ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
76
ಮಾರುಮಾಲೆ

ನೀ ಕಡೆಗೇನ ಮಾಡುವೆ ಹೇಳು ।। ೨ ।। ಮೂರು ಬಾರಿಗೆ ಗೆನದರನು । ಕಾ । ಲೂರಿ ನೀ ಮುರಿದ ಪಕ್ಷದಿ ನಾನು ।। ಹಾರುವೆನಗ್ನಿ ಕುಂಡವನೆಂದು । ರಣ । ಧೀರ ಪಾರ್ಥನು ಪೇಳ ನವಗಂದು ।। ೩ ।। ಶರದಿ ಮೂವೇಳೆ ನೀ ಸೇತುವ । ಮಾಡೆ । ಮುರಿಯದಿರ್ದಡೆ ಕೇಳೊ ಮಾನವ ।। ನೆರೆ ನೀನು ಹೇಳಿ ದಂತಿಹೆನೆಂದು । ಪೇಳ । ನುರುಪರಾಕ್ರಮಿ ವಾಯುಸುತನಂದು ।। ೪ ।।

ರಾಗ ಮಾರವಿ ಏಕತಾಳ

ಎಂದಾ ನುಡಿ ಕೇ । ಳಂದಾ ಪಾರ್ಥನು । ಸಂಧಿಸಿ ಶರದಲಿ । ಬಂಧಿಸೆ ಸೇತುವ । ಗಂಧವಹಾತ್ಮಜ । ನಂದದ ಕಾಣುತ । ಲೊಂದು ಕ್ಷಣದಿ ಮುರಿ । ದಂದಗೆಡಿಸಿದ ।। ಕೇಳೊ ಭೂಪ ।। ೧ ।। ಕೂರ್ಗೊಂಡಿಹ ಶರ । ವರ್ಗದಿ ಪುನರಪಿ । ಸ್ವರ್ಗಾಧಿಪಸುತ । ನರ್ಗಳ ಸೇತುವ । ನೀರ್ಗೆ ರಚಿಸಿ ಸ । ನಾರ್ಗಿ ಹನುಮನದ । ಕೂರ್ಗಿಸಿ ಮುರಿದನು । ಭೋರ್ಗರೆಯುತಲಿ ।। ಕೇಳೊ ಭೂಪ ।। ೨ ।। ಮತ್ತೆ ಕೆರಳ ಮ । ಹತ್ತಿರ ಶರಮಯ । ದುಮು । ಸೇತುವ । ಪಾರ್ಥನು ರಚಿಸಲು । ಹತ್ತಿ ಹನುಮನದ । ನೊತ್ತಾಯದಿ ಮುರಿ । ದೆತ್ತಲು ನಿನ್ನಯ । ಸತ್ಯಗಳೆಂದ ।। ಕೇಳೊ ಭೂಪ ।। ೩ ।।

ರಾಗ ಆರ್ಯ ಸವಾರ್ಯ

ಎಲೆ ಮಾನವ ನೀ । ಸಲೆ ಕೈಚಳಕದಿ । ಬಲಿದಿಹ ಸೇತುವದೇನಾಯ್ತು ।। ಬಲಿಮುಖಕ್ಕೆ ನಾವು । ಬಲು ಭಟರೆ ನೀವು । ಸಲುವುದೆ ನಿಮಗೀ ಪೌರುಷವು ।। ೧ ।। ಆಡಿದ ಭಾಷೆಯ । ಮಾಡಲು । ನಿನ್ನಲಿ ಕೂಡದಿದ್ದರೆ ನೀ ನಡೆ ಬೇಗ । ಕಾಡೆನು ನಿನ್ನಲಿ । ಹೇಡಿಪಡೆನುತಲಿ । ಕೂಡೆ ಜರೆದನಾತನನಾಗ ।। ೨ ।।

ಕಂದ

ಇಂತಾ ಹನುಮಂತಂ ಕಡು । ಪಂಥದಿ ಜರೆಯಲ್ ಕೇಳುತಲಿಂದ್ರ ದಾಂತನದೇಕೆಂದು ಚಿತ್ರದಿ ಕುಮಾರಂ ।। ಪಂಥವನೀ ಕಪಿಯೊಳಗಿ೦ । ಚಿಂತಿಸಿದಂ ।। ೧ ।।