ಪುಟ:ಮಾಲತಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಮಾಲತೀ

  • * * 1

2 1 1 1 1 1 1 • • \n \ 1 1 * * * * * * * \h An 171 1 1 1 1 1 * * * * * *AAAAt t/\ 1Ar ) ಮನಸ್ಸಿನಲ್ಲಿದ್ದ ಮಾತನ್ನು ನನಗೆ ಹೇಳಲಿಲ್ಲವೆ ? ಆಗಿನಿಗಿಂತಲೂ ಈಗ ದೊಡ್ಡವಳಲ್ಲವೆ? ” ಎಂದಳು. ಭೂಮಂಡಲದಲ್ಲಿ ದುಃಖಿಗಳಾದವರಲ್ಲಿ ನಿಜವಾಗಿ ದುಃಖಿಸುವವರು ಅತಿ ದುರ್ಲಭ-ಒಂದು ಸುಂದರವಾದ ಗುಲಾಬಿಹೂವನ್ನು ನೋಡಿದರೆ ಅದನ್ನು ಪ್ರಯತ್ನ ಪೂರ್ವಕವಾಗಿ ಗ್ರಹಮಾಡದಿರುವವರಾರು? ಅದನ್ನು ಪಿರ್ತಿದಿರುವವರಾರು? ಅದರಿಂದ ತೃಪ್ತರಾಗದಿರುವವರಾರು? ಆದರೆ ಆ ಗುಲಾಬಿಹೂವು ಒಣಗಿದರೆ ಒತ್ತಡವೆಯಾದರೂ ಮಮತೆಯಿಂದ ಅದನ್ನು ನೋಡುವವರಾರು? ಎಷ್ಟು ಮಂದಿ ಅದನ್ನು ನೋಡಿ ಅಕೃತ್ರಿಮ ಶೋಕಾ ಶುವನ್ನು ಬಿಡುವರು? ಹಾಗೆಶೋಕಾತ್ರುವನ್ನು ಬಿಡುವವರಿಲ್ಲದುದರಿಂದಲೇ ಅಕೃತ್ರಿಮವಾದ ಅಕುಜಲಕ್ಕೆ ಅಷ್ಟೊಂದು ಆದರ-ಪ್ರಪಂಚದಲ್ಲಿ ಸ್ವಾರ್ಥ ವಿಲ್ಲದ ಪ್ರೀತಿ ವಿಶ್ವಾಸಗಳಿಗೆ ಅಷ್ಟೊಂದು ಹೆಚ್ಚು ಬೆಲೆ. ಜನರು ಸ್ವರ್ಗವ ನ್ನಾದರೂ ತುಚ್ಚವಾಗಿ ಎಣಿಸಿ ಅಂಥಾ ಪ್ರೀತಿಯನ್ನು ಹೊಂದಲು ಇಷ್ಟವು ಳ್ಳವರಾಗಿರುವರು-ಅದರಿಂದ ಮುಗ್ಧರಾಗುತ್ತಾರೆ-ರಮೇಶನೂ ಮನುಷ್ಯಮನುಷ್ಯನಿಗೆ ಸಹಜವಾದಾ ದುರ್ಬಲತೆಗೆ ರಮೇಶನು ಹೊರಗಾಗಿರಲಿಲ್ಲ -- ಅವನ ಹೃದಯದ ಕವಾಟವು ತಾನಾಗಿಯೇ ತೆರಕೊಂಡಿತು--ದುಃಖಿಯಲ್ಲಿ ದು:ಖಿಸುವ ದುಃಖಿಯನ್ನು ಹೊಂದಲು ಅವನಹೃದಯವು ತೆರಿಯಿತು. ಅವನು, * ಮಾಲತಿ! ನನ್ನ ದುಃಖವನ್ನು ಕುರಿತು ಕೇಳುವಿಯಾ ? ನನಗಾವದರಿಂದ ಸುಖವೋ ಅದರಿಂದಲೇ ನನಗೆ ದುಃಖ! ಶೋಭನೆಯು ತನ್ನ ಸ್ವಂತ ಕಲ್ಪ ನಾತಿಶಯದಿಂದ ತಾನೂ ಅಸುಖಿಯಾಗಿ ನನ್ನನ್ನೂ ದುಃಖಿಯಾಗಿ ಮಾಡಿದ್ದಾ ಳೆ ' ಎಂದು ಹೇಳಿ, ಬಳಿಕ ಶೋಭನೆಗೆ ಉಂಟಾಗಿದ್ದ ಸಂದೇಹದ ವೃತ್ತಾಂತ ವನ್ನು ಸಂಕ್ಷೇಪವಾಗಿ ಹೇಳಿದನು. ಮಾಲತಿಯು ಮೌನವಾಗಿ ಕಣ್ಣಿನೆವೆ ಇಕ್ಕದೆ ಎಲ್ಲವನ್ನೂ ಕೇಳಿ ದಳು-ವುನಃ ಅವಳು ಮಾಲತಿಯಾಗಿರಲಿಲ್ಲ. ಅವಳ ಬಾಡಿದ ತುಟಿಗಳು ತಲತಲ ಅದುರಿದುವು-ಯಾತನಾಮಯವಾದ ದೈನ್ಯದೃಷ್ಟಿಯು ಶೂನ್ಯವಾದ ಅಂತರಿಕ್ಷದಲ್ಲಿ ಸೇರಿತು-ಮಾಲತಿಯು ನಿಂತಹಾಗೆ ಅತ್ತಳು. ಯುವ ಕನೂ ಅಳುವುದಕ್ಕೆ ತೊಡಗಿದನು. ಸಂಧ್ಯಾಕಾಲದಲ್ಲಿ ಸುಖಮಯಿ ಟ