ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಎರಡನೆಯ ಪರಿಚ್ಛೇದ
೨೩

ಕೋಪವೆ ? ಕೋಪಿಸಿಕೊಳ್ಳದೆ ನನ್ನ ತಪ್ಪನ್ನು ಹೇಳು " ಎಂದು ಕೇಳಿದಳು, ಯುವಕನು ಅವಳ ವ್ಯಾಕುಲತೆಯನ್ನು ನೋಡಿ ಕಳವಳಗೊಂಡು, “ ಇಲ್ಲ ಮಾಲತಿ ! ನೀನಾವ ತಪ್ಪನ್ನೂ ಮಾಡಿಲ್ಲವೆಂದು ಹೇಳಿದನು.

ಮಾಲತಿ-ಹಾಗಾದರೆ ಮೊದಲಿನಂತೆ ನೀನೆನ್ನ ಸಂಗಡ ಮಾತಾಡು ವುದಿಲ್ಲವೇಕೆ? ಮಾತಾಡುತ್ತಿದ್ದ ಹಾಗೆ ನಿನ್ನ ಕಣ್ಣುಗಳಲ್ಲಿ ನೀರು ಬಂದು ದಕ್ಕೆ ಕಾರಣವೇನು?

ಮನುಷ್ಯನು ಸುಖದಲ್ಲಿ ಮಾತ್ರ ನಗುವನೆಂದು ಹೇಳುವುದಕ್ಕಾಗದು. ಅಳಿಸಿಹೋಗುವಾಗಲೂ ದೀಪದ ಉರಿಯು ಹೆಚ್ಚಾಗಿ ಹೋಲಿಸುವುದು? ಅಂಧ ಕಾರದಲ್ಲಿಯೂ ಮಿಂಚು ಮಿನುಗುವುದು; ಇದು ಯುವಕನು ಹುಡಗಿಯ ವಾತಿಗೆ ದುಃಖಪಟ್ಟು ಆ ದುಃಖಲ್ಲಿಯೂ ನಕ್ಕು, ಮಾಲತಿ! ನಿನ್ನ ಮೇಲೆ ಕೋಪಮಾಡುವುದಕ್ಕಾವಾಗಲಾದರೂ ಸಂಭವವುಂಟೆ? ಅಂಥಾ ಸಂಭವವಿಲ್ಲ. ನನಗೆ ಮೊದಲಿನ ಭಾವವು ಇಲ್ಲದುದಕ್ಕೆ ಕಾರಣವನ್ನೂ ಕಠೋರವಾದೀ ಕಣ್ಣುಗಳಿಂದ ನೀರು ಬಂದುದಕ್ಕೆ ಕಾರಣವನ್ನೂ ನೀನು ತಿಳಿಯಬಲ್ಲೆಯಾ? ನಿನ್ನಂಥ ಅರಿಯದ ಚಿಕ್ಕ ಹುಡುಗಿಯು ಅದನ್ನೆಲ್ಲಾ ಹೇಗೆ ತಿಳಿದುಕೊಳ್ಳಬಲ್ಲೆ? ಮಾಲತಿ! ” ಎಂದು ಹೇಳಿದನು.

ರಮೇಶನು ಹೇಳಿದುದು ನಿಜ-ಮಾಲತಿಯು ಇಪ್ಪತ್ತು ವರ್ಷದವಳಾ ಗಿದ್ದರೂ ಇನ್ನೂ ಬಾಲೆ. ಮನಸ್ಸಿನ ಸಬಳ ತೆಗೆ ಸಲುವಾಗಿ ಇನ್ನೂ ಬಾಲೆ. ಬಾಲೆಯಾಗಿದ್ದರೂ ಮಾಲತಿಯು ಹೆಂಗಸು.ಹೆಂಗಸರು ದುಃಖಿಗಳಂದಿಗೆ ದುಃಖಿಗಳಾಗುವರು. ವ್ಯಥೆಪಡುವವರ ಸಂಗಡ ವ್ಯಥೆಪಡದಿರರು. ಮತ್ತಾವ ದನ್ನು ತಿಳಿಯದಿದ್ದರೂ ಪರರ ದುಃಖವನ್ನು ತಿಳಿಯಬೇಕಾದಾಗ ಅವರು ಹುಡುಗಿಯರಾಗಿರರು. ಮಿಕ್ಕೆ ಎಲ್ಲಾ ವಿಷಯಗಳಲ್ಲಿಯೂ ಅವರು ಚಿಕ್ಕನ ರಾಗಿದ್ದರೂ ಅನ್ಯರ ಕಷ್ಟವನ್ನು ತಿಳಿದುಕೊಳ್ಳುವುದರಲ್ಲಿ ನೂರಾರು ವರ್ಷದ ಮುದುಕರೂ ಅವರಿಗೆ ಸಮನಾಗರು, ಹುಡುಗಿಯಾಗಿದ್ದ ಮಾಲತಿಯು ಪ್ರೌಥೆಯಂತೆ, ಅಣ್ಣ ನಿನ್ನ ಮಾತನ್ನು ನಾನು ತಿಳಿಯಲಾರೆನೆ? ಹುಡುಗಿಯೆ? ಈಗ್ಗೆ ಮೂರು ವರ್ಷಕ್ಕೆ ಹಿಂದೆ ನನ್ನನ್ನು ದೊಡ್ಡವಳೆಂದು ಹೇಳಿ ನಿನ್ನ