ನನಗೆ ಬಹಳ ಆಶೆ; ಆದರೆ ನಾನು ಚಿತ್ರ ಬರೆಯುವವಳಲ್ಲ, ಬರೆಯಲೂ ಬಾರದು. ಅವರೂ ಆ ಮುಖಭಾವವು ನನ್ನ ಮನಸ್ಸಿನಲ್ಲಿ ಅಂಕಿತವಾಗಿದೆ. ಮಾಲತಿಯ ಸಂಗಡ ಮಾತಾಡುತ್ತಿರುವಾಗ ನಿಮಗೆ ಉಂಟಾಗುವ ಆನಂದವು ಹೇಳಿತೀರದು. ನಿಮ್ಮ ಪ್ರತಿವ್ಯವಹಾರದಲ್ಲಿಯೂ ಪ್ರತಿ ಭಾವದಲ್ಲಿಯೂ ಪ್ರತಿಮಾತಿನಲ್ಲಿಯೂ ನಿಮಗೆ ಮಾಲತಿಯಮೇಲೆ ಇರುವ ಪ್ರಣಯವು ವ್ಯಕ್ತವಾಗಿ ನನ್ನನ್ನು ಜೇವದ್ಧತೆಯಲ್ಲಿಯೇ ಸುಡುತಿದೆ. ನಿಮ್ಮ ನಡೆಗೆಯ ಪ್ರತಿ ಹೆಜ್ಜೆಯಲ್ಲಿಯೂ ನಮ್ಮಿಬ್ಬರಲ್ಲಿ ನೀವು ಮಾಡಿಕೊ೦ಡಿರುವ ಭೇಧವು ಸ್ಪಷ್ಟವಾಗುತ್ತದೆ. ನನ್ನೆದುರಿಗೆ ಮನಃಪೂರ್ವಕವಾದಾ ಹರುಷದಿಂದುಂಟಾಗುವ ನಗುವು ಬರುವುದಿಲ್ಲ. ನನ್ನೆದುರಿಗೆ ಆ ಆನಂದದಿಂದುಂಟಾಗುವ ಆತ್ಮವಿಸ್ಮೃತಿಯೂ ಇಲ್ಲ. ಮುಖ್ಯ ಮಾಲತಿಯು ಎದುರಿಗೆ ಇಲ್ಲದಿದ್ದರೆ ಪ್ರಾಣಬಿಡುವವರಂತಿರುವಿರಿ."
ಯುವಕ ಮಾಲತಿಯನ್ನು ನೋಡಿದರೆ ನನಗೆ ಸಂತೋಷವಾಗುವುದುಂಟು, ನಾನು ಅವಳನ್ನು ಪ್ರೀತಿಸುವುದೂ ಉಂಟು. ಆದಾವದನ್ನೂನಾನೊಪ್ಪದೆ ಇಲ್ಲ. ಈಗಲೂ ಒಪ್ಪಿಕೊಳ್ಳುವೆನು. ಆದರೆ ನಿನ್ನ ಸ್ವಂತ ಕಲ್ಪನೆಯಿಂದ ಅವಳನ್ನು ನೀನು ಎಕ್ಕರಿಸಿ ಎತ್ತಿಹಾಕುವ ರೀತಿಯಾವದೂನಡೆದಿಲ್ಲ. ನಿನಗೆ ಹೇಗೆ ನಂಬಿಕೆಯುಂಟುಮಾಡಬಹುದೋ ಅದಾದರು ನನಗೆ ಗೊತ್ತಾಗುವುದಿಲ್ಲ. ನೀನು ನಂಬುವುದಾದರೆ――
ಶೋಭನೆಯು ಮಾತನ್ನು ಪೂರೈಸಗೊಡದೆ, ನಿಮಗೆ ಮತ್ತೊಂದು ಮಾತನ್ನು ಹೇಳಲಿಲ್ಲ. ಅದನ್ನು ಮರೆಮಾಚುವುದಕ್ಕೆನಗೆ ಇಷ್ಟವಿಲ್ಲ. ಮಾಲತಿಯನ್ನು ಮದುವೆಮಾಡಿಕೊಳ್ಳುವುದಕ್ಕೆ ಅನೇಕರು ಬಂದು ಕೇಳಿದರು. ನೀವು ಸುಕುಮಾರಸಿಗೆ ಹೊರ್ತು ಮತ್ತಾರಿಗೂ ಅವಳನ್ನುಕೊಟ್ಟು ಮದುವೆ ಮಾಡುವುದಿಲ್ಲವೆಂದು ಖಂಡಿತ ಹೇಳಿದಿರಿ ಸುಕುಮಾ ರನು ವಿಲಾಯತಿಯಿಂದ ಹಿಂದಿರುಗಿ ಬರುವುದು ಗೊತ್ತಿಲ್ಲ. ಅದೂ ನನಗೆ ಸಂದೇಹವನ್ನುಂಟುಮಾಡುವುದಕ್ಕೊಂದು ಕಾರಣವಾಗಿದೆ ” ಎಂದಳು.
ಯುವಕ : ―(ಆಶ್ಛರ್ಯದಿಂದ) ಮಾಲತಿಯನ್ನು ಸುಕುಮಾರನಿಗೆ ಕೊಟ್ಟು ಮದುವೆಯಾಗುವುದುಖಂಡಿತ; ಅವಳು ಅವನನ್ನು ಪ್ರೀತಿಸುತ್ತಾಳೆ.