನದನು । ಥಟ್ಟನೆ ಪಾದದಿ । ಮೆಟ್ಟಿ ಮುರಿಯದಿರೆ । ದಿಟ್ಟ ಹನುಮನಹನೆ ।। ೪ ।।

ರಾಗ ಭೈರವಿ ಅಷ್ಟತಾಳ


ಎಲವೊ ಮರ್ಕಟನೆ ಗರ್ವದಿ ನೀನು । ಸುಮ್ಮ । ನುಲಿಯಲು ಕಾಣೆನು ಫಲವನು ।। ಬಲಿವೆನು ಶರದಿ ಸೇತುವನದ । ನೀನು । ಬಲದಿ ಮುರಿಯದಿರಲೇ ನೆಂದು ।। ೧ ।। ಸಾಕು ಸಾಕೆ ಮಂಕು ಮನುಜನೆ । ಇಂಥ । ಕಾಕು ಪೌರುಷವೇಕೋ ಸುಮ್ಮನೆ ।। ನಾ ಕಾಣೆ ಸೇತುವ ಮುರಿಯಲು । ಕೇಳ್ವೆ ।