ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
78
ಮಾರುಮಾಲೆ

ರಾಗ ಬೇಗಡೆ ಏಕತಾಳ

ಚಂದವಾಯ್ತಿನ್ನೇನನುಸರಲಿ । ನಿನ್ನಯ ಶೌರ್ಯ । ದಂದವನ್ನು ನೋಡ ಬೇಕಿಲ್ಲಿ । ಬಂಧಿಸಿದೆ ಗಡ ಮೂವೆ ಶರ ಮುಖ । ದಿಂದ ಸೇತುವ ನೀನಿದನು ಬ । ಂದಲೀ ಕಪಿವರ್ಯ ಮುರಿದರೆ । ಕುಂದದಗ್ನಿಯ ಹಾಯ್ದು ದುಚಿತವೆ ।। ೧ ।। ಬಾಣಮಯದಲಿ ಮವೆ ಸೇತುವ । ನೀನು ಬಲಿವಾಗ । ಮತ್ತಿ ವಾನರೇಂದ್ರನು ಸತ್ಯದಿಂದದನಾನಿ ಮುರಿವಾಗ । ಕಂಡಿಹ ಮಾನವನದಾ ರಯ್ಯ ಪೇಳು ನಿದಾನವನು ಬೇಗ ।। ಮೂರ್ಖತೆ । ಗೇನನೆಂಬೆನು ಸಾಕ್ಷಿಯಿಲ್ಲದೆ ಹೀನತನದಿಂ ದೊಡ್ಡವನು ಗೆ । ಯೀ ನಿರೋಧಕೆ ಪಾವಕನನು । ಮಾನ ವಿಲ್ಲದೆ ಹಾಯ್ದು ಮಡಿದರೆ ।। ೨ ।। ಮಾಡು ನೀನನ್ನೊಮ್ಮೆ ಸೇತುವ ನೋಡಿದರೆ ನಾನು । ಶರದಲಿ ಹೂಡು ಬೇಗದಿ ಸತ್ಯವಿದ್ದರೆ ನೋಡಿ ಫಲವೇನು । ಮ । ರೂಢಿಸಿದ ಕಪಿವೀರ ಚೂರ್ಣವ ಮಾಡಲದರನ್ನು ।। ಬಳಿಕಿಸಿ ನ ಳಾಡಿದಂದದೊಳಗ್ನಿಯಲಿ ಹೋ | ಗಾಡಬಹುದೀನಿನ್ನ ಕಾಯವ । ನೋಡಿ । ರೆಂದೆನಲೊಪ್ಪಿದರು ವುರ ಗೇಡಿ ವಿಪ್ರನ ಮಾತ ಕೇಳುತ ।। ೩ ।।

ರಾಗ ಶಂಕರಾಭರಣ ಮಟ್ಟಿ ತಾಳ

ವೀರ ಪಾರ್ಥ ಬಳಿಕ ತಾನು । ಬೈರಿಯಕ್ಷಯಾಸ್ತ್ರದಿಂದ । ವಾರಿನಿಧಿಗೆ ಸೇತು ವೆಸಗೆ । ಮಾರಜನಕನು । ಭೂರಿ ದಯದಿ ಕೂರ್ಮನಾ । ಕಾರದಿಂದ ಬೆನ್ನೊಳಾ । ಧಾರವಾಗಿ ಪೊತ್ತನದನು । ದಾರ ಸತ್ತ್ವದಿಂದ ।।೧।। ಮರಳಿ ಹೊಯ್ದು । ಮುರಿಯಲಾರದದನು ಮರಿನದಿಗೆ ಮರುಗುತೆಂದನಾ ಸಮೀರ ವರ ಕುಮಾರನು ಅರರೆ ರಾಮಭಕ್ತನೆಂಬ । ಬಿರುದು ಪೋಯ್ಕೆಯಕಟ ದೇಹ । ವಿರಲು ಸಫಲ ವಾವುದಿದನು । ತೊರೆವೆನೆಂದನು ।। ೨ ।। ಪವನಸುತನ ಮನದ ತಾ । ಪವನು ಕಂಡು ಕವಲನೇತ್ರ/ ನವಿರಳಕಟಾಕ್ಷರಸದ । ಸವಿಯ ಸೂಸುತ।। ತವಕದಿಂದ ರಾಮರ । ಪವನು ತೋರಲದನು ಕಂಡು । ನಮಿಸಿ ಭಕ್ತಿಭಾವದಿಂದ । ಲವನ ಸ್ತುತಿಸಿದ ।। ೩ ।।

ವಾರ್ಧಿಕ

ಜಯ ಜಯ ಜಗನ್ನಾಥ ಜಾನಕೀಸುಪ್ರೀತ । ಜಯ ರಘುಕುಲಾಧ್ಯಕ್ಷ ರಾಕ್ಷಸಕುಲವಿಪಕ್ಷ । ಜಯ ಜಯ ಸುರಾಧೀಶ ಸೂರ್ಯಶತಸಂಕಾಶ ಜಯ ಘನಶ್ಯಾಮ ರಾಮ । ದಯಾಸಾರ ದೀನಕುಲವುದ್ದಾರ ಜಯ