ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಎರಡನೆಯ ಪರಿಚ್ಛೇದ

ಯುವಕ-ಶೋಭನೆ! ಅದು ಎಂತಹ ಮಾತು! ನಾನು ಅಸುಖಿಯಾಗಿದ್ದುದು ನಾನು ನಡೆಯಿಸಿದಾವ ಕಾರ್ಯದಿಂದ ಗೊತ್ತಾಯಿತು? ನಾನು ನುಡಿದಾವ ಮಾತಿನಿಂದ ಗೊತ್ತಾಯಿತು? ಅಥವಾ ನಾನು ತೋರಿದಾವ ಭಾವದಿಂದ ತಿಳಿದೆ?

ಶೋಭನೆಯು ತನ್ನ ಸೀರೆಯ ಸೆರಗನ್ನು ಎಡದಕೈಯಲ್ಲಿ ಹಿಡಿದುಕೊಂಡು ಬಲದ ಕೈಬೆರಳುಗಳಿಂದ ಸೆರಗಿನ ತುದಿಯ ನೂಲನ್ನು ಹುರಿಮಾಡುತ್ತ, ಮುಖತಗ್ಗಿಸಿಕೊಂಡು, ಮಧ್ಯೆಮಧ್ಯೆ ಉಗುಳುಗುತ್ತ ಹೀಗೆಂದು ಹೇಳಿದಳು:-"ನಾಥ! ನನ್ನನ್ನು ಮದುವೆಯಾಗಿ ಸುಖಪಡುವುದಕ್ಕೆ ನನ್ನಲ್ಲಿ ಗುಣವೇನಿದೆ? ನಾನೇನು ರೂಪವಂತೆಯೆ ? ಸಾಯುವತನಕ ನಿಂತು ನಳಿಯುವ ರೂಪವೇನಿದೆ? ರೂಪವಿಲ್ಲದಿದ್ದರೂ ಗಣವಾದರೂ ಇದ್ದರೆ ಆದರಿಂದ ಮೋಹಗೊಳಿಸಬಹುದು. ಅಂತಹ ಗುಣವೂ ಇಲ್ಲ ಸ್ವಲ್ಪ ವಿದ್ಯೆಯಾದರೂ ಬಂದಿದ್ದರೆ, ನಿಮ್ಮ ಸಂಗಡ ಚತುರೆಯಾಗಿ ಮಾತಾಡಿ ನಿಮ್ಮ ಮನಸ್ಸನ್ನು ಸಂತೋಷಪಡಿಸಬಹುದಾಗಿದ್ದಿತು ಅಂತಹ ವಿದ್ಯೆಯ ನನಗೆ ಇಲ್ಲ; ವಿದ್ಯ ವಿಲ್ಲದವಳ ಸಂಗಡ ಮಾತಾಡುವುದಕ್ಯಾರಿಗಾದರೂ ಬೇಸರವುಂಟಾಗುತ್ತದೆ ನಿಮ್ಮಂತಹ ವಿದ್ಯಾವಂತರಿಗೆ ನಾನು ತಕ್ಕವಳೆ ! ನಾನು ಪೆದ್ದು ಹೆಣ್ಣು - ಬರೆದೋದುವುದರಲ್ಲಿ ನಿಮಗಾವ ಸಹಾಯ್ಯವಂ ಮಾಡಬಲ್ಲೆನು? ಈಡು ಜೋಡಾದ ಹೆಂಡತಿಯಲ್ಲಿ ಬೇಗನೆ ಓದು ಬರಹಗಳನ್ನು ಕಲಿತು ನಿಮಗೆ ಸಂತೋಷವುಂಟುಮಾಡಬೇಕೆನ್ನುವುದಕ್ಕೆ ಅಂತಹ ಸೂಕ್ಷ್ಮವಾದ ಬುದ್ದಿಯ ಎನಗಿಲ್ಲ -ಆವ ಭಾಗದಲ್ಲಿಯೂ ನಿಮಗೆನ್ನಿಂದ ಸಹಾಯವಿಲ್ಲ ಆದಾಯವು ಮೊದಲೇ ಇಲ್ಲಿ ನಿಮಗೆ ಸಂಗೀತವನ್ನು ಕೇಳುವುದಕ್ಕೆ ಎಷ್ಟೋ ಅಶೆ, ನನ್ನ ಗ್ರಹಚಾರಕ್ಕೆ ನನಗಾವ ಸಂಗೀತವೂ ಬರದು-ಸರಿಯಾಗಿ ಎರಡು ಹಸೆಗೆ ಕರೆಯು ಹಾಡೂ ಬರದು-ನೀವಾವದನ್ನು ಕಂಡು ನನ್ನಲ್ಲಿ ವಿಶ್ವಾಸವುಳ್ಳವರಾಗಬೇಕು ರೂಪವಿಲ್ಲ, ಗುಣವಿಲ್ಲ, ವಿದ್ಯೆಯಿಲ್ಲ, ಬುದ್ಧಿಯಲ್ಲಿ ಅವರದಲ್ಲಿಯೂ ನಿಮಗೆ ಯೋಗೈಯಾದವಳಲ್ಲ ಯೋಗ್ಯತೆಯು ಹಾಗಿರಲಿ-ಕಡೆಗೆ ನಿಮ್ಮ ಮನೆಯ ಕಸವನ್ನು ಗುಡಿಸುವವಳು ನಿಲ್ಲುವ ಸ್ಥಳದಲ್ಲಿ ನಿಲ್ಲುವುದಕ್ಕೂ ನಾನು ತಕ್ಕವಳಲ್ಲ. ನಾನು ತಮಗೆ ತಕ್ಕವಳಲ್ಲವೆಂದು ಪ್ರತಿನಿಮಿಷದ