ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶರಶೇತು ಬಂಧನ
77

ರಾಗ ನೀಲಾಂಬರಿ ರೂಪಕತಾಳ

ಅಕ್ಕಟಕ್ಕಟಾ । ಏತಕಿವನಲಿ । ಸೊಕ್ಕಿ ಪಂಥವ । ಗೆಯ್ದೆ ನಿಂದಿಲಿ ।। ಮಕ್ಕಳಾಟಿಕೆ । ಮುಂದುವರಿದುದೆ । ಹಕ್ಕಿದೇರನ । ದಯವು ಮಾಣದೆ ।। ೧ ।। ಸಾಕು ತನ್ನಯ । ಬಾಳ್ವೆಗೀಪರಿ । ಕಾಕು ಕಪಿಯೊಳು । ಸೋತು ಮೈಸಿರಿ ।। ನೂಕಿ ಕಳೆವೆನು । ಅಗ್ನಿಯಲ್ಲಿ ತನು । ಲೋಕ ನೋಡಲಿ । ಯೆನುತನಿ೦ದನು ।

ಭಾಮಿನಿ

ಮೂರು ಬಾರಿ ಶರಘದಿಂದು । ಭೇರಿ ಸೇತುವನೆಸಗಲದರನು । ವೀರ ಹನುಮನು ಮುರಿಯಲಿದ ಕಾಣುತ್ತ ಫಲುಗುಣನು ।। ಹಾರಿದಪನಗ್ನಿಯನೆನುತ ಮನ । ವಾರ ನಿಂದಿರೆ ವೃದ್ದ ವಿಪ್ರಾ । ಕಾರದಲಿ ಹರಿ ಬಂದು ನುಡಿದನಿದೇನಿ ದೇನೆನುತ ।। ೧ ।।

ರಾಗ ಘಂಟಾರವ ಅಷ್ಟತಾಳ

ಏನಿದು ನಿಮ್ಮಲ್ಲಿ ಸಂವಾದ । ಸಾಕಯ್ಯ ತಡೆಯಿರಿ । ನಾನು ಕೇಳಿ ಕೊಂಡಪೆನದ । ನೀನದೇಕಗ್ನಿಯನು ಮನದನು । ಮಾನವಿಲ್ಲದೆ ಹಾರಿದಪೆ ಪೇ ಈ ನಿರೋಧವನಾರು ಮಾಳ್ವರು । ಮಾನವರೊಳಕಟಕಟ ಸುಮ್ಮನೆ ।। ೧ ।। ಎಂದು ಕಪಟವಿಪ್ರನುಡಿಯಲು । ಕೇಳುತ್ತಲಾ ಸಂ । ಕ್ರಂದನಾತ್ಮಜ ಪೇಟೆ ನವನೊಳು ।। ಬಂಧಿಸಿದ ಮೂವೇಳೆ ಕೂರ್ಗಣೆ । ಯಿಂದ ಸೇತುವನದನು ಮುರಿದರೆ ।। ಕುಂದದಗ್ನಿಯ ಪೊಕ್ಕಪೆನು ತಾ । ನೆಂದೆನೀ ಕಪಿವರನ ಕೈಯಲಿ ।। ೨ ।। ಶರದ ಸೇತುವ ಮುರಿಯದಿರ್ದಡೆ । ನೀ ಹೇಳಿದಂದದೊ । ಳಿರುವೆನೆಂದಿ ಪ್ಲವಗಪತಿಯಾಡೆ ।। ವಿರಚಿಸಿದೆ ಮೂವೇಳೆ ಸೇತುವ । ಮುರಿದ ನೀ ಕ ವರ್ಯನಿನ್ನೆ । ನುರಿಯ ಕುಂಡವ ಪೊಗುವೆನೆನಲಾ । ಧರಣಿಸುರ ಗಹಗಹಿ ಸುತೆಂದನು ।। ೩ ।।