ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶರಸೇತು ಬಂಧನ
81

ವುದು.
ಈ. ತಾನು ಸ್ವರ್ಗಕ್ಕೆ ಸೇತುವನ್ನು ರಚಿಸಿದುದನ್ನು ಹೇಳಿಕೊಳ್ಳು
ಉ. ಪ್ರಾಣತ್ಯಾಗವನ್ನೇ ಪಂಥದ ಪಣವಾಗಿ ಇರಿಸುವುದು.
ಊ. ಸೋತ ಬಳಿಕ, ತನ್ನದು ತಪ್ಪಾಯಿತೆಂಬಂತೆ ಆಡಿಕೊಳ್ಳುವುದು -ಇವಲ್ಲದೆ, ರಂಗಸಂಪ್ರದಾಯದಲ್ಲಿ ಈ ಧೋರಣೆಗೆ ಪೂರಕವಾಗಿರುವ ಅಂಶ ಗಳು ಇವು.
ಕ. ಅರ್ಜುನನು ಆರಂಭದಿಂದಲೇ ಗರ್ವಿಷ್ಟನಂತೆ ಮಾತಾಡಿಕೊಂಡು ಪಾತ್ರವನ್ನು ರೂಪಿಸುವುದು.
ಖ. ಹನುಮಂತನು ತನ್ನ ಪೀಠಿಕೆಯಲ್ಲಿ ರಾಮಧ್ಯಾನವನ್ನು ಮಾಡಿ, ರಾಮಭಕ್ತಿಯನ್ನು ರಸವತ್ತಾಗಿ ಚಿತ್ರಿಸಿ, ರಾಮನ ದರ್ಶನಕ್ಕಾಗಿ ಕಾಯುತ್ತಿರು ವುದಾಗಿ ಹೇಳುವುದು.
ಗ. ರಾಮಮಹಿಮೆ, ಸೇತುಬಂಧನದಂತಹ ಮಹದ್ವಿಷಯಗಳನ್ನು ವಿಮರ್ಶಿಸಿದುದಕ್ಕೆ ಅರ್ಜುನನನ್ನು ಎಳಸೆಂದೂ, ಅಜ್ಞಾನಿಯೆಂದೂ, ಹುಡು ಗಾಟವೆಂದೂ ಲೇವಡಿ ಮಾಡುವುದು.
ಘ. ಕೃಷ್ಣನೂ, ತನ್ನ ಅರ್ಥಗಾರಿಕೆಯಲ್ಲಿ, ಅರ್ಜುನನೇ ಗರ್ವಿಷ ನೆಂದೂ, ಅಪರಾಧಿಯೆಂದೂ ಸಾಧಿಸಿ ಹಿರಿಯರ ಮುಂದೆ ಗರ್ವಪಟ್ಟರೆ ಹೀಗೇ ಆಗುತ್ತದೆ ಎಂದು ಹೇಳಿ, ಬೇಕಿದ್ದರೆ, ಈಗಿನ ಹುಡುಗರೇ ಹೀಗೆ ಎಂದೂ ಸೇರಿಸಿ-ಒಂದು ಬಗೆಯಿಂದ 'ಹನುಮಂತನ ಪರವಾಗಿ ವ್ಯಾಖ್ಯಾನಿಸುವುದು. ಹನು
ಙ-ಇವೆಲ್ಲದಕ್ಕೆ ಮಿಗಿಲಾಗಿರುವ 'ಪ್ರೇಕ್ಷಕ ನಿರೀಕ್ಷೆ' (Audience expectation): 'ಶರಸೇತು ಬಂಧನ'ದ ಪ್ರೇಕ್ಷಕ ಯಾವಾಗಲೂ ಮಂತನ ಪರ. ಇದಕ್ಕೆ 'ಸಂಪ್ರದಾಯ' ಕಾರಣ, ಎರಡು ಅರ್ಥದಲ್ಲಿ. ಒಂದು, ಈ ಪ್ರಸಂಗದ ಪ್ರದರ್ಶನದಲ್ಲಿ ನೋಡಿ ಕೇಳಿ ರೂಢಿಯಾದ “ಅರ್ಜುನ ಗರ್ವಭಂಗ' ಥಿಯರಿ, ಎರಡು, ಹನುಮಂತನ ಬಗೆಗೆ, ಸರ್ವತ್ರ