ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
80
ಮಾರುಮಾಲೆ

ಶರಸೇತು ಬಂಧನ'ದ ಅರ್ಥಗಾರಿಕೆಯಲ್ಲಿ, ಆಟದ ರಂಗಸ್ಥಳದಲ್ಲ, ತಾಳಮದ್ದಲೆಗಳಲ್ಲಿ ಕಂಡುಬರುವ ಒಂದು ಮುಖ್ಯ ಪ್ರತಿಪಾದನೆಯೆಂದರೆ, ಈ ಪ್ರಕರಣವು `ಅರ್ಜುನ ಗರ್ವಭಂಗ” ಎಂದು. ಅರ್ಜುನ, ಹನುಮಂತ, ಕೃಷ್ಣ-ಈ ಮೂರು ಪಾತ್ರಗಳೂ ಇದೇ ಧೋರಣೆಯಿಂದ ಪಾತ್ರಗಳನ್ನು ರೂಪಿಸಿಕೊಂಡು ಹೋಗುವುದು ಹೆಚ್ಚು ಬಳಕೆಯಲ್ಲಿರುವ ಪದ್ಧತಿ, ಅಂದರೆ, ಅರ್ಜುನನ ಗರ್ವಭಂಗವೆಂಬುದು ಈ ಪ್ರಸಂಗದ ಉದ್ದೇಶವಾಗಿ, ಆಶಯ ವಾಗಿ ಅರ್ಥಾತ್‌ ಪ್ರಬಂಧ ಧ್ವನಿಯಾಗಿ ಅಂಗೀಕರಿಸಿ ಅರ್ಥಗಾರಿಕೆ, (ರಂಗ ಸ್ಥಳದಲ್ಲಾದರೆ, ಸಂಬಂಧಪಟ್ಟ ಚಲನೆ, ನೋಟ, ನರ್ತನಗಳೂ ಅದಕ್ಕೆ ಪೂರಕವಾಗಿದ್ದು) ಸಾಗುತ್ತದೆ. ಕೃಷ್ಣನ ಪಾತ್ರ ಪ್ರವೇಶದ ಮಾತುಗಳಂತೂ (ಪೀಠಿಕೆ) ಇದೇ ವಿಷಯವನ್ನು ಮುಖ್ಯವಾಗಿ ಹೇಳುವುದುಂಟು. ಹನು ಮಂತನಂತಹ ಜ್ಞಾನಿಯ ಮುಂದೆ, ಹಿರಿಯನ ಮುಂದೆ, ಅರ್ಜುನನು ಗರ್ವಿಸಿ ಮಾತಾಡಿದುದರಿಂದಲೇ ಅವನಿಗೆ ಪರಾಭವವಾಯಿತೆಂದೂ, ಅಂತೂ ಭಕ್ತ ನಾದ ಅರ್ಜುನನನ್ನು ರಕ್ಷಿಸಬೇಕಾದುದು ಅವಶ್ಯ. ಅಂತೆಯೇ ಹನುಮಂತ ನಿಗೆ ರಾಮರೂಪದಿಂದ ದರ್ಶನ ಕೊಡಲು ಇದೇ ಸಂದರ್ಭವೆಂದೂ, ಅದಕ್ಕಾಗಿ ಇಬ್ಬರನ್ನೂ ಅನುಗ್ರಹಿಸಿ ಸುಗ್ರಹಿಸಲು ಉಪಾಯವಾಗಿ ವೃದ್ಧ ವಿಪ್ರಾಕಾರ ದಿಂದ ತಾನು ಅಲ್ಲಿಗೆ ಹೋಗುವುದಾಗಿಯೂ ಕೃಷ್ಣನ ಪೀಠಿಕೆಯ ಅರ್ಥ ಧಾರಿ ಮುಖ್ಯವಾಗಿ ಹೇಳುವುದು ಈ ಪದ್ಧತಿಯಲ್ಲಿದೆ. ಇದು ಎಲ್ಲ ಅರ್ಥ ಧಾರಿಗಳು ಸೇರಿ ಪ್ರಸಂಗಕ್ಕೆ ಮಾಡುವ ಅರ್ಥ ಅಥವಾ ವ್ಯಾಖ್ಯೆ.
ಅರ್ಥಗಾರಿಕೆಯ ಮುಖಗಳು ಹಲವು ಇರುವುದರಿಂದ, ಈ ಒಂದು 'ಅರ್ಥ'ವೂ ಆಗಬಾರದೆಂದಿಲ್ಲ, ಆಗಬಹುದು. ಈ `ಗರ್ವ ಭಂಗ ಥಿಯಿರಿಗೆ 'ಪೋಷಕವಾಗಿ ಪ್ರಸಂಗದಲ್ಲಿ ಇರುವ ವಿಷಯಗಳು ಇವು :
ಅ. ರಾಮಸೇತುವೆಯನ್ನು ಕಂಡು ಅರ್ಜುನನು ನಗುವುದು.
ಆ. ಹನುಮಂತನ ಪರಿಚಯವನ್ನು ಕೇಳಿ ಸಂದೇಹಿಸುವುದು.
ಇ. ರಾಮಾಯಣದ ಸೇತುಬಂಧನ ಮಹತ್ವದ್ದಲ್ಲ ಎಂಬಂತೆ ಕಪಿ
ವರ್ಗವನ್ನು ಅಲ್ಪಬಲರೆನ್ನುವುದು.